ನಟ ದಶ೯ನ್ ಎಸ್ಎಸ್ಎಲ್ಸಿ ಮಾಕ್ಸ್೯ ಎಷ್ಟು ಗೊತ್ತಾ, ನೋಡಿದ್ರೆ ಶಾ ಕ್ ಆಗೋದು ಗ್ಯಾರಂಟಿ
ಸೆಲೆಬ್ರೆಟಿಗಳ ಬಗ್ಗೆ ಪ್ರತಿಯೊಂದು ವಿಷಯವನ್ನೂ ತಿಳಿದುಕೊಳ್ಳುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ಸೆಲೆಬ್ರೆಟಿಗಳು ಕೆಲವು ವಿಷಯಗಳನ್ನು ತಮ್ಮಲ್ಲಿಯೇ ಗೌಪ್ಯವಾಗಿಟ್ಟುಕೊಂಡಿರುತ್ತಾರೆ. ಅದರಲ್ಲೂ ಅವರ ಶಿಕ್ಷಣ, ಪಡೆದ ಅಂಕಗಳ ಎಷ್ಟು ಅನ್ನೋದನ್ನು ಅಪ್ಪಿ-ತಪ್ಪಿನೂ ಬಾಯ್ಬಿಡಲ್ಲ. ಒಂದ್ವೇಳೆ ಗೊತ್ತಾದ್ರೆ ಸಾಕು ಅಭಿಮಾನಿಗಳು ಮಾತ್ರ ಸಖತ್ ಖುಷಿ.
ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗಲ್ಲ. ಅವರ ವಿದ್ಯಾಭ್ಯಾಸ ಹಿನ್ನೆಲೆ ತೀರ ರಹಸ್ಯವಾಗೇನೂ ಉಳಿದಿಲ್ಲ. ಅದೆಷ್ಟೋ ಬಾರಿ ಅವರೇ ಓದಿದ್ದೇ ಎಸ್‌ಎಸ್‌ಎಲ್‌ಸಿ ಅಂತ ಹೇಳಿಕೊಂಡಿದ್ದಾರೆ. ಹೀಗಾಗಿ ಡಿ ಬಾಸ್ ಫ್ಯಾನ್ಸ್‌ಗೆ ತಮ್ಮ ನೆಚ್ಚಿನ ನಟ 10ನೇ ತರಗತಿಯಲ್ಲಿ ಎಷ್ಟು ಮಾರ್ಕ್ಸ್ ಪಡೆದಿರಬಹುದು ಅನ್ನೋದನ್ನು ಕೆದಕುವುದಕ್ಕೆ ಹೋಗಿರಲಿಲ್ಲ. ಅದೀಗ ಮುನ್ನೆಲೆಗೆ ಬಂದಿದೆ.
ಕ್ರಾಂತಿ ಸಿನಿಮಾ ಸಮಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಚ್ಚು ಓದಿಲ್ಲ. ಓದಿದ್ದೇ 10ನೇ ತರಗತಿ ಅನ್ನೋದನ್ನು ರಹಸ್ಯವಾಗೇ ಉಳಿಸಿಕೊಂಡಿಲ್ಲ. ಸರ್ಕಾರಿ ಶಾಲೆಯ ಹಿನ್ನೆಲೆ ಇಟ್ಟುಕೊಂಡೇ ಸಿನಿಮಾ ಮಾಡುತ್ತಿರುವುದರಿಂದ ತಾವು ಓದಿ ಶಾಲೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನು ಸರ್ಕಾರಿ ಶಾಲೆ ಹುಡುಗನೇ. ಮೈಸೂರಿನಲ್ಲಿ ಓದಿದ್ದು. ಮೊದಲು ಟೆರೇಸಿಯನ್ ಸ್ಕೂಲ್‌ನಲ್ಲಿ ಓದಿದೆ. ಜೆಎಸ್‌ಎಸ್ ಒಂದು ವರ್ಷ ಓದಿದೆ. ಆ ಮೇಲೆ ವೈಶಾಲಿಯಲ್ಲಿ ಓದಿದೆ. 10ನೇ ತರಗತಿವರೆಗೂ ಮೈಸೂರಿನಲ್ಲೇ ಓದಿದ್ದು, 10ನೇ ತರಗತಿನೇ ಕೊನೆ.ಎಂದು ದರ್ಶನ್ ಹೇಳಿದ್ದರು.
ದರ್ಶನ್ ಓದಿದ್ದು ಕೇವಲ 10ನೇ ತರಗತಿ ಅನ್ನೋದೇನೋ ನಿಜ. ಆದರೆ, ಎಸ್‌ಎಸ್‌ಎಲ್‌ಸಿಯಲ್ಲಿ ದರ್ಶನ್ ಎಷ್ಟು ಅಂಕ ಪಡೆದಿದ್ದರು? ಯಾವ್ಯಾವ ವಿಷಯಕ್ಕೆ ಎಷ್ಟು ಮಾರ್ಕ್ಸ್ ಅನ್ನೋ ಕುತೂಹಲಕ್ಕೆ ಅವರೇ ತೆರೆ ಎಳೆದಿದ್ದಾರೆ. 10ನೇ ತರಗತಿಯ ನನ್ನ ಮಾರ್ಕ್ಸ್ 210. ಅವಾಗೆಲ್ಲಾ 35, 35.. ಅಲ್ಲದೆ ಹಿಂದಿಗೆ 80 ಮಾರ್ಕ್ಸ್ ಇತ್ತು. ಎಲ್ಲಾ ಒಟ್ಟು ಸೇರಿಸಿದರೆ, 210 ಮಾಕ್ಸ್. ನಮ್ಮ ಮನೆಯವರು ನನ್ನನ್ನು ಕರೆದುಕೊಂಡು ಹೋಗಿ ಮೆಕಾನಿಕಲ್ ಡಿಪ್ಲೊಮಾಗೆ ಹಾಕಿದ್ರು. ಜೆಎಸ್‌ಎಸ್ ಪಾಲಿಟಿಕ್ಸ್‌ನಲ್ಲಿ ಸೇರಿಸಿದ್ರು. 6 ತಿಂಗಳು ಹೆಂಗೋ ಕಷ್ಟ ಪಟ್ಟು ಹೋದೆ. ಆಮೇಲೆ ನನ್ನ ಕೈಯಲ್ಲಿ ಆಗಲ್ಲ ಇದು ಅಂತ ಕೈ ಮುಗಿದುಬಿಟ್ಟೆ. ಎಂದು ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಹೇಳಿಕೊಂಡಿದ್ದರು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.