2024ರ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಗೊತ್ತಾ, ಮೋದಿನಾ..ಸಿದ್ದುನಾ.. ಖಡಕ್ ಉತ್ತರ ಕೊಟ್ಟ ಪ್ರಜೆಗಳು

 

ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಸರ್ಕಾರದಿಂದ ನೀಡಲಾಗುತ್ತಿರುವ "ಪಂಚ ಗ್ಯಾರೆಂಟಿ"ಗಳ ಖುಷಿ ಬೆನ್ನಲ್ಲೆ ಜನ ಸಾಮಾನ್ಯರಿಗೆ ದರ ಏರಿಕೆ ಶಾಕ್ ಉಂಟಾಗಿದೆ. ಒಂದೆಡೆ ವಿದ್ಯುತ್ ಶಾಕ್, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದರೆ, ಮತ್ತೊಂದೆಡೆ ತರಕಾರಿ ಅಂಗಡಿಗೆ ಹೋದ್ರು ಶಾಕ್ , ದಿನಸಿ ಅಂಗಡಿಗೆ ಹೋದ್ರು ಶಾಕ್! ತಲೆ ಕೆಟ್ಟು ಎಣ್ಣೆ ಅಂಗಡಿಗೆ ಹೋದ್ರು ದರ ಏರಿಕೆಯಿಂದ ತಲೆ ಗಿರ್ಗಿಟ್ಲೆ ಹೊಡೆಯೋದು ಪಕ್ಕಾ ಆಗಿದೆ. 

ಹೌದು, ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಜನಸಾಮಾನ್ಯರು ಈಗಾಗಲೇ ಪೆಟ್ರೋಲ್, ವಿದ್ಯುತ್ ದರಗಳ ಏರಿಕೆಯಿಂದ ಬಸವಳಿದಿದ್ದ ಸಾಮಾನ್ಯರಿಗೆ ಗಗನಾಮುಖಿ ಆಗುತ್ತಿರುವ ತರಕಾರಿ, ದಿನಸಿ ಬೆಲೆಗಳು ಮತ್ತಷ್ಟು ಹೊರೆಯಾಗಿವೆ. ಅಷ್ಟಕ್ಕೂ ರಾಜ್ಯದಲ್ಲಿ ದಿನಸಿ ಸೊಪ್ಪು-ತರಕಾರಿಗಳ ಬೆಲೆ ಏರಿಕೆಗೆ ಕಾಣವಾದರೂ ಏನು ಎಂದು ನೋಡುವುದಾದರೆ. 

ರಾಜ್ಯದಲ್ಲಿ ಅನೇಕ ಕಡೆ ಮಳೆ ಅಭಾವದಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಅಷ್ಟೇ ಅಲ್ಲದೆ, ನೆರೆಯ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಎದುರಾಗಿರುವುದರಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿಯೂ ಇಳಿಕೆ ಕಂಡು ಬಂದಿದೆ. ಕಳೆದ ಬಾರಿ ಅತಿವೃಷ್ಠಿ ಮತ್ತು ನೆಟೆ ರೋಗಕ್ಕೆ 70% ನಷ್ಟು ತೊಗರಿ ಬೆಳೆ ನಷ್ಟವಾಗಿತ್ತು. ಅತಿವೃಷ್ಟಿಯಿಂದ ಹಲಸಂದಿ, ಹುರುಳಿ ಬೇಳೆ ಕೂಡ ನಷ್ಟವಾಗಿದ್ದು ದರ ಏರಿಕೆ ಕಂಡಿದೆ.

ಈ ಬಾರಿ ಕೂಡ ಮುಂಗಾರು ರಾಜ್ಯದ ಹಲವೆಡೆ ಕೈ ಕೊಟ್ಟ ಹಿನ್ನೆಲೆ ಬೆಳೆ ನಷ್ಟವಾಗಿರೋದು ಈ ಪ್ರಮಾಣದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 
ಇನ್ನು ಕೆಲವರಂತೂ ಉಚಿತ ಭಾಗ್ಯಗಳನ್ನು ನೀಡಲು ಸರಕು ಮದ್ಯದ ದರ ಹೆಚ್ಚುವರಿ ಮಾಡಿದ್ದಾರೆ ಇದಕ್ಕೆಲ್ಲ ಹೋಲಿಸಿದರೆ ಮೋದಿ ಸರ್ಕಾರವೇ ಬೆಸ್ಟ್ ಎನ್ನುವ ಮಾತನ್ನು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಗ್ಯಾರಂಟಿ ಭಾಗ್ಯಗಳನ್ನು ನೀಡಿ ಹಲವರ ಮನಗೆದ್ದರೂ ಕೂಡ ಬೆಲೆ ಏರಿಕೆಯಿಂದಾಗಿ ಹಲವರ ಕೆಂಗಣ್ಣಿಗೆ ಗುರಿಯಾಗಿರೋದಂತೂ ಹೌದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.