ಚೀನಾ ದೇಶದಲ್ಲಿ ಅಮೆರಿಕಾದ ಉದ್ಯೋಗಿಗಳು, ಚೀನಾದವರ ಜೊತೆ ಅನೈತಿಕ ಚಟುವಟಿಕೆ ಇಟ್ಟುಕೊಳ್ಳಬೇಡಿ‌ ಎಂದ ಟ್ರಂಪ್

 
ಅಮೆರಿಕ-ಚೀನಾ ನಡುವಿನ ವೈಮನಸ್ಸು ಇಂದು-ನಿನ್ನೆಯದಲ್ಲ. ಆದರೀಗ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೊಸ ಸುಂಕ ನೀತಿ, ಉಭಯ ದೇಶಗಳ ನಡುವಿನ ಕಂದಕವನ್ನು ಮತ್ತಷ್ಟು ಹೆಚ್ಚಿಸಿದೆ. ಇದಕ್ಕೆ ಡೊನಾಲ್ಡ್‌ ಟ್ರಂಪ್‌ ಅವರು ಯುಎಸ್‌ ಸರ್ಕಾರಿ ಅಧಿಕಾರಿಗಳಿಗೆ ನೀಡಿರುವ ಹೊಸ ಸೂಚನೆಯೇ ಸಾಕ್ಷಿ.ಅಮೆರಿಕದ ಅಧಿಕಾರಿಗಳು ಯಾವುದೇ ಕಾರಣಕ್ಕೂ ಚೀನಾದ ನಾಗರಿಕರೊಂದಿಗೆ ಪ್ರೇಮ ಸಂಬಂಧ ಮತ್ತು ಲೈಂಗಿಕ ಸಂಬಂಧವನ್ನು ಹೊಂದುವಂತಿಲ್ಲ. ಎಂದು ಡೊನಾಲ್ಡ್‌ ಟ್ರಂಪ್‌ ಆಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಅಮೆರಿಕದ ರಾಯಭಾರಿ ನಿಕ್ ಬರ್ನ್ಸ್ ಕಳೆದ ಜನವರಿಯಲ್ಲೇ ಈ ಕಠಿಣ ನಿಯಮ ಜಾರಿಗೆ ತಂದಿದ್ದು, ಭದ್ರತಾ ಕಾರಣಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿಯಮವು ಅಮೆರಿಕದ ಮಹಿಳಾ ಅಥವಾ ಪುರುಷ ಅಧಿಕಾರಿಗಳು ಮತ್ತು ಅವರ ಕುಟುಂಬದ ಮಹಿಳಾ ಅಥವಾ ಪುರುಷ ಸದಸ್ಯರು, ಚೀನಾದ ಮಹಿಳಾ ಅಥವಾ ಪುರುಷ ನಾಗರಿಕರೊಂದಿಗೆ ಪ್ರೇಮ ಸಂಬಂಧ ಮತ್ತು ಲೈಂಗಿಕ ಸಂಬಂಧವನ್ನು ಹೊಂದುವುದನ್ನು ನಿರಾಕರಿಸುತ್ತದೆ.
ಚೀನಾವು ಹನಿಪೋಟ್ ತಂತ್ರಗಳನ್ನು ಬಳಸಿ ಮಾಹಿತಿ ಕದಿಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಉನ್ನತ ಮಟ್ಟದ ಅಧಿಕಾರಿಗಳು ಮಾತ್ರ ಚೀನಾದ ನಾಗರಿಕರೊಂದಿಗೆ ಪ್ರೇಮ ಮತ್ತು ಲೈಂಗಿಕ ಸಂಬಂಧವನ್ನು ಹೊಂದುವಂತಿಲ್ಲ ಎಂಬ ನಿಯಮವಿತ್ತು. ಇದೀಗ ಈ ನಿಯಮವನ್ನು ಎಲ್ಲಾ ಹಂತದ ಅಧಿಕಾರಿಗಳಿಗೆ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ.
ಈ ಹೊಸ ನಿಯಮವು ಅಮೆರಿಕ ಮತ್ತು ಚೀನಾ ನಡುವಿನ ಉದ್ವಿಗ್ನತೆಯನ್ನು ತೋರಿಸುತ್ತದೆ. ವ್ಯಾಪಾರ, ತಂತ್ರಜ್ಞಾನ ಮತ್ತು ಭೌಗೋಳಿಕ ಸ್ಪರ್ಧೆಯಲ್ಲಿ ಎರಡೂ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ಚೀನಾದ ವಿದೇಶಾಂಗ ಸಚಿವಾಲಯ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಈ ಪ್ರಶ್ನೆಯ ಬಗ್ಗೆ ಅಮೆರಿಕವನ್ನೇ ಕೇಳುವುದು ಸೂಕ್ತ ಎಂದು ಚೀನಾ ಹೇಳಿದೆ.ಈ ಹೊಸ ನೀತಿಯು ಶೀತಲ ಸಮರದ ನಂತರ ಅಮೆರಿಕ ಕೈಗೊಂಡ ಅತೀ ದೊಡ್ಡ ಕ್ರಮವಾಗಿದೆ. 
ಬೇರೆ ದೇಶಗಳಲ್ಲಿ ಅಮೆರಿಕದ ರಾಯಭಾರಿಗಳು ಅಲ್ಲಿನ ಸ್ಥಳೀಯರನ್ನು ಪ್ರೀತಿಸುವುದಕ್ಕೆ ಅಥವಾ ಮದುವೆಯಾಗುವುದಕ್ಕೆ ಅನುಮತಿ ಇದೆ. ಆದರೆ ಚೀನಾದಲ್ಲಿ ಮಾತ್ರ ಅಂತಹ ಸಂಬಂಧಗಳನ್ನು ನಿಷೇಧಿಸಲಾಗಿದೆ. ಈ ಹಿಂದೆ, ಅಮೆರಿಕದ ಸಿಬ್ಬಂದಿ ಚೀನೀ ಪ್ರಜೆಗಳೊಂದಿಗೆ ಯಾವುದೇ ಸಂಬಂಧ ಹೊಂದಿದ್ದರೆ, ತಮ್ಮ ಮೇಲಧಿಕಾರಿಗಳಿಗೆ ತಿಳಿಸಬೇಕಿತ್ತು. ಆದರೆ ಈಗ ಯಾವುದೇ ಪ್ರೇಮ ಸಂಬಂಧವನ್ನು ಹೊಂದುವಂತಿಲ್ಲ ಎಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.