ನಾಯಿ ಹಾಗೂ ಕನ್ನಡಿಗರಿಗೆ ಈ ಮಾಲ್‌ಗೆ ಪ್ರವೇಶವಿಲ್ಲ‌ ಎಂದ ಖ್ಯಾತ ಕಂಪನಿ;

 
 ಅದ್ಯಾಕೋ ಗೊತ್ತಿಲ್ಲ ಕನ್ನಡ ಹಾಗೂ ಕನ್ನಡಿಗರಿಗೆ ಅವಮಾನ ಮಾಡುವ, ಕೀಳಾಗಿ ಮಾತನಾಡುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದೆ. ಇದಕ್ಕೆ ಸೋಶಿಯಲ್‌ ಮೀಡಿಯಾಗಳೇ ವೇದಿಕೆಯಾಗಿದೆ. ಇಂತಹ ಘಟನೆಗಳು ಕನ್ನಡಿಗರನ್ನು ಕೆರಳಿಸುತ್ತಲೇ ಇದ್ದು, ಈಗ ಮತ್ತೊಂದು ಇಂತದ್ದೇ ಘಟನೆ ಮರುಕಳಿಸಿದೆ.
ಅಷ್ಟಕ್ಕೂ ಇದನ್ನು ಹೇಳ್ತಿರೋದು ಏಕೆಂದರೆ ಸೂಪರ್‌ ಮಾರ್ಕೆಟ್‌ವೊಂದರಲ್ಲಿ ಹಾಕಲಾಗಿದೆ ಎನ್ನಲಾದ ಫಲಕದಲ್ಲಿ ಕನ್ನಡಿಗರನ್ನು ಅವಮಾನಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಫಲಕದಲ್ಲಿ ನಾಯಿಗಳು ಹಾಗೂ ಕನ್ನಡಿಗರಿಗೆ ಪ್ರವೇಶವಿಲ್ಲ ಎಂದು ಬರೆಯಲಾಗಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ, ಇದರ ಅಸಲಿಯತ್ತು ಇನ್ನೂ ಪತ್ತೆಯಾಗಿಲ್ಲ.
ಇದನ್ನು ಟೀಮ್‌ ಜಾತ್‌ ಅಫೀಶಿಯಲ್‌ ಎನ್ನುವ ಟ್ವಿಟರ್‌ ಅಕೌಂಟ್‌ನಿಂದ ಪೋಸ್ಟ್‌ ಮಾಡಲಾಗಿದೆ. ಈ ಫೋಟೋಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಬರೆಯಲಾಗಿದೆ. ಈ ಪೋಸ್ಟ್‌ ವೈರಲ್‌ ಆಗಿ, ಬಹುತೇಕ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಕನ್ನಡಿಗರನ್ನು ಇಷ್ಟು ಅವಮಾನ ಮಾಡುತ್ತಿರುವುದು ಯಾರು? ಈ ಸೂಪರ್‌ ಮಾರ್ಕೆಟ್‌ ಎಲ್ಲದೆ? ಎಂದೆಲ್ಲ ಹುಡುಕಾಡಿದ್ದಾರೆ. ಆದರೆ, ಇವರೆಗೆ ಎಲ್ಲಿಯೂ ಇದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಮತ್ತೊಂದೆಡೆ ಇದನ್ನು ಯಾರೋ ಎಡಿಟ್‌ ಮಾಡಿ ಈ ರೀತಿ ಕೃತ್ಯ ಎಸಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ಜೋರಾಗಿವೆ. ಕೆಲವರು ಈ ಪೋಸ್ಟ್‌ ಸ್ಕ್ರೀನ್‌ಶಾಟ್‌ಗಳನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್‌ ಕೂಡ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.ಈ ಪೋಸ್ಟ್‌ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಟೀಮ್‌ ಜಾತ್‌ ಅಫೀಶಿಯಲ್‌, 'ನಾನು ಎಲ್ಲರಿಗೂ ಮತ್ತೊಮ್ಮೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತಿದ್ದೇನೆ. ಬೇರೊಬ್ಬರು ಇದನ್ನು ಆಜ್ ಡಿಮಾರ್ಟ್‌ ಮೆ ಯೇ ದಿಖಾ' ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ನಂತರ ನಾನು ಅದನ್ನು ಪೋಸ್ಟ್ ಮಾಡಿದ್ದೇನೆ. ಎಂದು ಕ್ಷಮೆ ಕೇಳಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.