ಮುದ್ದಾದ ಭಾಗ್ಯಶ್ರೀ ಅವರು ಡ್ರೋನ್ ಪ್ರತಾಪ್ ಅವರಿಗೆ ಹೇಳಿದ್ದೇನು ಗೊತ್ತಾ, ಬೆಚ್ಚಿಬಿದ್ದ ಡ್ರೋನ್

 

ಬಿಗ್ ಬಾಸ್ ಕನ್ನಡ ಸೀಸನ್10ರ ಮೊದಲನೇ ವಾರದಲ್ಲಿ ತಮಾಷೆ ಮಾಡುತ್ತಾ ಎಲ್ಲರ ಕಾಲೆಳೆಯುತ್ತಿದ್ದ ತುಕಾಲಿ ಸಂತು ಅವರಿಗೆ ನೇರವಾಗಿಯೇ ಚಾಟಿ ಬೀಸಿ ಕಿಚ್ಚ ಸುದೀಪ್ ಮಾತಿನಲ್ಲಿ ತಿವಿದಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್ ಗಾಗಿ ಸುದೀಪ್ ಹಾಡೊಂದನ್ನು ಪ್ಲೇ ಮಾಡಿಸಿ ರಾಂಪ್ ವಾಕ್ ಮಾಡುವಂತೆ ಹೇಳಿದ್ದು, ತನಿಷಾ ಮತ್ತು ಸಂಗೀತಾ ಜೊತೆ ಸಖತ್ತಾಗಿ, ಹೊಸ ಜೋಶ್ ನಲ್ಲಿ ಪ್ರತಾಪ್ ರಾಂಪ್ ವಾಕ್ ಮಾಡಿದ್ದಾರೆ.

ಡಿಪ್ಲೋಮ್ಯಾಟಿಕ್ ಹಾಗೂ ಊಸರವಳ್ಳಿ ಎಂಬ ಶಬ್ದಕ್ಕೆ ಭಾಗ್ಯಶ್ರೀ ಅವರನ್ನು ಟಾರ್ಗೆಟ್ ಮಾಡಲಾಯ್ತು. ಆದರೆ, ಭಾಗ್ಯಶ್ರೀ ಅದನ್ನು ಒಪ್ಪಿಕೊಳ್ಳದೇ ಸಮಜಾಯಿಸಿ ಕೊಡಲು ಹೋಗಿ ತಾವೇ ತಗಲಾಕಿಕೊಂಡರು. ಬಳಿಕ, ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದರು. ಬಳಿಕ, ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದರು. ಸ್ನೇಹಿತ್ ಕ್ಯಾಪ್ಟನ್ಸಿ ಬಗ್ಗೆ ಕೆಲವರಿಂದ ಅಪಸ್ವರ ಬಂತು. 

ಆದರೆ, ಸ್ನೇಹಿತ್ ತಮ್ಮ ಬಗ್ಗೆ ಬಂದ ಎಲ್ಲ ಆಪಾದನೆಗಳನ್ನು ಒಪ್ಪಿಕೊಂಡು ಕ್ಷಮೆ ಕೇಳಿ, ತಮಗೆ ಕ್ಯಾಪ್ಟನ್‌ಶಿಪ್ ಅನುಭವ ಇಲ್ಲದ್ದರಿಂದ ಅದನ್ನು ನಿಭಾಯಿಸುವುದರಲ್ಲಿ ಸಾಕಷ್ಟು ತಪ್ಪು ಎಸಗಿದ್ದು ಹೌದು ಎಂದು ಒಪ್ಪಿಕೊಂಡು ಹಲವರ ಪ್ರೀತಿ-ಮೆಚ್ಚುಗೆ ಗಳಿಸಿದರು. ಒಟ್ಟಿನಲ್ಲಿ, ಅನಿರೀಕ್ಷಿತ ಮಾತುಕತೆಗಳ ಮೂಲಕ ನಿನ್ನೆಯ ಕಚ್ಚನ ಪಂಚಾಯಿತಿ ಕೊನೆಯವರೆಗೆ ಕುತೂಹಲ ಉಳಿಸಿಕೊಳ್ಳುವಲ್ಲಿ ಸಫಲವಾಯ್ತು.

ಸ್ಪರ್ಧಿಗಳೆಲ್ಲರೂ ಒಂದು ವಾರ ಮಾಡಿರುವ ಸರಿ-ತಪ್ಪುಗಳ ವಿಶ್ಲೇಷಣೆ ಬಳಿಕ, ಒಬ್ಬಬ್ಬರಿಂದಲೂ ಆದ ತಪ್ಪುಗಳಿಗೆ ಅವರಿಗೆಲ್ಲ ಡೈರೆಕ್ಟ್ ಆಗಿ ಅಥವಾ ಇಂಡರೆಕ್ಟಾಗಿ ಶಿಕ್ಷೆ ದೊರಕಿದೆ. ಅದು ಅಲ್ಲಿರುವ ಸ್ಪರ್ಧಿಗಳಲ್ಲಿ ಕೆಲವರಿಗೆ ಗೊತ್ತಾಗಿಲ್ಲ ಅಷ್ಟೇ. ತನಿಶಾ, ಸಂಗೀತಾ ಮತ್ತು ಕಾರ್ತಿಕ್ ಅವರಿಗೆ ಬಟ್ಟೆಯನ್ನೇ ಕೊಟ್ಟಿಲ್ಲ. ಕಾರಣ, ಅವರು ಮೂವರೂ ಸೇರಿ ಕಿಚನ್‌ನಲ್ಲಿ ಟೊಮ್ಯಾಟೋವನ್ನು ಕದ್ದು ತಿಂದಿದ್ದಾರೆ. 

ಹೀಗಾಗಿ ಅವರಿಗೆ ಬಟ್ಟೆ ಸಿಕ್ಕಿಲ್ಲ ಎಂದು ಕಿಚ್ಚ ಸೀಕ್ರೆಟ್ 
ರಿವೀಲ್ ಮಾಡಿದರು. ಬಟ್ಟೆ ಕೊಡದೇ ಬಿಗ್ ಬಾಸ್‌ನಲ್ಲಿ ತನಗೆ ಅವಮಾನ ಮಾಡಿದ್ದಾರೆ ಎಂಬ ತನಿಶಾ ಮಾತಿಗೆ ಬಿಗ್ ಬಾಸ್ ಪರವಾಗಿ ಈ ಮೂಲಕ ಟಾಂಗ್ ಕೊಟ್ಟರು ಕಿಚ್ಚ ಸುದೀಪ್ ಅವರು. ಒಟ್ಟಿನಲ್ಲಿ ಈಗ ನಟಿ ಭಾಗ್ಯಶ್ರೀ ಮೊದಲಿನಂತೆ ಡ್ರೋನ್ ಪ್ರತಾಪ್ ಬಳಿ ಮಾತನಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.