ರಾಘು ಮಗನ ಪರಿಸ್ಥಿತಿ ಈಗ ಹೇಗಿದೆ, ಸ್ವಂತ ತಾಯಿಯನ್ನು ಕಳೆದುಕೊಂಡ ಶೌರ್ಯನ ಸ್ಥಿತಿ ಹೇಗಾಗಿದೆ ಗೊತ್ತಾ

 

ಚಂದನವನದ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಸಾವು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲ, ಇಡೀ ಕನ್ನಡ ನಾಡಿಗೆ ಅರಗಿಸಿಕೊಳ್ಳದ ಘಟನೆಯಾಗಿದೆ. ಸದ್ಯ ಈ ಕಹಿ ಘಟನೆಯಿಂದ ಕೊಂಚ ಹೊರಬಂದಿರುವ, ನಡೆದದ್ದೆಲ್ಲವನ್ನು ಮರೆಲು ಯತ್ನಿಸುತ್ತಿರುವ ವಿಜಯ್ ರಾಘವೇಂದ್ರ ಅವರು ಇದೀಗ ಮಾಧ್ಯಮದ ಸಂದರ್ಶನದಲ್ಲಿ ಸ್ಪಂದನಾ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. 

ಹೌದು, ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು ಸ್ಪಂದನಾ ನಮ್ಮ ನಡುವೆ ಇಲ್ಲವೆಂಬ ಸತ್ಯದ ನಡುವೆ ಮೊದಲ ಬಾರಿಗೆ ಮೊನ್ನೆ ಬೆಳಗಿನ ಜಾವದ ನಿದ್ದೆಯಲ್ಲಿ ಮೊದಲ ಬಾರಿಗೆ ಕನಸಿಗೆ ಬಂದಿದ್ದಳು. ಅದು ಕೂಡ ಮಗ ಶೌರ್ಯ ಹೋಮ್‌ವರ್ಕ್‌ ಮಾಡಿದ್ದಾನೋ ಇಲ್ಲವೋ ನೋಡಿ ಎಂದು ವಿಚಾರಿಸಿದ್ದಳು. ಶಾಲೆಯ ಪೇರೆಂಟ್ಸ್‌ ಗ್ರೂಪ್‌ನಲ್ಲಿ ಹೋಮ್‌ವರ್ಕ್‌ ನೋಡಿ ಶೌರ್ಯ ಜಿಯೋಗ್ರಫಿ ಹೋಮ್‌ವರ್ಕ್‌ ಮಾಡಿದ್ದಾನೋ ಇಲ್ಲವೋ ನೋಡಿ ಎಂದಳು. 

ಆಗ ಬೆಳಗ್ಗೆ ಎದ್ದು ಶೌರ್ಯನಿಗೆ ಹೋಮ್‌ವರ್ಕ್‌ ಮಾಡಿದ ಬಗ್ಗೆ ವಿಚಾರಿಸಿದಾಗ ಎಲ್ಲವನ್ನೂ ಮಾಡಿದ್ದಾಗಿ ಹೇಳಿದನು. ಆಗ ಮಗ ನೀಡಿದ ಉತ್ತರವನ್ನು ಯಾರಿಗೆ ಹೇಳಬೇಕು ಎಂಬುದೇ ಗೊತ್ತಾಗಲಿಲ್ಲ ಎಂದು ವಿಜಯ್ ಭಾವುಕರಾಗಿದ್ದಾರೆ. ವಿಜಯ್ ಅವರ ಈ ಮಾತು ಕೇಳಿದ್ರೆ ಎಂತವರ ಕರುಳು ಚುರುಕ್ ಅನಿಸುತ್ತದೆ. ಅಲ್ಲದೆ ತಮ್ಮ ಮಗನ ಬಗ್ಗೆ ಸ್ಪಂದನಾ ಏನು ಆಸೆ ಇಟ್ಟುಕೊಂಡಿದ್ದಳು ಎಂಬುದರ ಬಗ್ಗೆ ಮಾತನಾಡಿದ ಅವರು ‘ಸ್ಪಂದನಾಳಿಗೆ ತನ್ನ ಮಗನಿಗೆ ಬಾಸ್ಕೆಟ್‌ ಬಾಲ್‌ ಪ್ಲೇಯರ್‌ ಮಾಡುವುದು ಹಾಗೂ ನಟನಾಗಿ ಮಾಡಬೇಕು ಎಂಬ ಆಸೆ ಇತ್ತು.  <a href=https://youtube.com/embed/J21l01eclGg?autoplay=1&mute=1><img src=https://img.youtube.com/vi/J21l01eclGg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇದನ್ನು ಕಲಿಸಲು ಆಕೆ ಸದಾ ಅವನಿಗೆ ಪ್ರೇರಣೆ ಕೊಡುತ್ತಿದ್ದಳು. ಈಗ ಅವಳಿಲ್ಲದ ಮನೆಯಲ್ಲಿ ಮಗನ ಭವಿಷ್ಯವನ್ನು ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಪ್ರತಿದಿನ ನಾನು ಮತ್ತು ನನ್ನ ಮಗ ಬೆಳಗ್ಗೆ ಒಂದು ಸುತ್ತಿನ ಮಾತುಕತೆ ಮಾಡಿಕೊಂಡೇ ಮುಂದಿನ ಹೆಜ್ಜೆಯನ್ನು ಇಡುತ್ತಿದ್ದೇವೆ. ಶೌರ್ಯ ಈಗ ಅಮ್ಮ ಇಲ್ಲವೆಂಬ ಖಾಲಿತನವನ್ನು ಅನುಭವಿಸುತ್ತಿದ್ದಾನೆ. ಅವನನ್ನು ಕೆದಕಿ ಮಾತನಾಡಿಸುವವರೆಗೂ ಮಾತನಾಡುವುದಿಲ್ಲ. 

ಸ್ಪಂದನಾಳಂತೆಯೇ ಅವನಿಗೂ ಗಟ್ಟಿ ಮನಸ್ಸಿನ ಸ್ವಭಾವವಿದೆ ಆದರೆ ಅಮ್ಮನ ಸಾವಿನಿಂದ ಅವನು ಬಹಳ ಕುಸಿದುಹೋಗಿದ್ದಾನೆ. ಅವನನ್ನು ಮೊದಲಿನಂತೆ ಚುರುಕಾಗಿ ಮಾಡಿ ಮೊದಲಿನ ಶೌರ್ಯನನ್ನಾಗಿಸುವುದೇ ನನ್ನ ಬದುಕಿನ ದ್ಯೆಯ ಎಂದು ವಿಜಯ್ ರಾಘವೇಂದ್ರ ನುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.