ರಮ್ಯಾ ಕೃಷ್ಣ ಅವರ ಗಂಡ ಯಾರು ಗೊತ್ತಾ, ವಯಸ್ಸು 53 ಆದರೂ ಕೂಡ ಸಕ್ಕತ್ ಡಿಮಾಂಡ್
ನಟಿ ರಮ್ಯಾ ಕೃಷ್ಣ ಅವರ ಹೆಸರು ಕೇಳುತ್ತಿದ್ದ ಹಾಗೆ ಅವರ ಮನೋಜ್ಞ ಅಭಿನಯ ನೆನಪಾಗುತ್ತದೆ. ಎಂತಹ ಪಾತ್ರವನ್ನು ನೀಡಿದರು ಅದರೊಳಗೆ ಲೀಲ ಜಾಲವಾಗಿ ನಟಿಸಿ ಪರಕಾಯ ಪ್ರವೇಶ ಮಾಡುವಂತಹ ನಮ್ಮ ದಕ್ಷಿಣ ಭಾರತ ಕಂಡಂತಹ ಅಪ್ರತಿಮ ಸುಂದರಿ ಹಾಗೂ ಅಭಿನೇತ್ರಿ.
ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಎಲ್ಲ ಭಾಷೆಗಳಲ್ಲಿ ತಮ್ಮ ಕಣ್ಣಂಚಿನ ಅಭಿನಯದ ಮೂಲಕ ಸಿನಿಮಾಗಳಲ್ಲಿ ಅಭಿನಯಿಸಿ ಕೋಟ್ಯಂತರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವಂತಹ ನಟಿ ರಮ್ಯಾ ಕೃಷ್ಣ ಕೇವಲ ನಾಯಕಿ ಪಾತ್ರವಲ್ಲದೆ ಪೋಷಕ ಪಾತ್ರಗಳನ್ನೂ ನೆಗೆಟಿವ್ ಪಾತ್ರಗಳನ್ನೂ ಮಾಡಿ ಸೈ ಎನಿಸಿಕೊಂಡಿರುವ ನಟಿ.
ಹೀಗೆ ಸಿನಿಮಾ ರಂಗಕ್ಕೆ ಕಾಲಿಟ್ಟ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಅಷ್ಟೇ ಬೇಡಿಕೆಯನ್ನು ಹೊಂದಿರುವಂತಹ ಈ ನಟಿ ತಮ್ಮ 33 ನೇ ವರ್ಷಕ್ಕೆ 2003 ರಲ್ಲಿ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕರಾದಂತಹ ಕೃಷ್ಣ ವಂಶಿ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ಮುದ್ದಾದ ಜೋಡಿಗೆ ರಿತ್ವಿಕ್ ಎನ್ನುವ ಒಂದು ಗಂಡು ಮಗ ಕೂಡ ಇದ್ದು ಹಲವಾರು ವರ್ಷಗಳ ಕಾಲ ಸುಖ ಸಂಸಾರ ನಡೆಸಿ ಮತ್ತೊಬ್ಬರಿಗೆ ಮಾದರಿಯಾಗುವಂತೆ ಬದುಕುತ್ತಿದ್ದಾರೆ. ಹೀಗೆ ಬಾಹುಬಲಿ, ರಂಗ ಮಾರ್ತಾಂಡ, ಲೈಗರ್, ಬಂಗಾರ ರಾಜು, ಹಲೋ, ಜೈಲರ್, ಅಂಜನಿಪುತ್ರ, ರಿಪಬ್ಲಿಕ್, ರೋಮ್ಯಾಂಟಿಕ್ ನಂತಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ತಮ್ಮದೇ ಆದ ವಿಶಿಷ್ಟ ನಟನೆಯ ಚಾಪನ್ನು ಗಿಟ್ಟಿಸಿಕೊಂಡಿರುವ ಈ ನಟಿಗೆ ಸದ್ಯ 52 ವರ್ಷ ವಯಸ್ಸಾಗಿದೆ. ಆದರೂ ಚಿರಯವ್ವನೆಯಂತೆ ದೇಹವನ್ನು ಆರೋಗ್ಯವನ್ನು ಕಾಪಾಡಿಕೊಂಡುಬಂದಿರುತ್ತಾರೆ.