ಕಡು ಬಡ ಕುಟುಂಬದ ಮಹಿಳೆಯ ಮನೆಯಲ್ಲಿ ಬರ್ತಡೆ ಆಚರಿಸಿದ ಡ್ರೋನ್ ಪ್ರತಾಪ್; ಅಜ್ಜಿಗೆ ಬ ಹುದೊಡ್ಡ ಗಿಫ್ಟ್
ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ಡ್ರೋನ್ ಪ್ರತಾಪ್ ಅವರು ಜನ್ಮದಿನವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುವೆ ಎಂದಿದ್ದರು. ಅಷ್ಟೇ ಅಲ್ಲದೆ ಒಂದು ಮಹದುದ್ದೇಶವನ್ನು ಹಂಚಿಕೊಂಡಿದ್ದರು. ಈಗ ಆ ಮಾತನ್ನು ಉಳಿಸಿಕೊಂಡಿದ್ದಾರೆ. ಈ ಬಗ್ಗೆ ಅವರೇ ವಿಡಿಯೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಡ್ರೋನ್ ಪ್ರತಾಪ್ ಅವರು ಒಂದು ಸಂದೇಶವನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಗಳಲ್ಲಿ ಬಹುತೇಕರು ಸಿನಿಮಾ, ಧಾರಾವಾಹಿ, ಉದ್ಯಮ ಎಂದು ಬ್ಯುಸಿಯಾಗುತ್ತಿದ್ದರೆ, ಅತ್ತ ಡ್ರೋನ್ ಪ್ರತಾಪ್ ಅವರು ಸಾಮಾಜಿಕ ಕೆಲಸ ಮಾಡುತ್ತಿದ್ದಾರೆ. ಹೌದು, ಜೂನ್ 11ರಂದು ಜನ್ಮದಿನದ ಪ್ರಯುಕ್ತ ಬಡವರಿಗೆ ಕಣ್ಣಿನ ಆಪರೇಶನ್ ಮಾಡಿಸುವೆ ಎಂದು ಹೇಳಿದ್ದರು. ಈಗ ಅವರು ಆ ಮಾತನ್ನು ಉಳಿಸಿಕೊಂಡಿದ್ದಾರೆ.
https://youtube.com/shorts/x_wcwZvDkfY?si=VBYrWMFLzNlg28Ri
ಆರ್ಥಿಕವಾಗಿ ಹಿಂದುಳಿದಿದ್ದು, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವೆ ಎಂದು ಡ್ರೋನ್ ಪ್ರತಾಪ್ ಅವರು ಹೇಳಿದ್ದರು. ಅದರಂತೆ ಅವರು ನಡೆದುಕೊಂಡಿದ್ದಾರೆ. ಅಜ್ಜಿಯೋರ್ವರಿಗೆ ಆಪರೇಶನ್ ಮಾಡಿಸಿದ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಡಾ ರಾಜ್ ಕುಮಾರ್ ಅವರು ನೇತ್ರದಾನ ಮಹಾದಾನ ಅಂತ ಹೇಳುತ್ತಾರೆ. ಈ ಬಾರಿ ನನ್ನ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಬೇಕು ಎಂದುಕೊಂಡಿದ್ದೇನೆ. ಅದಕ್ಕಾಗಿ ನಾನು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಐದು ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಬೇಕು ಎಂದುಕೊಂಡಿದ್ದೇನೆ ಎಂದು ಡ್ರೋನ್ ಪ್ರತಾಪ್ ಅವರು ಹೇಳಿದ್ದರಂತೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.