ಗಾರೆ ಕೆಲಸ ಮಾಡ್ತಿದ್ದ ಮುನಿರತ್ನ ಕೋಟಿ ಕೋಟಿ ಒಡೆಯನಾಗಿದ್ದು ಹೇಗೆ ಗೊತ್ತಾ

 
 ಕಳೆದ ಕೆಲ ದಿನಗಳಿಂದ ಮುನಿರತ್ನಂ ನಾಯ್ಡು ವಿರುದ್ಧ ಜಾತಿ ನಿಂದನೆ & ಕೊಲೆ ಬೆದರಿಕೆ ಕೇಸ್ ಹಾಕಲಾಗಿದೆ. ಈ ವ್ಯಕ್ತಿ ದಲಿತರ ಕುರಿತು ಕೆಟ್ಟ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು, ಮುನಿರತ್ನಂ ನಾಯ್ಡುಗೆ ಒಂದು ಕಾಲದಲ್ಲಿ ಆಪ್ತನಾಗಿದ್ದ ವ್ಯಕ್ತಿ & ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಗಂಭೀರ ಆರೋಪ ಮಾಡಿದ್ದಾರೆ. 
ಪರಿಸ್ಥಿತಿ ಹೀಗಿದ್ದಾಗ ಮುನಿರತ್ನಂ ನಾಯ್ಡು ಕೋಟಿ ಕೋಟಿ ರುಪಾಯಿ ಆಸ್ತಿ ಮಾಡಿದ್ದು ಹೇಗೆ? 8ನೇ ಕ್ಲಾಸ್ ಫೇಲ್ ಆಗಿರುವ ಮುನಿರತ್ನಂ ನಾಯ್ಡು ಬಳಿ ಇಷ್ಟೊಂದು ದುಡ್ಡು ಬಂದಿದ್ದು ಹೇಗೆ?ಮುನಿರತ್ನಂ ನಾಯ್ಡು ಕೋಟಿ ಕೋಟಿ ಆಸ್ತಿ ಮಾಡಿದ್ದಾರೆ, ಸಾವಿರಾರು ಕೋಟಿ ಆಸ್ತಿ ಅವರ ಬಳಿ ಇದೆ ಅನ್ನೋದು ಮುನಿರತ್ನಂ ನಾಯ್ಡು ವಿರೋಧಿಗಳ ಆರೋಪ. ಅಲ್ಲದೆ ಈ ಆರೋಪಕ್ಕೆ ತಕ್ಕಂತೆ ಮುನಿರತ್ನಂ ನಾಯ್ಡು ವಿರುದ್ಧ, ಗುತ್ತಿಗೆದಾರರ ಬಳಿ ಪರ್ಸಂಟೆಜ್ ಲೆಕ್ಕದಲ್ಲಿ ಕಮಿಷನ್ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ.
 ಈ ಸಮಯದಲ್ಲೇ ಮುನಿರತ್ನಂ ನಾಯ್ಡು ಲೈಫ್ ಹಿಸ್ಟರಿ ಹಾಗೂ ಬಿಜೆಪಿ ಶಾಸಕ ಮುನಿರತ್ನಂ ನಾಯ್ಡು ಬಳಿ ಇಷ್ಟು ಕೋಟಿ ಹಣವು ಹೇಗೆ ಬಂತು? ಅನ್ನೋದರ ಬಗ್ಗೆ ಒಬ್ಬರು ಗಂಭೀರ ಆರೋಪ ಮಾಡಿದ್ದಾರೆ! ಹಾಗಾದ್ರೆ 8ನೇ ಕ್ಲಾಸ್ ಫೇಲ್ ಆದರೂ ಕೋಟಿ ಕೋಟಿ ಆಸ್ತಿ ಸಂಪದಿಸಿದ್ದರಾ ಮುನಿರತ್ನಂ ನಾಯ್ಡು ಎಂಬ ಮಾತುಗಳು ಕೇಳಿಬರುತ್ತಿವೆ. <a href=https://youtube.com/embed/FTxIwYHG9yU?autoplay=1&mute=1><img src=https://img.youtube.com/vi/FTxIwYHG9yU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಬೆಂಗಳೂರಲ್ಲಿ ಮೊದಲು ತಾಯಿಯೊಂದಿಗೆ ಸೇರಿ ಕೂಲಿ ಕೆಲಸ ಮಾಡಿಕೊಂಡು ಬದುಕಿದ್ದ ಮುನಿರತ್ನಂ ಕಥೆ ಸಿನಿಮಾ ಕಥೆ ಗಿಂತ ಇಂಟ್ರೆಸ್ಟಿಂಗ್ ಆಗಿದೆ.ಡಾನ್ ಜಯರಾಜ್ ನಿಮಗೆ ಗೊತ್ತಿರಬಹುದು, ಬೆಂಗಳೂರು ನಗರದ ಬಹುದೊಡ್ಡ ರೌಡಿಯ ಪಟ್ಟ ಪಡೆದ ನಟೋರಿಯಸ್ ಈತ. ಇದೇ ಡಾನ್ ಜಯರಾಜ್ ಬೆಂಗಳೂರಿನಲ್ಲಿ ಹಲವಾರು ರೌಡಿಗಳ ಹುಟ್ಟಿಗೂ ಕಾರಣವಾಗಿದ್ದ. ಅದೇ ರೀತಿ ಡಾನ್ ಜಯರಾಜ್ ಗ್ಯಾಂಗ್ ಜೊತೆಯಲ್ಲಿ ಇದೇ ಮಾನ್ಯ ಶಾಸಕರಾದ ಮುನಿರತ್ನಂ ನಾಯ್ಡು ಅವರ ತಮ್ಮನಾದ ಕೊರಂಗು ಕೃಷ್ಣ ಕೂಡ ಗುರುತಿಸಿಕೊಂಡಿದ್ದ. 
ಡಾನ್ ಜಯರಾಜ್ ಕಥೆಯನ್ನ ಬಾಂಬೆ ರೌಡಿಗಳು ಮುಗಿಸಿದ ನಂತರ, ಬೆಂಗಳೂರು ಭೂಗತ ಲೋಕ ಛಿದ್ರವಾಗಿ ಹೋಗಿತ್ತು. ಆಗಲೇ ನೋಡಿ ಶಾಸಕ ಮುನಿರತ್ನಂ ನಾಯ್ಡು ಅವರ ತಮ್ಮ ಕೊರಂಗು ಕೃಷ್ಣ ತನ್ನದೇ ಪಟಾಲಂ ಕಟ್ಟಿಕೊಂಡಿದ್ದು.ಶಾಸಕ ಮುನಿರತ್ನಂ ನಾಯ್ಡು ಓದಿದ್ದು ಕೇವಲ 8ನೇ ಕ್ಲಾಸ್ ಅಂತೆ. ಮುನಿರತ್ನಂ ನಾಯ್ಡು ಕುಟುಂಬ ಆಂಧ್ರದಿಂದ ವಲಸೆ ಬಂದು, ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಹೀಗಿದ್ದಾಗ ಮುನಿರತ್ನಂ ನಾಯ್ಡು ಸಹೋದರರು ಸಣ್ಣಪುಟ್ಟ ರೌಡಿಸಂ ಮಾಡಿಕೊಂಡು ಈ ಹಂತವನ್ನ ತಲುಪಿದ್ದಾರೆ ಎಂದು ಆರೋಪಿಸಿದ್ದಾರೆ ವೇಲು ನಾಯ್ಕರ್. ಹೀಗಾಗಿ ಬೆಂಗಳೂರು ಪೊಲೀಸರು ಈಗ ಮುನಿರತ್ನಂ ನಾಯ್ಡು ಆಸ್ತಿ ಹಿನ್ನೆಲೆ & ಬೇರೆ ಯಾರು ಯಾರಿಗೆಲ್ಲಾ ತೊಂದರೆ ಕೊಟ್ಟಿದ್ದಾರೆ ಎಂಬುದನ್ನ ಪರಿಶೀಲನೆ ಮಾಡಬೇಕು ಎನ್ನುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.