CSK ಸೋತ್ತಿದ್ದಕ್ಕೆ ದೋನಿ ಕಣ್ಣೀ ರು; ಕಿಲಕಿಲ ನಕ್ಕ ಕೊಹ್ಲಿ

 

ಆರ್‌ಸಿಬಿ ಪಂದ್ಯ ಗೆದ್ದ ಬಳಿಕ ಧೋನಿ ಆಟಗಾರರಿಗೆ ಹ್ಯಾಂಡ್‌ಶೇಕ್‌ ಮಾಡದೇ ಡ್ರೆಸ್ಸಿಂಗ್‌ ರೂಮ್‌ಗೆ ತೆರಳಿದ್ರು. ಇದನ್ನು ಕಂಡ ವಿರಾಟ್‌ ಕೊಹ್ಲಿ ಮಾಡಿದ್ದೇನು ಗೊತ್ತಾ? ಹೌದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌‌ಸಿಬಿ  ತಂಡವು ನಿಗದಿತ 20 ಓವರ್‌‌ಗೆ 5 ವಿಕೆಟ್‌‌ ನಷ್ಟಕ್ಕೆ 218 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು. 

ಈ ಬೃಹತ್‌ ಮೊತ್ತ ಬೆನ್ನಟ್ಟಿದ ಚೆನ್ನೈ ಸೂಪರ್‌ ಕಿಂಗ್ಸ್ ತಂಡವು ನಿಗದಿತ 20 ಓವರ್‌ಗೆ 7 ವಿಕೆಟ್‌‌ ನಷ್ಟಕ್ಕೆ 191 ರನ್‌ ಗಳಿಸುವ ಮೂಲಕ 27 ರನ್‌ ಗಳಿಂದ ಸೋಲನ್ನಪ್ಪಿತು. ಆ ಮೂಲಕ ಆರ್‌‌ಸಿಬಿ ಪ್ಲೇಆಫ್‌ ತಲುಪಿತು. ಕ್ರಿಕೆಟ್‌ನಲ್ಲಿ ಪಂದ್ಯ ಗೆದ್ದ ಮೇಲೆ ಶೇಕ್‌‌ಹ್ಯಾಂಡ್ ಮಾಡೋದು ಒಂದು ಸಂಪ್ರದಾಯ ಅಂದ್ರೆ ತಪ್ಪಾಗಲ್ಲ. ಸೋಲು ಗೆಲುವು ಅನ್ನೋದು ಆಟದಲ್ಲಿ ಕಾಮನ್‌. 

ಎರಡು ತಂಡದ ಆಟಗಾರರು ಪಂದ್ಯದ ಬಳಿಕ ಒಬ್ಬೊರಿಗೊಬ್ಬರು ಶೇಕ್‌‌ಹ್ಯಾಂಡ್ ಮಾಡುತ್ತಾರೆ. ಆದ್ರೆ ಯಾಕೋ ಧೋನಿ ನಿನ್ನೆ ಎಲ್ಲರಿಗೂ ಶೇಕ್‌ಹ್ಯಾಂಡ್ ಮಾಡದೇ ಡ್ರೆಸ್ಸಿಂಗ್‌ ರೂಂಗೆ ಹೋಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.ಧೋನಿ ಶೇಕ್‌ಹ್ಯಾಂಡ್ ಮಾಡದೇ ಇದ್ದಿದ್ದನ್ನು ಕಂಡ ವಿರಾಟ್ ಕೊಹ್ಲಿ ಚೆನ್ನೈ ಡ್ರೆಸ್ಸಿಂಗ್‌ ರೂಮ್‌ಗೆ ತೆರಳಿದರು. <a href=https://youtube.com/embed/8rIjjs8Fr8Y?autoplay=1&mute=1><img src=https://img.youtube.com/vi/8rIjjs8Fr8Y/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

 ಅಲ್ಲಿ ಧೋನಿಗಾಗಿ ಹುಡುಕುತ್ತಿರುವ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಕೊನೆಗೂ ಧೋನಿ ಬಳಿ ಹೋಗಿ ಶೇಕ್‌ಹ್ಯಾಂಡ್ ಕೊಹ್ಲಿ ಮಾತನಾಡಿಸಿ ಬಂದಿದ್ದಾರೆ.ಇಲ್ಲಿ ಮತ್ತೊಂದು ಬೇಸರದ ಸಂಗತಿ ಅಂದ್ರೆ ಇದು ಮಹೇಂದ್ರ ಸಿಂಗ್‌ ಧೋನಿಯವರ ಕೊನೆ ಪಂದ್ಯವಾಗಿತ್ತು ಅನ್ನೋ ಚರ್ಚೆ ನಡೆಯುತ್ತಿದೆ. 

ಒಂದು ವೇಳೆ ನಿಜವಾದ್ರೆ ಗೆಲುವಿನ ಸರದಾರನಿಗೆ ಸೋಲಿನ ವಿದಾಯ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹೌದು, 2019 ವಿಶ್ವಕಪ್‌‌ನಲ್ಲಿ ಧೋನಿ ರನೌಟ್ ಆಗುವ ಮೂಲಕ ತಮ್ಮ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.ಇದೀಗ ಐಪಿಎಲ್‌ನಲ್ಲೂ ಮಹೇಂದ್ರ ಸಿಂಗ್‌ ಧೋನಿಗೆ ಸೋಲಿನ ವಿದಾಯ ಸಿಕ್ಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.