ವಾಸುಕಿ ವೈಭವ್ ಹೆಂಡತಿ ಮಾಡುತ್ತಿರುವ ಕೆಲಸ ಏನು ಗೊತ್ತಾ, ಕಣ್ಣೀರಿಟ್ಟ ಫ್ಯಾನ್ಸ್
ಕನ್ನಡ ಸಿನಿಮಾಗಳಲ್ಲಿ ಜನಪ್ರಿಯತೆ ಪಡೆದೆರುವ ಗಾಯಕ ವಾಸುಕಿ ವೈಭವ್ ಅವರು ಇಂದು ವಿವಾಹವಾಗುತ್ತಿದ್ದಾರೆ. ತನ್ನ ಗೆಳತಿ ಬೃಂದಾ ವಿಕ್ರಮ್ ಅವರನ್ನು ವಿವಾಹವಾಗಿದ್ದಾರೆ. ಈ ಕುರಿತು ಅವರು ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಹೊಸದೊಂದು ಪ್ರಯಾಣ ಆರಂಭವಾಗಿದೆ.
ನಿಮ್ಮೆಲ್ಲರ ಹಾರೈಕೆ, ಆಶೀರ್ವಾದವಿರಲಿ ಎಂದು ಬರೆದು ತನ್ನ ಮದುವೆಯ ಸುದ್ದಿ ಹಂಚಿಕೊಂಡಿದ್ದಾರೆ. ವಾಸುಕಿ ವೈಭವ್ ಅವರು ಇತ್ತೀಚೆಗೆ ಬಿಡುಗಡೆಯಾದ ಟಗರು ಪಲ್ಯದಲ್ಲಿ ನಗರದ ಪೆದ್ದು ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ನಟನಾಗಿಯೂ ಗುರುತಿಸಿಕೊಂಡಿದ್ದರು.
ಇಂದು ವಾಸುಕಿ ವೈಭವ್- ಬೃಂದಾ ವಿಕ್ರಮ್ ಶುಭವಿವಾಹವೂ ಸರಳವಾಗಿ ಸಂಪ್ರದಾಯ ಬದ್ಧವಾಗಿ ನಡೆಯಲಿದೆ. ಇವರಿಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದೀಗ ವಿವಾಹವಾಗುತ್ತಿದ್ದಾರೆ. ರಂಗಭೂಮಿ ಹಿನ್ನಲೆಯ ಬೃಂದಾ ವಿಕ್ರಮ್ ಅವರು ಮ್ಯಾನ್ ಆಫ್ ದಿ ಮ್ಯಾಚ್ ಎಂಬ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಈ ಚಿತ್ರದಲ್ಲಿ ವಾಸುಕಿ ವೈಭವ್ ಕೂಡ ಇದ್ದಾರೆ. ಬೃಂದಾ ವಿಕ್ರಮ್ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ. ನನ್ನ ಜೀವನದ ಪ್ರೇಮಿಯನ್ನು ಮದುವೆಯಾಗುತ್ತಿದ್ದೇನೆ. ಇದಕ್ಕಿಂತ ಉತ್ತಮವಾದದ್ದು ಏನಿದೆ. ಇದು ಎಂದೆಂದಿಗೂ ಅತ್ಯುತ್ತಮ ಫೀಲಿಂಗ್ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಾಸುಕಿ ವೈಭವ್ ಹೇಳಿದ್ದರು. ಅವರು ಇತ್ತೀಚಿನವರೆಗೆ ತನ್ನ ಮದುವೆಯ ವಿಚಾರವನ್ನು ಗುಟ್ಟಾಗಿಯೇ ಇಟ್ಟಿದ್ದರು.
ಆಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್‌ನಲ್ಲಿ ಟಗರು ಪಲ್ಯದ ಚರ್ಚೆ ನಡೆಯುತ್ತಿರುವಾಗ ನಟಿ ತಾರಾ ಅವರು ಬಾಯಿತಪ್ಪಿ ವಾಸುಕಿ ವೈಭವ್ ಮದುವೆ ವಿಚಾರ ಹೇಳಿದ್ದರು. ಬೃಂದಾ ಅವರು ರಂಗಭೂಮಿ ಹಿನ್ನೆಲೆಯವರು. ಶಿಕ್ಷಕಿ. ಮಾಧ್ಯಮವೆಂದರೆ ಅವರಿಗೆ ಯಾವಾಗಲೂ ನಾಚಿಕೆ. ಹೀಗಾಗಿ ನಾವು ಮದುವೆ ವಿಚಾರವನ್ನು ಖಾಸಗಿಯಾಗಿ ಇಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.
ಕಳೆದ ವಾರ ವಾಸುಕಿ ವೈಭವ್ ಕುಟುಂಬವು ಚಪ್ಪರ ಪೂಜೆ ಮಾಡಿ ಮದುವೆಗೆ ಸಿದ್ಧತೆ ನಡೆಸಿತ್ತು. ನನ್ನ ಕಸಿನ್‌ಗಳು, ಸಂಬಂಧಿಕರು, ಎಲ್ಲರೂ ಮನೆಯಲ್ಲಿದ್ದಾರೆ. ಕುಟುಂಬದ ಎಲ್ಲರೂ ಸುತ್ತಮುತ್ತ ಇದ್ದಾಗ ತುಂಬಾ ಖುಷಿಯಾಗುತ್ತದೆ. ನಾವು ಮದುವೆಗೆ ಸಂಬಂಧಪಟ್ಟಂತೆ ಯಾವುದೇ ರಿಸೆಪ್ಷನ್ ಅಥವಾ ದೊಡ್ಡ ಕಾರ್ಯಕ್ರಮ ನಡೆಸುತ್ತಿಲ್ಲ. ಹತ್ತಿರದವರಿಗೆ ಮತ್ತು ಆತ್ಮೀಯರಿಗೆ ಮಾತ್ರ ಆಹ್ವಾನ ನೀಡುತ್ತೇವೆ.
ನಾವಿಬ್ಬರು ಇಷ್ಟಪಡುವಂತೆ ಸಾಂಪ್ರದಾಯಿಕವಾಗಿ ಮತ್ತು ಸರಳವಾಗಿ ವಿವಾಹವಾಗುತ್ತೇವೆ ಎಂದು ವಾಸುಕಿ ವೈಭವ್ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಈ ಹಿಂದೆಯೇ ಹೇಳಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ