ರಾಜ್ಯದ ಮುಂದಿನ ಸಿಎಂ ಯಾರು ಗೊತ್ತಾ, ಪಫೆ೯ಕ್ಟ್ ಭವಿಷ್ಯ ನುಡಿದ ಶ್ವಾನ

 

 ಕರ್ನಾಟಕ ವಿಧಾನಸಭಾ ಚುನಾವಣೆಗೆ 15 ದಿನ ಮಾತ್ರ ಬಾಕಿ ಉಳಿದಿದ್ದು, ಸಿಎಂ ಸ್ಥಾನಕ್ಕಾಗಿ ಮೂರು ಪಕ್ಷಗಳು ಶತಾಯ ಗತಾಯ ಪ್ರಯತ್ನಿಸುತ್ತಿವೆ. ಈಗಾಗಲೇ ಮುಂದೆ ಯಾವ ಸರ್ಕಾರ ಬರಬಹುದು ಎಂದು ಹಲವಾರು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಆದರೆ, ಮಂಡ್ಯದ ಶ್ವಾನವೊಂದು ಮುಂದಿನ ಸಿಎಂ ಯಾರಾಗಲಿದ್ದಾರೆ ಎಂದು ಭವಿಷ್ಯ ನುಡಿದಿದೆ. 

ಕಾಲ ಭೈರವನ ಪ್ರತಿರೂಪ ನುಡಿದಿರುವ ಭವಿಷ್ಯ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಶಾಕ್‌ ನೀಡಿದೆ.ಹೌದು ಮಂಡ್ಯದ ಅಶೋಕ್‌ ನಗರದ ಗೋಪಿ ಎನ್ನುವವರ ಭೈರವ ಹೆಸರಿನ ಶ್ವಾನವು ಕರ್ನಾಟಕದಲ್ಲಿ ಮುಂದಿನ ಸಿಎಂ ಯಾರಾಗಲಿದ್ದಾರೆ ಎಂಬ ಭವಿಷ್ಯ ನುಡಿದಿದೆ. ಫಿಫಾ ವಿಶ್ವಕಪ್‌ ಚಾಂಪಿಯನ್‌ ಯಾರಾಗುತ್ತಾರೆ ಎಂದು ಅಕ್ಟೋಪಸ್‌ ಭವಿಷ್ಯ ನುಡಿದ ರೀತಿಯಲ್ಲಿಯೇ ಸಕ್ಕರೆ ನಾಡಿನ ನಾಯಿಯು ಭವಿಷ್ಯ ನುಡಿದಿದ್ದು, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿಗೆ ಕರ್ನಾಟಕದ ಮುಂದಿನ ಸಿಎಂ ಆಗುವ ಯೋಗವಿದೆ ಎನ್ನುವ ಮೂಲಕ ಮುಂದಿನ ಮುಖ್ಯಮಂತ್ರಿಯ ಸುಳಿವು ನೀಡಿದೆ.

ಭೈರವ ಶ್ವಾನವನ್ನು ಸಾಕಿರುವ ಗೋಪಿ ಅವರು ಕಾಲಭೈರವನ ಭಕ್ತರಾಗಿದ್ದು, ಪ್ರತಿ ಸೋಮವಾರ ಇವರ ಕುಟುಂಬ ಕಾಲಭೈರವನ ಪೂಜೆ ಮಾಡಿಕೊಂಡು ಬಂದಿದೆ. ತಮ್ಮ ಶ್ವಾನಕ್ಕೆ ವಿಶೇಷ ಪೂಜೆ ಸಲ್ಲಿಸಿ ಈ ಬಾರಿ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವುದನ್ನು ಗೋಪಿ ಅವರು ಭೈರವನಿಗೆ ಕೇಳಿದ್ದಾರೆ. ಈ ವೇಳೆ ಬಸವರಾಜ ಬೊಮ್ಮಾಯಿ, ಎಚ್‌ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್‌ ಅವರ ಫೋಟೋಗಳನ್ನು ಇಡಲಾಗಿತ್ತು. ಆ ಮೂರು ಫೋಟೋಗಳಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರ ಫೋಟೋವನ್ನು ಶ್ವಾನ ಬಾಯಿಯಿಂದ ಕಚ್ಚಿ ತೆಗೆದುಕೊಟ್ಟಿದೆ.ಅಷ್ಟಕ್ಕೂ ಈ ಭೈರವ ಬಳಿ ವಿಶೇಷ ಶಕ್ತಿ ಇದೆ ಎಂದು ಶ್ವಾನದ ಮಾಲೀಕ ಗೋಪಿ ಹೇಳಿದ್ದಾರೆ. 

ಪುನೀತ್ ರಾಜಕುಮಾರ್‌ ನಿಧನಕ್ಕೂ ಮುನ್ನ ಪ್ರತಿ ದಿನ ಅವರ ಫೋಟೋವನ್ನು ಭೈರವ ಹಿಡಿದುಕೊಳ್ಳುತ್ತಿತ್ತಂತೆ. ಇದರಿಂದ ಭೈರವ ನೀಡುವ ಸೂಚನೆಗಳು ನಿಜ ಆಗುತ್ತವೆ ಎಂಬುದು ಅವರ ನಂಬಿಕ. ಇನ್ನೂ ಕೆಲ ತಿಂಗಳ ಹಿಂದೆ ಗೋಪಿ ಅವರ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿತ್ತು. ವೈದ್ಯರು ಕೂಡ ಯಾವುದೇ ಭರವಸೆಯನ್ನು ನೀಡಿರಲಿಲ್ಲ. ಆದರೆ, ಭೈರವ ಗೋಪಿ ಅವರ ತಾಯಿಯನ್ನು ಎರಡ್ಮೂರು ಸಲ ನೆಕ್ಕಿ ಮುದ್ದಾಡಿದೆ. ಅದಾದ ಬಳಿಕ ಗೋಪಿ ಅವರ ತಾಯಿ ಆರೋಗ್ಯ ಶೇ.65ರಷ್ಟು ಸುಧಾರಣೆ ಕಂಡಿದೆಯಂತೆ. <a href=https://youtube.com/embed/ESDUW0GVI_k?autoplay=1&mute=1><img src=https://img.youtube.com/vi/ESDUW0GVI_k/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">


ಗೋಪಿ ಅವರ ಪುತ್ರ ಕೂಡ ಶ್ವಾನದ ಪವಾಡದಿಂದ ಆರೋಗ್ಯವಾಗಿದ್ದಾನೆ ಎಂಬುದು ಶ್ವಾನದ ಮನೆಯವರ ನಂಬಿಕೆ. ಈ ಹಿನ್ನೆಲೆ ಭೈರವ ಶ್ವಾನಕ್ಕೆ ವಿಶೇಷ ಶಕ್ತಿ ಇದೆ ಎಂದು ಮನೆಯವರು ಭೈರವನನ್ನು ಸಾಕ್ಷಾತ್‌ ದೇವರಂತೆ ಕಾಣುತ್ತಿದ್ದಾರೆ. ಮನೆಯಲ್ಲಿ ಪೂಜೆ ಮಾಡುವಾಗ ಕೂಡ ದೇವರ ಮನೆಗೆ ಬಂದು ಎರಡೂ ಕಾಲುಗಳನ್ನು ಚಾಚಿ ಭೈರವ ಕುಳಿತುಕೊಳ್ಳುತ್ತದೆಯಂತೆ. ಕಳೆದ ಎರಡು ವರ್ಷಗಳಿಂದ ಭೈರವ ಶ್ವಾನ ನುಡಿದ ಭವಿಷ್ಯ ನಿಜವಾಗುತ್ತಿದೆ ಎನ್ನಲಾಗಿದ್ದು, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಭೈರವನ ಭವಿಷ್ಯ ನಿಜವಾಗಲಿದೆಯೇ ಎಂಬುದನ್ನು ಕಾದು ನೋಡಬೇಕು.

(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.