ದಿನ ಒಬ್ಬೊಬ್ಬರ ಜೊತೆ ಆ ಕೆಲಸ ಮಾಡುತ್ತಿಯಾ; 'ಅದಕ್ಕೆ ಇಷ್ಟು ದಪ್ಪ ಇದೆ ಎಂದು ಅಪ್ಪಹಾಸ್ಯ ಮಾಡುತ್ತಾರೆ' ನೀತು ಶೆಟ್ಟಿ
ಆಹಾ ಈ ಬೆದರು ಬೊಂಬೆಗೆ ಎಂದು ಚಿತ್ರ ರಂಗ ಪ್ರವೇಶಿಸಿದ ಮಂಗಳೂರು ಪ್ರತಿಭೆ ನೀತು ಶೆಟ್ಟಿ.ಗಾಳಿಪಟ ಚಿತ್ರ ಪಟಪಟ ಮಾತಿನ ಮಲ್ಲಿ ನೀತು ಲೈಮ್‌ಟೈಲ್‌ನಿಂದ ದೂರ ಉಳಿದು ವರ್ಷಗಳೇ ಆಯ್ತು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕಾರಣ ಅಭಿಮಾನಿಗಳ ಸಂಪರ್ಕದಲ್ಲಿದ್ದಾರೆ. ವೈಯಕ್ತಿಕ ಜೀವನದಲ್ಲಿ ಆದ ಬದಲಾವಣೆಗಳಿಂದ ನೀತು ಆರೋಗ್ಯದ ಮೇಲೆ ಪರಿಣಾಮ ಬೀರಿದೆ.
ಇದರಿಂದ ಸ್ವಲ್ಪ ದಪ್ಪಗಾಗಿದ್ದಾರೆ ಆದರೂ ಮುಖದಲ್ಲಿ ನಮ್ಮ ನಾಯಕಿ ಕಲೆ ಎದ್ದು ಕಾಣಿಸುತ್ತಿದೆ. ಪದೇ ಪದೇ ನೀನು ದಪ್ಪ ಎಂದು ಕಾಲೆಳೆಯುವ ಜನರಿಗೆ ನೀತು ಉತ್ತರ ಕೊಟ್ಟಿದ್ದಾರೆ. ಸಾಮಾನ್ಯವಾಗಿ ನಾನು ನಿಜ ಜೀವನದಲ್ಲಿ ಒಂಟಿಯಾಗಿ ಇರುವುದಕ್ಕೆ ಇಷ್ಟ ಪಡುತ್ತೀನಿ ಯಾವಾಗಲೂ ಜನ ಜನ ಬೇಕು ಅನ್ನಲ್ಲ. ಹೀಗಾಗಿ ನನ್ನ ದೇಹದ ಬಗ್ಗೆ ಕಾಮೆಂಟ್ ಮಾಡಿದರೆ ನನ್ನ ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ.
ದೇಹ ತೂಕದಿಂದ ಅದೆಷ್ಟೋ ನೋವು ಅನುಭವಿಸಿದ್ದೀನಿ ಎಷ್ಟೋ ಕಳೆದುಕೊಂಡಿದ್ದೀನಿ ಅದನ್ನು ಯಾರು ಅರ್ಥ ಮಾಡಿಕೊಳ್ಳುವುದಿಲ್ಲ. ತುಂಬಾ ಖುಷಿಯಾಗಿದ್ದೀರಾ ಅನ್ಸುತ್ತೆ ಅದಿಕ್ಕೆ ದಪ್ಪಗಾಗಿರುವುದು ಎಂದು ನೇರವಾಗಿ ಹೇಳುತ್ತಾರೆ. ನಾನು ಹೇಗಾದರೂ ಇರುತ್ತೀನಿ ಯಾಕೆ ದಪ್ಪ ಅಂತ ಹೇಳುತ್ತೀರಾ ನಿಮ್ಮ ಮನೆ ಅನ್ನ ತಿನ್ನುವುದಿಲ್ಲ.
ದಪ್ಪ ಇದ್ದಾರೆ ಅನ್ನೋದು ಕಾಮಿಡಿ ಮಾಡುವುದಕ್ಕೆ ಫ್ರೀ ಪಾಸ್ ಮಾಡಿಕೊಂಡು ಬಿಟ್ಟಿದ್ದಾರೆ. ಹಲವು ವರ್ಷಗಳ ಹಿಂದೆ ನಾನು ಮಾಡಿಸಿಕೊಂಡು ಸರ್ಜರಿ ಅನಗತ್ಯವಾಗಿತ್ತು. ಆಗ ನನ್ನ ಫ್ಯಾಮಿಲಿ ಅಥವಾ ಹತ್ತಿರದವರು ಯಾರೂ ಸರ್ಜರಿ ಮಾಡಿಸಿಕೊಳ್ಳಬೇಡಿ ಅಂತ ಹೇಳಿಲ್ಲ ಅವರಿಗೂ ನಾನು ಬದಲಾಗಬೇಕಿತ್ತು.
ನಾನು ದಪ್ಪ ಇದ್ದೀನಿ ಅಂದ್ರೆ ಎಲ್ಲರಿಗೂ ಅವಮಾನ. ನನಗೆ ಮಧ್ಯಪಾನ ಆಗುವುದಿಲ್ಲ ನಾನು ಕುಡಿಯುವುದಿಲ್ಲ ಆದರೂ ಬಂದು ಬಿಯರ್ ಕುಡಿಯಬೇಡ ಎನ್ನುತ್ತಾರೆ.ನನ್ನ ಊಟದ ಬಗ್ಗೆನೂ ಯೋಚನೆ ಮಾಡುತ್ತಾರೆ. ನೀನು ದಪ್ಪ ಇದ್ಯಾ ಅಂದ್ರೆ ದಿನ ಯಾರ ಜೊತೆನೂ ಇದ್ಯಾ ಅಂತ ಹೇಳುವ ಜನರಿದ್ದಾರೆ.
ನನಗೆ ಬಾಯ್‌ಫ್ರೆಂಡ್ ಕೂಡ ಇರಲಿಲ್ಲ...ದಿನ ಒಬ್ಬೊಬ್ಬರ ಜೊತೆ ಮಜಾ ಮಾಡುತ್ತಿರುವ ಅನ್ನೋ ಮಾತುಗಳು ಬಂದಿದೆ ಅದು ನಿಜಕ್ಕೂ ಬೇಸರ ಆಗಿದೆ ಎಂದು ಖಾಸಗಿ ಯುಟ್ಯೂಬರ್ ಸಂದರ್ಶನದಲ್ಲಿ ನೀತು ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.