ಯುವಕರು ಹೆಚ್ಚು ಸುಖ ಕೊಡುತ್ತಾರಾ? ಅಥವಾ ಮುದುಕರ? ಶಿಲ್ಪಾ ಶೆಟ್ಟಿಗೆ ವೇದಿಕೆಯಲ್ಲಿ ಪ್ರಶ್ನೆ ಕೇಳಿದ್ದು ಯಾ ರು
ಸದ್ಯ ನಟಿ ಶಿಲ್ಪಾ ಶೆಟ್ಟಿ ನ್ಯೂಯಾರ್ಕ್ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇದಾಗಲೇ ಬ್ಲೂ ಫಿಲ್ಮ್ ಕೇಸ್ನಲ್ಲಿ ಸಿಲುಕಿರೋ ನಟಿ ಮತ್ತು ಪತಿ ಉದ್ಯಮಿ ರಾಜ್ ಕುಂದ್ರಾ ಸದ್ಯ ಚಿನ್ನ ಹೂಡಿಕೆ ಸ್ಕೀಂ ವಂಚನೆ ಪ್ರಕರಣದಲ್ಲಿಯೂ ಸಿಲುಕಿದ್ದಾರೆ. ಶಿಲ್ಪಾ ಶೆಟ್ಟಿ ವಿರುದ್ಧ ತನಿಖೆಗೆ ಮುಂಬೈ ಕೋರ್ಟ್ ಆದೇಶ ಹೊರಡಿಸಿರುವ ಬೆನ್ನಲ್ಲೇ ನ್ಯೂಯಾರ್ಕ್ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ಹಲವಾರು ಫೋಟೋಗಳನ್ನು ನಟಿ ಶೇರ್ ಮಾಡಿಕೊಂಡಿರೋ ಹಿನ್ನೆಲೆಯಲ್ಲಿ, ಅವರ ಹಳೆಯ ವಿಡಿಯೋ ಒಂದು ಇದೀಗ ಸಕತ್ ವೈರಲ್ ಆಗ್ತಿದೆ. ಇದರಲ್ಲಿ ನಟಿಗೆ ನೀವು ಸುಖ ಕಾಣೋದು ಯುವಕರಲ್ಲಿಯೋ, ಅಂಕಲ್ಗಳಲ್ಲಿಯೋ ಎಂಬ ಪ್ರಶ್ನೆ ಎದುರಾಗಿತ್ತು. ಆಗ ಒಂದು ಕ್ಷಣ ತಡಬಡಿಸಿದ ನಟಿ ಕೊಟ್ಟ ಉತ್ತರ ಇದೀಗ ಮತ್ತೊಮ್ಮೆ ವೈರಲ್ ಆಗಿದೆ.
ಅಂದಹಾಗೆ ಈ ವಿಡಿಯೋ ಕಳೆದ ವರ್ಷದ್ದು. ಚಿತ್ರವೊಂದರ ಪ್ರಮೋಷನ್ ವೇಳೆ ಅವರಿಗೆ ಈ ಪ್ರಶ್ನೆ ಎದುರಾಗಿತ್ತು. ಆಗ ಅಲ್ಲಿಗೆ ಬಂದಿದ್ದ ಅಭಿಮಾನಿಯೊಬ್ಬರು, ನಿಮ್ಮನ್ನು ಎಲ್ಲಾ ವಯೋಮಾನದವರೂ ನೋಡುತ್ತಾರೆ. ವೃದ್ಧರು, ಯುವಕರು, ಅಂಕಲ್ಗಳು ಎಲ್ಲರೂ ನಿಮ್ಮನ್ನು ನೋಡ್ತಾರೆ, ನಿಮಗೆ ಸುಖ ಯಾವುದರಿಂದ ಸಿಗುತ್ತದೆ ಎಂದು ಪ್ರಶ್ನೆ ಕೇಳಿದ್ದ.
ಸಡನ್ ಆಗಿ ಎದುರಾದ ಪ್ರಶ್ನೆಗೆ ಆರಂಭದಲ್ಲಿ ತಡಬಡಿಸಿದ ನಟಿ, ಕೊನೆಗೆ, ದೊಡ್ಡದಾಗಿ ನಗುತ್ತಲೇ, ನೋಡಿ, ಜನರನ್ನು ಖುಷಿ ಪಡಿಸುವಲ್ಲಿ ನನ್ನ ಸುಖ ಇದೆ. ಜನರಿಗೆ ಮನೋರಂಜನೆ ಕೊಡುವುದೇ ನಮ್ಮ ಕೆಲಸ. ಅದರಲ್ಲಿಯೇ ನಟರಾದವರಿಗೆ ಖುಷಿ ಇರುತ್ತದೆ. ಯಾವುದರಲ್ಲಿ ಖುಷಿ ಸಿಗುತ್ತದೆ ಎಂದು ತೀರ್ಪು ಕೊಡಲು ನನಗೆ ಸಾಧ್ಯವಿಲ್ಲ. ನನಗೆ ದುಡ್ಡು ಕೊಟ್ಟರೆ ಮಾತ್ರ ಟಿವಿಗಳಲ್ಲಿ ತೀರ್ಪುಗಾರಳಾಗಿ ಹೋಗ್ತೇನೆ. ಸುಮ್ಮನೆ ತೀರ್ಪು ಕೊಡಲ್ಲ ಎಂದು ಎಲ್ಲರನ್ನೂ ನಗಿಸಿದ್ದಾರೆ. ಇದರ ವಿಡಿಯೋ ಮತ್ತೆ ಮುನ್ನೆಲೆಗೆ ಬಂದಿದೆ.
ಸದ್ಯ ಶಿಲ್ಪಾ ಶೆಟ್ಟಿ, ಬಹುನಿರೀಕ್ಷಿತ ‘ಕೆಡಿ’ ಸಿನಿಮಾದಲ್ಲಿ ನಟಿ ಶಿಲ್ಪಾ ಶೆಟ್ಟಿ ಅವರು ಸತ್ಯವತಿ ಎಂಬ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಶೂಟಿಂಗ್ ಮುಗಿದಿದ್ದು, ಅದೇ ಖುಷಿಯಲ್ಲಿ ಚಿತ್ರೀಕರಣದ ಸೆಟ್ನಿಂದಲೇ ಹೊಸ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾಗೆ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ. ‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಧ್ರುವ ಸರ್ಜಾ ಅವರು ‘ಕೆಡಿ’ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ.
ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ಬಾಲಿವುಡ್ ಕಲಾವಿದರಾದ ಸಂಜಯ್ ದತ್ ಹಾಗೂ ಶಿಲ್ಪಾ ಶೆಟ್ಟಿ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಪಾತ್ರದ ಹೆಸರು ಸತ್ಯವತಿ. ಇದು ತಮ್ಮ ಫೇವರಿಟ್ ಪಾತ್ರಗಳಲ್ಲಿ ಒಂದು ಎಂದು ಅವರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.