ಸದನದಲ್ಲಿ ಯು.ಟಿ ಖಾದರ್ ತಲೆಕೆಡಿಸಿಕೊಳ್ಳುವಂತೆ ಮಾಡಿದ ನಯನಾ ಮೋಟ್ಟಮ್ಮ, ಯಾವ ಬೇಡಿಕೆ ಇಟ್ಟಿದ್ದಾರೆ ಗೊತ್ತಾ
ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೀಸಲು ಕ್ಷೇತ್ರವಾದ ಮೂಡಿಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿ, ಸದ್ಯ ಮೂಡಿಗೆರೆಯ ನೂತನ ಶಾಸಕರಾದ ನಯನಾ ಮೋಟಮ್ಮ ಅವರು ಮೊದಲ ಬಾರಿ ಶಾಸಕಿಯಾಗಿ ಸದನ ಪ್ರವೇಶಿಸಿ ಮೂಡಿಗೆರೆ ಕ್ಷೇತ್ರದಲ್ಲಿ ಉಂಟಾಗುತ್ತಿರುವ ನೀರಿನ ಸಮಸ್ಯೆ ಕುರಿತಾಗಿ ಮಾತನಾಡಿದ್ದಾರೆ.
ಹೌದು, ಈ ಬಾರಿ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಬರೋಬ್ಬರಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಬಾರಿಯ ವಿಶೇಷತೆ ಎಂದರೆ ಮೊದಲ ಬಾರಿಗೆ ಟಿಕೆಟ್ ಪಡೆದಿದ್ದ ಮಹಿಳಾ ಮಣಿಗಳು ಗೆದ್ದು ಕಮಾಲ್ ಮಾಡಿದ್ದಾರೆ. ಅದರಲ್ಲಿ ನಯನ ಮೋಟಮ್ಮ ಕೂಡ ಒಬ್ಬರು. ನಯನ ಮೋಟಮ್ಮ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ದಲಿತವಾದಿ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ನಯನ ಅವರು ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ವಿರೋಧದ ನಡುವೆಯೂ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಗೆದ್ದು ಬಂದಿದ್ದಾರೆ.
ಹಾಗಾಗಿ ಇತ್ತೀಚೆಗೆ ನಡೆದ ವಿಧಾನಸಭಾ ಕಲಾಪದಲ್ಲಿ ಭಾಗವಹಿಸಿ ಮೂಡಿಗೆರೆ ಕ್ಷೇತ್ರದಲ್ಲಿ ಹೇಮಾವತಿ ಹಾಗೂ ಭದ್ರಾ ನದಿಯಿದೆ ಅಲ್ಲದೆ ಭದ್ರಾ ನದಿಗೆ ಲಕ್ಯಾ ಡ್ಯಾಮ್ ಕೂಡ ಇದೆ.
ಆದರೆ ಅಲ್ಲಿನ ನೀರನ್ನ ಮಂಗಳೂರಿಗೆ ಸರಬರಾಜು ಮಾಡಲಾಗ್ತಿದೆ. ನಮ್ಮ ಮೂಡಿಗೆರೆ ಕ್ಷೇತ್ರದ ನೀರು ನಮಗೆ ಸಿಗದೆ ಬೇರೆ ಕಡೆ ಹೋಗುತ್ತಿರುವುದು ಬೇಸರದ ಸಂಗತಿ. ಹಾಗಾಗಿ ಈಗ ಮಾಡಿರುವ ಜೇಜೆಎಂ ಪ್ಲಾನ್ ಪ್ರಕಾರ ಇಲ್ಲಿನ ನೀರನ್ನು ನಮಗೆ ನೀಡಬೇಕೆಂದು ಕೇಳಿ ಕೊಂಡಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.