ಭಾರತೀ ಅವರನ್ನು ಮದುವೆ ಆಗುವ ಮುನ್ನ ವಿಷ್ಣು ದಾದಾ ಬೇರೆ ಮದುವೆ ಆಗಿದ್ರಾ?

 
ಸಿನಿಮಾರಂಗದಲ್ಲಿ ಈ ಗಾಳಿಸುದ್ದಿ ಅಥವಾ ಗಾಸಿಪ್ ಎನ್ನುವುದು ಸಾಮಾನ್ಯವಾಗಿ ಯಾರನ್ನೂ ಬಿಟ್ಟಿಲ್ಲ. ಅದರಲ್ಲೂ ವಿಷ್ಣುವರ್ಧನ್ ಅವರಂಥ ಸೂಪರ್ ಸ್ಟಾರ್ ಆಗಿದ್ದರಂತೂ ಮುಗಿದೇ ಹೋಯ್ತು. ಯಾರ ಜೊತೆ ಕುಂತರೂ ನಿಂತರೂ, ಮಾತನಾಡಿದರೂ ಕೊನೆಗೆ ಕಣ್ಣೆತ್ತಿ ನೋಡಿದರೂ ಮುಗಿಯಿತು.
ನಟರಾದ ವಿಷ್ಣುವರ್ಧನ್, ರಾಜ್‌ಕುಮಾರ್ ಅವರೆಲ್ಲರೂ ಸ್ಟಾರ್‌ಗಳಾಗಿದ್ದ ಕಾಲದಲ್ಲಿ ಪತ್ರಕರ್ತರು ಚಿತ್ರದ ಶೂಟಿಂಗ್ ಸ್ಥಳಗಳಿಗೇ ಹೋಗಿ ಅಲ್ಲಿ ಕಲಾವಿದರ ಸಂದರ್ಶನ ತೆಗೆದುಕೊಳ್ಳುತ್ತಿದ್ದರು. ಅಂತ ಒಂದು ಸಮಯದಲ್ಲಿ ನಟ ವಿಷ್ಣುವರ್ಧನ್ ಅವರಿಗೆ ಮಾಧ್ಯಮದ ಮಿತ್ರರೊಬ್ಬರು ಸಾಕಷ್ಟು ಧೈರ್ಯ ತಂದುಕೊಂಡು ಸರ್, ನಿಮಗೆ ನಾನೊಂದು ಪ್ರಶ್ನೆ ಕೇಳಬೇಕು. ನೀವು ಸಹನಟಿಯೊಬ್ಬರನ್ನು ಮದುವೆಯಾಗಿ, ಅವರಿಗೆ ಫ್ಲಾಟ್ ಸಹ ಕೊಡಿಸಿದ್ದೀರಿ ಎಂದು ಗಾಳಿ ಸುದ್ದಿಯಿದೆ. ಇದಕ್ಕೆ ಏನಂತೀರಾ? ಎಂದು ಕೇಳಿದ್ದಾರೆ.
ಅದಕ್ಕೆ ಸ್ವಲ್ಪವೂ ಕೋಪಗೊಳ್ಳದೇ, ಅಂಜಿಕೊಳ್ಳದೇ ನಟ ವಿಷ್ಣುವರ್ಧನ್ ಅವರು ನೀವೇ ಗಾಳಿ ಸುದ್ದಿ ಅಂತ ಹೇಳ್ತಿದೀರಾ. ಮತ್ಯಾಕೆ ನನ್ನ ಕೇಳ್ತಿದೀರ? ಎಂದು ಕೇಳುತ್ತಾರೆ. ನಾನು ಈ ರೀತಿ ರೂಮರ್‌ಗಳಿಗೆ ಯಾವತ್ತೂ ಬೆಲೆ ಕೊಟ್ಟಿಲ್ಲ, ತಲೆನೂ ಕೆಡಿಸ್ಕೊಂಡಿಲ್ಲ. ನಾನು ಅದಕ್ಕೆಲ್ಲಾ ಇಮ್ಯೂನ್ ಆಗ್ಬಿಟ್ಟಿದೀನಿ ಅಂತ ಹೇಳ್ತಾರೆ. 
ಹೀಗೆ ಮಾತು ಮುಂದುವರೆಸಿದ ನಟ ವಿಷ್ಣುವರ್ಧನ್ ಅವರು ಒಳ್ಳೇ ಸ್ನೇಹನಾ ಫ್ಲಾಟ್ ತನ್ಕ ತಂದಿಟ್ಟಿದಾರೆ. ಆ ಹುಡುಗಿ ಇನ್ನೂ ಓದ್ತಾ ಇದಾಳೆ. ಸಿನಿಮಾದಲ್ಲಿ ಆಸಕ್ತಿ ಕೂಡ ಇಲ್ಲ. ಏನೋ ಒಂದ್ ಸಿನಿಮಾದಲ್ಲಿ ಚಾನ್ಸ್ ಸಿಕ್ತು ಅಂತ ಸಿನಿಮಾದಲ್ಲಿ ನಟಿಸಿದಾಳೆ ಅಷ್ಟೇ. ಮತ್ತೇನೂ ಇಲ್ಲ ಎಂದು ಹೇಳುತ್ತಾರೆ. ಅದಕ್ಕೆ ಪತ್ರಕರ್ತರು, ಹಾಗಿದ್ರೆ, ನೀವು ಈ ಸಿನಿಮಾ ನಿರ್ಮಾಪಕರಿಗೆ ಇದೇ ಹಿರೋಯಿನ್ ಹಾಕ್ಕೊಳಿ ಅಂತ ಹೇಳಿರ್ಬೇಕು, ಅದಕ್ಕೇ ಈ ವದಂತಿ ಹಬ್ಬಿರ್ಬೇಕು ಅಂತ ಹೇಳ್ತಾರೆ.
ಅದಕ್ಕೆ ಸಾಹಸಸಿಂಹ ವಿಷ್ಣು ಅವರು ನಾನು ಯಾವುದೇ ಸಿನಿಮಾಗೂ ಇದೇ ಹೀರೋಯಿನ್ ಹಾಕ್ಕೊಳ್ಳಿ, ಇದೇ ಡೈರೆಕ್ಟರ್ ಹಾಕ್ಕೊಳ್ಳಿ ಅಂತ ಹೇಳೂ ಇಲ್ಲ, ಒತ್ತಾಯ ಮಾಡಿಯೂ ಇಲ್ಲ. ಅದು ನನ್ ಕೆಲಸವೂ ಅಲ್ಲ. ಇಂತಹ ವಿಷ್ಯದಲ್ಲಿ ನಾನ್ಯಾಕೆ ತಲೆ ಹಾಕ್ಲಿ? ಇಂಥ ಒಂದು ವಿಷ್ಯ ಎಲ್ಲಿಂದ ಬಂದು ಹಬ್ಬಿತೋ ಗೊತ್ತಿಲ್ಲ. ನಿಮ್ಗೆ ಅಷ್ಟು ಕೇಳ್ಬೇಕು ಅಂತಿದ್ರೆ ನೀವು ನಮ್ ಭಾರತಿಯವ್ರನ್ನೇ ಕೇಳಿ. ಅವ್ರಿಗೆ ನನ್ ಬಗ್ಗೆ ಎಲ್ಲಾನೂ ಗೊತ್ತಿದೆ, ನಿಮ್ಗೆ ಎಲ್ಲದಕ್ಕೂ ಉತ್ತರ ಸಿಗುತ್ತೆ ಅಂದಿದ್ದರಂತೆ. ಒಟ್ಟಿನಲ್ಲಿ, ನಟ ವಿಷ್ಣುವರ್ಧನ್ ಅವರಂಥ ಮೇರು ನಟರ ಬದುಕಿನಲ್ಲೂ ಹೀಗೊಂದು ಗಾಳಿ ಸುದ್ದಿ ಬಂದಿತ್ತು. ಆದರೆ ಅದು ಅಪ್ಪಟ ಸುಳ್ಳಾಗಿತ್ತು.