ಈ ಕಾರ್ಡ್ ದಾರರಿಗೆ ಕರೆಂಟ್ ಉಚಿತ ಇಲ್ಲ; ಈ ಕೂ ಡಲೇ ಅರಿತುಕೊಳ್ಳಿ
Aug 16, 2024, 13:08 IST
ಕರ್ನಾಟಕದಲ್ಲಿ ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಜಾರಿಯಾಗಿರುವ ಐದು ಯೋಜನೆಗಳ ನಿಯಮಗಳನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂಬ ವದಂತಿಗಳ ಬಗ್ಗೆ ಆಹಾರ ಸಚಿವ ಕೆಎಚ್ ಮುನಿಯಪ್ಪ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬಹುಮುಖ್ಯವಾಗಿ, ಗೃಹ ಜ್ಯೋತಿ ಯೋಜನೆಯ 200 ಯೂನಿಟ್ ನಿಂದ 100 ಯೂನಿಟ್ ಗೆ ಇಳಿಸಲು ನಿರ್ಧರಿಸಲಾಗಿದೆ ಎಂಬ ವಿಚಾರದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರದಿಂದ ಜಾರಿಗೊಳಿಸಲಾಗಿರುವ ಐದು ಗ್ಯಾರಂಟಿಗಳ ನಿಯಮಗಳನ್ನು ಬಿಗಿ ಮಾಡಲಾಗುತ್ತೆ ಎಂಬ ವದಂತಿಗಳ ಬಗ್ಗೆ ಸಚಿವ ಕೆಎಚ್ ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ. ಗೃಹಜ್ಯೋತಿಯಡಿ ನೀಡಲಾಗುವ 200 ಯೂನಿಟ್ ವಿದ್ಯುತ್ ಅನ್ನು 100 ಯೂನಿಟ್ ಗೆ ಇಳಿಸುವ ಚಿಂತನೆ ಸರ್ಕಾರಕ್ಕಿದೆ, ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಸಂಖ್ಯೆಯನ್ನು ಇಳಿಕೆ ಮಾಡಲಾಗುತ್ತದೆ, ಮನೆಯ ಯಜಮಾನಿಗೆ ಮಾಸಿಕವಾಗಿ ನೀಡುವ 2 ಸಾವಿರ ರೂ.ಗಳ ಯೋಜನೆಗೂ ಒಂದಿಷ್ಟು ಹೆಚ್ಚುವರಿ ಮಾನದಂಡ ನಿಗದಿಪಡಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇದೆಲ್ಲಾ ವದಂತಿಗಳಿಗೆ ಪ್ರತಿಕ್ರಿಯಿಸಿರುವ ಸಚಿವರು, ಹೌದು… ಸರ್ಕಾರದಿಂದ ನೀಡಲಾಗುತ್ತಿರುವ ಗ್ಯಾರಂಟಿ ಯೋಜನೆಗಳಲ್ಲಿ ಕೆಲವು ಗ್ಯಾರಂಟಿಗಳ ನಿಯಮಾವಳಿಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆ ತರಲಾಗುತ್ತದೆ. ಹಾಗೆ ಬದಲಾವಣೆ ತರುವಂತೆ ಸರ್ಕಾರದ ಮೇಲೆ ಒತ್ತಡವಿದೆ ಎಂದು ಹೇಳಿದ್ದಾರೆ. ರಾಜ್ಯದ ಕೆಲವು ಯೋಜನೆಗಳನ್ನು ಹಲವಾರು ಮಂದಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಗ್ಯಾರಂಟಿಗಳ ಲಾಭ ಶ್ರೀಮಂತರ ಪಾಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಕೆಲವು ಗ್ಯಾರಂಟಿ ಯೋಜನೆಗಳ ನಿಯಮಾವಳಿಗಳಿಗೆ ಬದಲಾವಣೆ ತರಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಗೃಹಜ್ಯೋತಿ ನಿಯಮಗಳಲ್ಲಿ ಬದಲಾವಣೆ ತಂದು ಈಗ ಮಾಸಿಕವಾಗಿ 200 ಯೂನಿಟ್ ಉಚಿತ ವಿದ್ಯುತ್ತಿನ ಮಿತಿಯನ್ನು 100 ಯೂನಿಟ್ ಗೆ ಇಳಿಸುವ ಬಗ್ಗೆ ಮಾತುಕತೆ ನಡೆದಿವೆ. ಹಾಗೆ ಮಾಡುವುದರಿಂದ ಬಡವರನ್ನು ಸುಲಭವಾಗಿ ಗುರುತಿಸಬಹುದು ಎಂಬ ಅನಿಸಿಕೆಗಳೂ ಸರ್ಕಾರಿ ಅಧಿಕಾರಿಗಳ ವಲಯದಿಂದ ಕೇಳಿಬಂದಿದೆ ಎಂದು ಅವರು ಹೇಳಿದ್ದಾರೆ.
<a href=https://youtube.com/embed/8JRI3RQLZlE?autoplay=1&mute=1><img src=https://img.youtube.com/vi/8JRI3RQLZlE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಯೂನಿಟ್ ಗಳ ಇಳಿಕೆಯ ವಿಚಾರ ಇನ್ನೂ ಮಾತುಕತೆ ಹಂತದಲ್ಲೇ ಇದೆ. ಆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಅದೇ ರೀತಿ, ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರ ಉಚಿತ ಪ್ರಯಾಣ ಸೌಲಭ್ಯವನ್ನು ನಿಲ್ಲಿಸುವ ಬಗ್ಗೆ, ತಿಂಗಳಿಗೆ ನಿಗದಿತ ಬಾರಿ ಮಾತ್ರ ಪ್ರಯಾಣಿಸುವ ಅವಕಾಶ ನೀಡುವ ಬಗ್ಗೆಯೂ ಮಾತುಕತೆ ನಡೆಸಲಾಗುತ್ತಿದೆ.
ಅವೂ ಸಹ ಮಾತುಕತೆಯ ಹಂತದಲ್ಲಿದ್ದು ಆ ಬಗ್ಗೆ ಸಂಪುಟದಲ್ಲಿ ಚರ್ಚಿಸಲಾಗುವುದು . ಸದ್ಯಕ್ಕಂತೂ ಈ ಎರಡು ಗ್ಯಾರಂಟಿಗಳ ನಿಯಮಗಳಲ್ಲಿ ಪರಿಷ್ಕರಣೆಯಾಗಲ್ಲ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.