ಅನುಷಾ ರೈ ಮನೆಯಿಂದ ‌ಹೊರಹೋಗುವಾಗ ಕಣ್ಣೀರು ‌ಹಾಕಿದ ಧರ್ಮ; ಕಿಚ್ಚ ಸುದೀಪ್ ಫಿದಾ

 
ಜೋಡಿ ಅಂದ್ರೆ ಹೇಗಿರಬೇಕು ಅನ್ನೋಕೆ ಬೆಸ್ಟ್ ಎಕ್ಸಾಂಪಲ್ ಇವರು.ಬಿಗ್ ಬಾಸ್ ಕನ್ನಡ ಸೀಸನ್​ 11 ಶೋಗೆ ಕಾಲಿಡುವಾಗ ಧರ್ಮ ಕೀರ್ತಿರಾಜ್​ ಮತ್ತು ಅನುಷಾ ರೈ ಅವರು ಜೋಡಿಯಾಗಿ ಬಂದಿದ್ದರು. 50ನೇ ದಿನದಲ್ಲಿ ಅವರು ಎಲಿಮಿನೇಷನ್​ನ ಕೊನೆಯ ಹಂತಕ್ಕೂ ಜೋಡಿಯಾಗಿಯೇ ಬಂದರು. ಅಂತಿಮವಾಗಿ ಅನುಷಾ ರೈ ಅವರ ಆಟ ಅಂತ್ಯವಾಗಿದೆ. ಈ ವಾರ ಅವರು ಎಲಿಮಿನೇಟ್ ಆಗಿದ್ದಾರೆ.
ಹೌದು ನಟಿ ಅನುಷಾ ರೈ ಅವರು ‘ಬಿಗ್ ಬಾಸ್ ಕನ್ನಡ ಸೀಸನ್​ 11 ಕಾರ್ಯಕ್ರಮದಿಂದ ಎಲಿಮಿನೇಟ್​ ಆಗಿದ್ದಾರೆ. ಅವರು ಔಟ್ ಆಗಿದ್ದಕ್ಕೆ ಬಿಗ್ ಬಾಸ್ ಮನೆಯ ಇತರ ಸದಸ್ಯರಿಗೆ ಬೇಸರ ಆಗಿದೆ. ಚೈತ್ರಾ ಕುಂದಾಪುರ, ಧರ್ಮ ಕೀರ್ತಿರಾಜ್, ಶಿಶಿರ್ ಮುಂತಾದವರು ಕಣ್ಣೀರು ಹಾಕಿದ್ದಾರೆ. ಚೈತ್ರಾ ಕುಂದಾಪುರ ಅವರಂತೂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಎಲಿಮಿನೇಟ್ ಆದ ಬಳಿಕ ಯಾರಿಗೂ ಗುಡ್​ಬೈ ಹೇಳಲು ಅನುಷಾ ರೈ ಅವರಿಗೆ ಅವಕಾಶ ಸಿಗಲಿಲ್ಲ. ಹಾಗಾಗಿ ಎಲ್ಲರಿಗೂ ತುಂಬ ಬೇಸರ ಆಯಿತು. ಅನುಷಾ ಜೊತೆ ಜಾಸ್ತಿ ನಂಟು ಹೊಂದಿದ್ದ ಭವ್ಯಾ ಅವರು ಕಣ್ಣೀರು ಹಾಕಿದ್ದಾರೆ. <a href=https://youtube.com/embed/WPACpDkrvgM?autoplay=1&mute=1><img src=https://img.youtube.com/vi/WPACpDkrvgM/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಬಿಗ್ ಬಾಸ್ ಶೋಗೆ ಬರುವುದಕ್ಕೂ ಮುನ್ನ ಧರ್ಮ ಕೀರ್ತಿರಾಜ್​ ಮತ್ತು ಅನುಷಾ ರೈ ಅವರು ಪರಿಚಿತರಾಗಿದ್ದರು. ಒಟ್ಟಿಗೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಬಿಗ್ ಬಾಸ್ ಶೋಗೆ ಬರುವಾಗ ಅವರು ಜೋಡಿಯಾಗಿ ಬಂದಿದ್ದರು. ಮನೆಯ ಒಳಗೆ ಕೂಡ ಒಟ್ಟಿಗೆ ಇರುತ್ತಿದ್ದರು. ಕಾಕತಾಳೀಯ ಎಂದರೆ ಎಲಿಮಿನೇಷನ್​ ಪ್ರಕ್ರಿಯೆಯಲ್ಲೂ ಅವರು ಜೊತೆಯಲ್ಲಿ ಕೊನೇ ಹಂತ ತಲುಪಿದ್ದರು.
ಧರ್ಮ ಮತ್ತು ಅನುಷಾ ಇಬ್ಬರೂ ಎಲಿಮಿನೇಟ್ ಆಗಬಹುದು ಅಥವಾ ಒಬ್ಬರೇ ಎಲಿಮಿನೇಟ್ ಆಗಬಹುದು ಎಂದು ಸುದೀಪ್ ಹೇಳಿದಾಗ ಅವರಿಬ್ಬರನ್ನು ಇಷ್ಟಪಡುವ ಪ್ರೇಕ್ಷಕರ ಎದೆಯಲ್ಲಿ ಢವ ಢವ ಶುರುವಾಗಿತ್ತು. ಅಂತಿಮವಾಗಿ ಅನುಷಾ ರೈ ಅವರು ಔಟ್ ಆಗಬೇಕಾಯಿತು. ಧರ್ಮ ಕೀರ್ತಿರಾಜ್ ಅವರು ಅಳುತ್ತಾ ವಾಪಸ್ ಬಿಗ್ ಬಾಸ್ ಮನೆಯೊಳಗೆ ಹೋಗಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.