ಹಿಂದೂ ದೇವರ ಮೇಲೆ ಅಪಾರ ಭಕ್ತಿ ಹೊಂದಿರುವ ಕಾಂಗ್ರೆಸ್ ಸ್ಪೀಕರ್ ಯು.ಟಿ ಖಾದರ್ ದೇವಾಲಯಕ್ಕೆ ಬಂದು ಹೇಳಿದ್ದೇನು ಗೊತ್ತಾ

 

ಮಧ್ಯರಾತ್ರಿಯ ಚಂದ್ರೋದಯದಲ್ಲಿ ಅವತಾರವೆತ್ತಿದ ಶ್ರೀಕೃಷ್ಣನ ದರ್ಶನವನ್ನು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಬುಧವಾರ ರಾತ್ರಿ ಯಾವುದೇ ಸದ್ದುಗದ್ದಲವಿಲ್ಲದೆ ಪಡೆದು ಸಂಭ್ರಮಿಸಿದರು.
ಬುಧವಾರ ಬೆಳಗ್ಗೆ ಬೆಂಗಳೂರಿನ ಕಾರ್ಯಕ್ರಮ ಪೂರೈಸಿ ಮಂಗಳೂರಿಗೆ ಬಂದಿಳಿದು ಕ್ಷೇತ್ರದ ವಿವಿಧೆಡೆ ಶ್ರೀಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಪೀಕರ್‌ ಖಾದರ್‌ ಕಡಿಯಾಳಿಯ ಟೈಗರ್‌ ಫ್ರೆಂಡ್ಸ್‌ ತಂಡದ ಹುಲಿ ವೇಷ ಪ್ರದರ್ಶನವನ್ನು ವೀಕ್ಷಿಸಿದ್ದರು.

ಶ್ರೀಕೃಷ್ಣಮಠದ ಮಧ್ವ ಸರೋವರದಲ್ಲಿ ಕೈ ಕಾಲು ತೊಳೆದು ಮಠದೊಳಗೆ ಪ್ರವೇಶಿಸಿ ಶ್ರೀಕೃಷ್ಣ ಮುಖ್ಯ ಪ್ರಾಣ, ಗರುಡ ದೇವರ ದರ್ಶನ ಪಡೆದರು. ಸತ್ಯನಾರಾಯಣ ಭಟ್‌ ಸ್ವಾಗತಿಸಿ, ಶಾಲು ಹೊದಿಸಿ ಗೌರವಿಸಿ, ಶ್ರೀಕೃಷ್ಣ ಪ್ರಸಾದ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ಯು ಟಿ ಖಾದರ್, ಮಧ್ಯರಾತ್ರಿಯಲ್ಲಿ ಅವತಾರವೆತ್ತಿದ ಶ್ರೀಕೃಷ್ಣನ ದರ್ಶನ ಭಾಗ್ಯ ನನಗೆ ಮಾತ್ರ ಸಿಕ್ಕಿರುವುದು ದೇವರು ಕರುಣಿಸಿದ ಅವಕಾಶ. ಸರ್ವ ಧರ್ಮ ಸಮಭಾವ ಎಲ್ಲರಲ್ಲಿರಲಿ. 

ಅನ್ಯ ಧರ್ಮದ ಪ್ರೀತಿ, ಗೌರವ ಅತಿ ಮುಖ್ಯ. ಶ್ರೀಕೃಷ್ಣಮಠಕ್ಕೆ ಭೇಟಿ ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲೊಂದು ಎಂದು ತಿಳಿಸಿದರು. ದಕ್ಷಿಣ ಕನ್ನಡದಿಂದ ಉಡುಪಿ ಜಿಲ್ಲೆಗೆ ಪ್ರವಾಸ ಮಾಡಿದ ಅವರು, ಉಡುಪಿಯ ಟೈಗರ್ ಫ್ರೆಂಡ್ಸ್ ವತಿಯಿಂದ ಹಮ್ಮಿಕೊಂಡ ದ್ವಿತೀಯ ವರ್ಷದ ಉಡುಪಿದ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಅಲ್ಲಿಂದ ನೇರ ಉಡುಪಿ ಶ್ರೀ ಕೃಷ್ಣ ಮಠಕ್ಕೆ ತೆರಳಿದರು. <a href=https://youtube.com/embed/RHEBjD45GVQ?autoplay=1&mute=1><img src=https://img.youtube.com/vi/RHEBjD45GVQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಈ ಕಾರ್ಯಕ್ರಮಕ್ಕೂ ಮೊದಲು ಖಾದರ್ ಅವರು ಬಿಡುವಿಲ್ಲದೆ ಅನೇಕ ಕಡೆಗಳಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಾರಂಭಗಳಲ್ಲಿ ಭಾಗವಹಿಸಿದ್ದರು.
ಗುರುವಾರದಂದು ಸಹ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡಿದ ಅವರು ಸಂಜೆ ವೇಳೆ ಸ್ವಕ್ಷೇತ್ರವಾಗಿರುವ ಉಳ್ಳಾಲ ವ್ಯಾಪ್ತಿಯ ತೊಕ್ಕೊಟ್ಟುವಿನಲ್ಲಿ ನಡೆದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

ಅದೇ ರೀತಿ ತೊಕ್ಕೊಟ್ಟು ಫ್ಲೈ ಓವರ್ ಬಳಿ ಸೆವೆನ್ ಬ್ರದರ್ಸ್ ತೊಕ್ಕೊಟ್ಟು ವತಿಯಿಂದ ಹಮ್ಮಿಕೊಂಡ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲೂ ಭಾಗವಹಿಸಿ ಆನಂದ ಪಟ್ಟರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.