ಅಪ್ಪನನ್ನು ಪ್ರೀತಿಯಿಂದ ತಬ್ಬಿಕೊಂಡ  ದಶ೯ನ್ ಮಗ ವಿನೀಶ್ ವಿಡಿಯೋ ನೋಡಿದ್ರೆ ಕರುಳು ಚುರ್ ಅನ್ನುತ್ತೆ

 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. 13 ಜನ ಆರೋಪಿಗಳನ್ನು ಮತ್ತೆ 5 ದಿನ ಪೊಲೀಸರು ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಆಳ ಅಗಲ ಹುಡುಕುತ್ತಿದ್ದಾರೆ. ಇವತ್ತು ವಿಶ್ವ ತಂದೆಯಂದಿರ ದಿನ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದರ್ಶನ್ ಪುತ್ರ ವಿನೀಶ್ ಸೋಶಿಯಲ್ ಮೀಡಿಯಾದಲ್ಲಿ ತಂದೆಯಂದಿರ ದಿನದ ಶುಭ ಕೋರಿದ್ದಾನೆ.

ದರ್ಶನ್‌ಗೆ ಒಬ್ಬನೇ ಮಗ ವಿನೀಶ್. ಈಗಾಗಲೇ ಆತನು ತಂದೆಯ ಸಿನಿಮಾಗಳಲ್ಲಿ ಸಣ್ಣ ಸಣ್ಣ ಝಲಕ್‌ನಲ್ಲಿ ಕಾಣಿಸಿಕೊಂಡಿದ್ದಾನೆ. ಪ್ರತಿ ಮಗುವಿಗೂ ತಂದೆಯೇ ಮೊದಲ ಹೀರೊ. ಈ ದಿನ ತಂದೆ ಮಕ್ಕಳಿಗೆ ಬಹಳ ವಿಶೇಷ. ಒಬ್ಬೊಬ್ಬರು ಒಂದೊಂದು ರೀತಿ ತಂದೆಗೆ ಶುಭಾಶಯ ಕೋರುತ್ತಾರೆ. ವಿಪರ್ಯಾಸ ಏನು ಅಂದ್ರೆ, ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ತಂದೆಗೆ ವಿನೀಶ್ ಸೋಶಿಯಲ್ ಮೀಡಿಯಾದಲ್ಲಿ ಶುಭ ಕೋರುವಂತಾಗಿದೆ. <a href=https://youtube.com/embed/rRfq2xvk1kM?autoplay=1&mute=1><img src=https://img.youtube.com/vi/rRfq2xvk1kM/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಹ್ಯಾಪಿ ಫಾದರ್ಸ್ ಡೇ ಅಪ್ಪ. ನಾನು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ತಿದ್ದೀನಿ. ಐ ಲವ್ ಯು. ಯಾವಾಗಲೂ ನೀವೇ ನನ್ನ ಹೀರೊ ಎಂದು ವಿನೀಶ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ತಂದೆ ಜೊತೆಗಿನ ಒಂದಷ್ಟು ಫೋಟೊಗಳನ್ನು ಕೊಲಾಜ್ ಮಾಡಿ ಹಾಕಿಕೊಂಡಿದ್ದಾರೆ. 15 ವರ್ಷ ವಯಸ್ಸಿನ ವಿನೀಶ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದಾನೆ.

ತಂದೆ ಪೊಲೀಸ್ ಕಸ್ಟಡಿಯಲ್ಲಿ ಇರುವ ವೇಳೆ ಕೇಳಿ ಬರುತ್ತಿರುವ ಟೀಕೆಗಳ ಬಗ್ಗೆ ಇತ್ತೀಚೆಗೆ ವಿನೀಶ್ ಪ್ರತಿಕ್ರಿಯಿಸಿದ್ದ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ. ನನ್ನ ತಂದೆ ಬಗ್ಗೆ ಕೆಟ್ಟ ಕಾಮೆಂಟ್ಸ್ ಹಾಗೂ ಅಸಭ್ಯ ಭಾಷೆಯಲ್ಲಿ ನಿಂದಿಸುತ್ತಿರುವವರಿಗೆ ಧನ್ಯವಾದ. ನನಗೆ 15 ವರ್ಷ, ನನಗೂ ಮನಸ್ಸಿದೆ, ಈ ಕಷ್ಟದ ಸಮಯದಲ್ಲಿ ನನ್ನ ತಾಯಿ ಹಾಗೂ ತಂದೆಗೆ ನಿಮ್ಮ ಬೆಂಬಲದ ಅಗತ್ಯವಿದೆ. 

ನನಗೆ ಶಾಪ ಹಾಕಿದ್ರೆ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಬರೆದುಕೊಂಡಿದ್ದ. ಆ ಪೋಸ್ಟ್ ಸಖತ್ ವೈರಲ್ ಆಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.