ಹಮಾಸ್ ವಿ.ಕೃತ ನೋಡಲಾಗದೆ ಟ್ವಿಟ್ ಮಾಡಿದ ವೈದ್ಯ, ರೊಚ್ಚಿಗೆದ್ದ ಪ್ಯಾಲೆಸ್ತೀನ್ ಮುಸ್ಲಿಮರು ಮಾಡಿದ್ದೇನು ಗೊತ್ತಾ
ಯೋಚಿಸಿ ಮಾತನಾಡಿ ಅನ್ನೋದು ಸುಮ್ನೆ ಅಲ್ಲ .ಹಮಾಸ್ ಬಂಡುಕೋರರ ಕೃತ್ಯ ಖಂಡಿಸಿ ಇಸ್ರೇಲ್ ಪರವಾಗಿ ಟ್ವೀಟ್ ಮಾಡಿದ್ದಕ್ಕೆ ಬಹರೇನ್ ನಲ್ಲಿ ಮಂಗಳೂರು ಮೂಲದ ವೈದ್ಯರನ್ನು ಬಂಧಿಸಲಾಗಿದೆ. ರಾಯಲ್ ಬಹರೇನ್ ಆಸ್ಪತ್ರೆ ಆಡಳಿತ ಮಂಡಳಿಯು ಮಂಗಳೂರಿನ ಕೆಎಂಸಿಯಲ್ಲಿ ಎಂಡಿ ಓದಿರುವ ಡಾ. ಸುನೀಲ್ ರಾವ್ ಅವರನ್ನು ವಜಾ ಮಾಡಿ ಇದು ಸೈಬರ್ ಕ್ರೈಂ ಎಂದು ಪರಿಗಣಿಸಿ ಬಹರೇನ್ ಪೊಲೀಸರು ಸುನೀಲ್ ರಾವ್ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
50 ವರ್ಷದ ಸುನೀಲ್ ರಾವ್ ಎಕ್ಸ್‌ನಲ್ಲಿ ಇಸ್ರೇಲ್ ಪರವಾಗಿ ಪೋಸ್ಟ್ ಮಾಡಿದ್ದರು. ಇದನ್ನು ಗಮನಿಸಿದ ಬಳಕೆದಾರರು ಬಹರೇನ್ ಸರ್ಕಾರಕ್ಕೆ ಟ್ಯಾಗ್ ಮಾಡಿದ್ದು ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಹರೇನ್ ರಾಯಲ್ ಹಾಸ್ಪಿಟಲ್ ಸುನೀಲ್ ರಾವ್ ಅವರ ಪೋಸ್ಟ್ ನಮ್ಮ ಸಮಾಜಕ್ಕೆ ವಿರುದ್ಧವಾಗಿದೆ. ಅವರ ಸಿದ್ದಾಂತ ನಮಗೆ ಒಪ್ಪಿತವಲ್ಲ. ಅದು ನಮ್ಮ ನಿಲುವಲ್ಲ. ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರಿಂದ ಕೆಲಸದಿಂದ ವಜಾ ಮಾಡಿದ್ದೇವೆ ಎಂದು ತಿಳಿಸಿದೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸುನಿಲ್ ರಾವ್ ಅವರನ್ನು ವಜಾಗೊಳಿಸುವ ಮುನ್ನ ಸುನಿಲ್ ರಾವ್ ಎಕ್ಸ್‌ನಲ್ಲಿ ಕ್ಷಮೆ ಕೇಳಿದ್ದರು. ಬಹರೇನ್‌ನಲ್ಲಿ 10 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಈ ದೇಶದ ಜನರನ್ನು, ಧರ್ಮವನ್ನು ಗೌರವಿಸುತ್ತೇನೆ. ಒಬ್ಬ ಡಾಕ್ಟರ್ ಆಗಿ ಸಾವು ನೋವುಗಳ ಬಗ್ಗೆ ಮಾತನಾಡಿದ್ದೆ. ಭಾವನೆಗಳಿಗೆ ಧಕ್ಕೆಯಾದರೆ ಕ್ಷಮಿಸಿ ಎಂದು ಪೋಸ್ಟ್ ಮಾಡಿದ್ದರು.
ವೈದ್ಯ ಸುನಿಲ್ ರಾವ್ ಮಂಗಳೂರಿನ ಕೆಎಂಸಿ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಮಾಡಿದ್ದರು. ಬಹರೈನ್ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ಇಂಟರ್ನಲ್ ಮೆಡಿಸಿನ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಬಹರೈನ್ ನಲ್ಲೇ ನೆಲೆಸಿರುವ ಸುನಿಲ್ ರಾವ್. ಇದೀಗ ಬಹರೈನ್ ಪೊಲೀಸರು ಬಂಧಿಸುತ್ತಿದ್ದಂತೆ ಆಸ್ಪತ್ರೆ ಆಡಳಿತ ಮಂಡಳಿ ವೈದ್ಯರನ್ನು ಹುದ್ದೆಯಿಂದ ತೆಗೆದು ಹಾಕಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.