ಬಿಗ್ ಬಾಸ್ ಮನೆಗೆ ಬಂದಿದ್ದ ಪತ್ನಿ ಜೊತೆ ಧನರಾಜ್ ಎರಡನೇ ಮಗು ಆಫರ್, ನಿಂದು ಶುರುವಾಯಿತಾ ಎಂದ ಹೆಂಡತಿ
Jan 6, 2025, 20:31 IST

ಕನ್ನಡಿಗರ ಮೆಚ್ಚಿನ ಬಿಗ್ ಬಾಸ್’ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಸ್ಪರ್ಧಿಗಳ ಕುಟುಂಬಸ್ಥರು ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಮೋಕ್ಷಿತಾ, ಉಗ್ರಂ ಮಂಜು, ರಜತ್, ಭವ್ಯಾ, ತ್ರಿವಿಕ್ರಮ್ ಮನೆಯವರೆಲ್ಲಾ ಬಿಗ್ ಬಾಸ್‌ಗೆ ಬಂದು ಖುಷಿಪಟ್ಟಿದ್ದಾರೆ. ಇದೀಗ ಧನರಾಜ್ ಪತ್ನಿ ಪ್ರಜ್ಞಾ ದೊಡ್ಮನೆಗೆ ಕಾಲಿಟ್ಟಿದ್ದಾರೆ.
ಅಷ್ಟಕ್ಕು ಈ ವೇಳೆ, ಧನರಾಜ್ ಅವರು ಪತ್ನಿ ಬಳಿ ಎರಡನೇ ಮಗುವನ್ನು ಹೊಂದುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಹೌದು ಧನರಾಜ್ ಅವರ ಕುಟುಂಬ ದೊಡ್ಮನೆಗೆ ಬಂದಿದೆ. ಅಷ್ಟೇ ಅಲ್ಲ, ಅಲ್ಲಿ ಸಾಕಷ್ಟು ಫನ್ ಆಕ್ಟಿವಿಟಿ ನಡೆದಿದೆ. ಧನರಾಜ್ ಅವರದ್ದು ಕೂಡು ಕುಟುಂಬ ಆಗಿದ್ದು, ಮೊದಲಿಗೆ ಇಡೀ ಫ್ಯಾಮಿಲಿ ಬಿಗ್ ಬಾಸ್‌ಗೆ ಆಗಮಿಸಿ ಧನರಾಜ್ ಜೊತೆ ಹುಲಿ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ಆ ನಂತರ ಧನರಾಜ್‌ಗೆ ಧೈರ್ಯ ತುಂಬಿ ಆಲ್ ಬಿ ಬೆಸ್ಟ್ ಹೇಳಿ ಮನೆಯಿಂದ ನಿರ್ಗಮಿಸಿದ್ದಾರೆ.
<a href=https://youtube.com/embed/KzCqZC5BMAE?autoplay=1&mute=1><img src=https://img.youtube.com/vi/KzCqZC5BMAE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆ ನಂತರ ಧನರಾಜ್ ಅವರ ಪತ್ನಿ ಪ್ರಜ್ಞಾ ಆಚಾರ್ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ, ಐಶ್ವರ್ಯಾಗೆ ಯಾವಾಗಲೂ ಉತ್ತಮ ಕೊಡುತ್ತಾ ಇದ್ರಿ. ಏನು ಸಮಾಚಾರ ಅವರಿಗೆ ಲೈನ್ ಹೊಡೀತಾ ಇದ್ರಿ ಅಂತ ಡೌಂಟ್ ನನಗೆ ಎಂದು ಧನರಾಜ್‌ಗೆ ಪತ್ನಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಆ ನಂತರ ಇತರೆ ಸ್ಪರ್ಧಿಗಳನ್ನು ಪತ್ನಿಗೆ ಪರಿಚಯಿಸಿದ ಬಳಿಕ ಕೆಲ ಕಾಲ ಪತ್ನಿ ಜೊತೆ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ನನಗೆ ಎರಡನೇ ಮಗು ಬೇಕು ಎಂದಾಗ ಪ್ರಜ್ಞಾ ಅವರು ಎಂತ ಮರ್ರೆ ನೀವು ಎಂದು ನಾಚಿ ನೀರಾದರು. ಆಗ ಧನರಾಜ್, ನೀನು ರೆಡಿ ಇಲ್ವ? ಬೇಡ್ವಾ? ಎಂದು ಕೇಳಿದರು. ಈಗ ಮಾತನಾಡೋದು ಬೇಡ, ಇದನ್ನೆಲ್ಲ ಮನೆಗೆ ಬಂದು ಮಾತಾಡಬೇಕಲ್ವ ಎಂದರು ಪ್ರಜ್ಞಾ. ಆ ಬಳಿಕ ಧನರಾಜ್ ಅವರು ಸೈಲೆಂಟ್ ಆದರು. ಆ ನಂತರ ಮನೆಗೆ ಬಂದ ಮುದ್ದು ಮಗಳನ್ನು ಎತ್ತಿ ಖುಷಿಪಟ್ಟರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.