100 ಜನರಿಗೆ ಆಟವಾಡಿಸಿದ ದಿವ್ಯಾ ವಸಂತ; ಅದು ಯಾವ ರೀ ತಿ ಗೊ ತ್ತಾ
Aug 8, 2024, 14:32 IST

ಕನ್ನಡದ ನಟಿಯೊಬ್ಬಳು ಮದುವೆಯಾಗಿ ಗರ್ಭಿಣಿಯಾದಾಗ ಇದು ಇಡೀ ರಾಜ್ಯವೇ ಖುಷಿಪಡುವ ವಿಚಾರ ಎಂದು ಹೇಳುವ ಮೂಲಕ ಇಂಟರ್ನೆಟ್ ನಲ್ಲಿ ಟ್ರೋಲ್ ಗೆ ಒಳಗಾಗಿದ್ದ ಟಿವಿ ನಿರೂಪಕಿ ದಿವ್ಯಾ ವಸಂತ್ ಅವರನ್ನು ಬೆಂಗಳೂರು ಪೊಲೀಸರು ಜು. 11ರಂದು ಬಂಧಿಸಿದ್ದಾರೆ. ಇವರ ವಿರುದ್ಧ ಇಂದಿರಾ ನಗರದ ಬ್ಯೂಟಿ ಪಾರ್ಲರ್ ನ ಮಾಲೀಕರೊಬ್ಬರು ಇವರ ವಿರುದ್ಧ ಕಿರುಕುಳದ ದೂರು ದಾಖಲಿಸಿದ್ದರು.
ಅದಾದ ಬಳಿಕ ತಲೆಮರೆಸಿಕೊಂಡಿದ್ದ ಇವರನ್ನು ಕೇರಳದಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ, ಖಾಸಗಿ ಸುದ್ದಿ ವಾಹಿನಿಯ ಮಾಜಿ ಸಿಇಒ ರಾಜಾನುಕುಂಟೆ ವೆಂಕಟೇಶ್, ದಿವ್ಯಾ ಅವರ ಸಹೋದರ ಸಂದೇಶ್ ವಿರುದ್ಧವೂ ದೂರು ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ, ಪೊಲೀಸರು ಅವರಿಬ್ಬರನ್ನು ವಾರದ ಹಿಂದೆಯೇ ಬಂಧಿಸಿದ್ದರು. ಇದೀಗ ದಿವ್ಯಾ ಅವರ ಬಂಧನವೂ ಆಗಿದೆ.
ದಿವ್ಯಾ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಅವರ ಮನೆ ಮೇಲೆ ಪೊಲೀಸ್ ರೇಡ್ ಆಗಿತ್ತು. ಅದರ ಸುಳಿವು ಸಿಗುತ್ತಲೇ ದಿವ್ಯಾ ಅವರು ಅವಸರದಲ್ಲಿ ಮನೆಯಲ್ಲಿದ್ದ ತಮ್ಮದೊಂದು ಕ್ಯಾಮೆರಾ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳ ಸಮೇತ ತಮ್ಮ ಕಾರಿನಲ್ಲಿ ಪರಾರಿಯಾಗಿದ್ದರೆಂದು ಹೇಳಲಾಗಿತ್ತು.ಅತ್ತ, ಮನೆ ರೈಡ್ ಮಾಡಿದ ಪೊಲೀಸರಿಗೆ ಹಲವಾರು ಮಹತ್ವದ ಸಾಕ್ಷಿಗಳು ಸಿಕ್ಕಿದ್ದವು ಎಂದು ಹೇಳಲಾಗಿದೆ.
<a href=https://youtube.com/embed/Cra_8vB5NCY?autoplay=1&mute=1><img src=https://img.youtube.com/vi/Cra_8vB5NCY/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅದರ ಆಧಾರದಲ್ಲಿ ದಿವ್ಯಾ ಅವರನ್ನು ಹುಡುಕುತ್ತಿದ್ದ ಪೊಲೀಸರಿಗೆ, ಆಕೆ ತಮಿಳುನಾಡಿಗೆ ಪರಾರಿಯಾಗಿದ್ದ ಮಾಹಿತಿ ಸಿಕ್ಕಿತ್ತು. ಆನಂತರ ಅವರು, ಕೇರಳಕ್ಕೆ ಹೋಗಿದ್ದಾಗಿ ತಿಳಿದುಬಂದಿತ್ತು. ಕಡೆಗೂ ಆಕೆ ಇರುವ ಖಚಿತ ವಿಳಾಸವನ್ನು ಪತ್ತೆ ಹಚ್ಚಿದ್ದ ಪೊಲೀಸರು, ಕಾರ್ಯಾಚರಣೆ ನಡೆಸಿ ಆಕೆಯನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮ ಲೋಕವನ್ನು ಬಿಟ್ಟು, ಖಾಸಗಿಯಾಗಿ ಯುಟ್ಯೂಬ್ ನಡೆಸುತ್ತಾ, ಶ್ರೀಮಂತರನ್ನು ಹನಿಟ್ರ್ಯಾಪ್ ಗೆ ತಳ್ಳಿ ಅವರಿಂದ ಹಣ ಸುಲಿಗೆ ಮಾಡುತ್ತಿದ್ದಾರೆಂಬ ಆರೋಪಗಳು ಇವರ ವಿರುದ್ಧ ಕೇಳಿಬಂದಿದ್ದವು. ವೈದ್ಯರು, ಇಂಜಿನಿಯರ್ ಗಳು, ಉದ್ಯಮಿಗಳು… ಹೀಗೆ ನಾನಾ ವರ್ಗಗಳ ಜನರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಅವರಿಂದ 30 - 40 ಸಾವಿರ ರೂ.ಗಳಿಂದ ಹಿಡಿದು ಲಕ್ಷಾಂತರ ರೂ.ಗಳವರೆಗೆ ವಸೂಲಿ ಮಾಡುತ್ತಿದ್ದರೆಂದು ಹೇಳಲಾಗಿದೆ.