ಡಿಕೆಶಿ ಮಗಳು ಸಾಮಾನ್ಯರಲ್ಲ, ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮುದ್ದಿನ ಮಗಳು, ಮೋಟಿವೇಶನಲ್ ಸ್ಪೀಕರ್ ಆಗಿರುವ ಐಶ್ವರ್ಯ ಶಿವಕುಮಾರ್ ಸೌಂದರ್ಯದಲ್ಲಿ ಯಾವುದೇ ಹಿರೋಯಿನ್ ಗೆ ಕಮ್ಮಿ ಇಲ್ಲ. ಹಿರಿಯ ರಾಜಕಾರಣಿ ನಮ್ಮ ರಾಜ್ಯದ ಉಪಮುಖ್ಯಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವ ಡಿಕೆ ಶಿವಕುಮಾರ್ ಅವರ ಪ್ರೀತಿಯ ಮಗಳು , ಶಿಕ್ಷಣ ಸಂಸ್ಥೆಯ ಒಡತಿ ಐಶ್ವರ್ಯ ಹೆಸರಿಗಷ್ಟೇ ಅಲ್ಲ ನಿಜವಾಗಿಯೂ ಐಶ್ವರ್ಯವಂತೆ.
ಐಶ್ವರ್ಯ ಡಿಕೆಎಸ್ ಹೆಗ್ಡೆ ಎಂಬ ಹೆಸರಿನ ಈಕೆಯ ಪ್ರೊಫೈಲ್ ನೋಡಿದರೆ ನೀವು ದಂಗಾಗಿ ಹೋಗುತ್ತೀರಿ. ಇವೆಲ್ಲಾ ಬರೀ ಶೋ ಆಫ್‌ಗಳೆಂದು ಅನ್ನಿಸುವುದೂ ಇಲ್ಲ. ಆಕೆಯ ನಡೆ ನುಡಿಯಲ್ಲಿ ಒಂದು ಖಚಿತತೆ ಇದೆ. ತನ್ನ ಗುರಿ ಹಾಗೂ ಉದ್ದೇಶಗಳ ಬಗ್ಗೆ ಸ್ಪಷ್ಟತೆ ಇದೆ. ದಾರಿಯ ಬಗ್ಗೆ ನಿಖರತೆ ಇದೆ. ಮಾತನಾಡುವುದು ತಡವರಿಸುವುದಿಲ್ಲ. ಅಸ್ಖಲಿತ ಇಂಗ್ಲಿಷ್‌ನಲ್ಲಿ ಈಕೆ ಮಾತನಾಡುತ್ತಾಳೆ.
ತನ್ನ ಕನಸುಗಳನ್ನು ಕಟ್ಟಿಕೊಡುತ್ತಾಳೆ. ಮುಖ್ಯವಾಗಿ ಈಕೆ ಎಜುಕೇಶನ್ ಹಾಗೂ ವಿಮೆನ್ ಎಂಪವರ್‌ಮೆಂಟ್- ಶಿಕ್ಷಣ ಮತ್ತು ಸ್ತ್ರೀ ಸಬಲೀಕರಣದ- ಪ್ರತಿಪಾದಕಿ. ತಮ್ಮ ಎಲ್ಲ ಮಾತುಗಳಲ್ಲಿ ಇವೆರಡಕ್ಕೆ ಪ್ರಥಮ ಸ್ಥಾನ. ತಂದೆ ಡಿಕೆಶಿ ಕಟ್ಟಿರುವ ದೊಡ್ಡ ಶಿಕ್ಷಣ ಸಂಸ್ಥೆ ಸಾಮ್ರಾಜ್ಯವನ್ನು ಯಾವುದೇ ಕೊರತೆಯಿಲ್ಲದಂತೆ ಮುನ್ನಡೆಸಿಕೊಂಡು ಹೋಗುತ್ತಿರುವ ಸ್ತ್ರೀ ಶಕ್ತಿ ಈಕೆ.
ಡಿಕೆಶಿ ಶಿಕ್ಷಣ ಸಂಸ್ಥೆಗಳ ಅದರಲ್ಲೂ ಬಹು ಪ್ರತಿಷ್ಠಿತ ಎನಿಸಿರುವ ಗ್ಲೋಬಲ್ ಇಂಜಿನಿಯರಿಂಗ್ ಕಾಲೇಜಿನ ವ್ಯವಹಾರವನ್ನು ಮಗಳು ಐಶ್ವರ್ಯಾ ನೋಡಿಕೊಳ್ಳುತ್ತಿದ್ದಾರೆ. ಬ್ಯುಸಿನೆಸ್ ನಲ್ಲಿ ಡಿಕೆಶಿ ಮಗಳಿಗೆ ಚತುರೆ, ಉದ್ಯಮಶೀಲೆ ಎಂಬ ಹೆಸರಿದೆ. ಈಕೆಯನ್ನು ಹತ್ತಿರದಿಂದ ಬಲ್ಲವರು ಈಕೆಯ ಬುದ್ಧಿವಂತಿಕೆ, ವ್ಯವಹಾರದಲ್ಲಿ ತಂತ್ರಗಾರಿಕೆ ಬಗ್ಗೆ ಮೆಚ್ಚಿ ಮಾತನಾಡುತ್ತಾರೆ.
ಇನ್ನೂ 24ರ ಹರೆಯದ ಈ ಯುವತಿ ಹೊಂದಿರುವುದು 103 ಕೋಟಿ ಆಸ್ತಿಯನ್ನ.ನೂರಾರು ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿಗಳೂ ಈಕೆಯ ಹೆಸರಿನಲ್ಲಿವೆ. ಮುಂಬಯಿಯಲ್ಲಿ ಅಪಾರ್ಟ್‌ಮೆಂಟ್ ಇದೆ. ಗುಜರಾತ್‌ನ ಒಬ್ಬ ಉದ್ಯಮಿ ಮೋದಿಯ ಸ್ನೇಹಿತ ಈ ಉದ್ಯಮಿಯ ವ್ಯವಹಾರದಲ್ಲೂ ಡಿಕೆಶಿ ಮಗಳ ಷೇರುಗಳು ಇವೆ ಎನ್ನಲಾಗುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.