ನರೇಶ್ ಸಿನಿಮಾ ಸೆಟ್ ನಲ್ಲಿ‌ ಇದ್ದರೂ ಕೂಡ ಆ‌‌ ಕೆಲಸ ಸರಿಯಾಗಿ ಮಾಡಿ ಮುಗಿಸ್ತಾರೆ, ಅದೇ ನನಿಗೆ ಖುಷಿ

 
Bji
ನರೇಶ್ ಹಾಗೂ ಪವಿತ್ರಾ ಲೋಕೇಶ್ ಅವರು ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಪವಿತ್ರಾ ಅವರು ಕನ್ನಡದಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರು ಪತಿಯ ವೃತ್ತಿ ಜೀವನಕ್ಕೆ, ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಈಗ ನರೇಶ್ ಅವರು ಒಂದು ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಅವರು ಹೋದಲ್ಲೆಲ್ಲ 40 ಕೆಜಿ ಕಿಚನ್ ಸಾಮಗ್ರಿಗಳು ಕೂಡ ಬರುತ್ತಿವೆ. ಸೆಟ್​ನಲ್ಲಿ ಅವರಿಗಾಗಿ ವಿಶೇಷ ಅಡುಗೆ ಸಿದ್ಧವಾಗುತ್ತಿದೆ. ಇದನ್ನು ಮಾಡೋದು ಪವಿತ್ರಾ ಅವರೇ ಅನ್ನೋದು ವಿಶೇಷ.
ನರೇಶ್ ಅವರಿಗೆ ಈಗ 65 ವರ್ಷ. ಈ ವಯಸ್ಸಿನಲ್ಲಿ ಅವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೊರಗಿನ ಆಹಾರಗಳಿಗೆ ಅವರು ಸಂಪೂರ್ಣವಾಗಿ ಬ್ರೇಕ್ ಹಾಕಿದ್ದಾರೆ. ಇದರ ಜೊತೆಗೆ ಅವರು ಮಿಸ್ ಮಾಡದೆ ವಾಕಿಂಗ್ ಮಾಡುತ್ತಾರೆ. ಜಿಮ್​ನಲ್ಲಿ ವರ್ಕೌಟ್ ಮಾಡುತ್ತಾರೆ. ಇದರ ಜೊತೆಗೆ ಸೆಟ್​ನಲ್ಲೇ ಮನೆಯ ಊಟ ಸವಿಯುತ್ತಿದ್ದಾರೆ.
ಸೆಟ್​ಗೆ ನಿತ್ಯ ಕಿಚನ್ ಸಾಮಗ್ರಿಗಳು ಬರುತ್ತವೆ. ಇದರಲ್ಲಿ ಕುಕ್ಕರ್, ಮಿಕ್ಸಿ, ಮಸಾಲೆ ಪಾದರ್ಥ, ಒಲೆ, ಗೋಧಿ ಹಿಟ್ಟು, ಅಕ್ಕಿ, ಉಪ್ಪಿನಕಾಯಿ ಇತ್ಯಾದಿ ಸೇರಿವೆ. ಪತಿಗಾಗಿ ಪವಿತ್ರಾ ಕೂಡ ಜೊತೆಗೆ ಬರುತ್ತಿದ್ದು, 40 ಕೆಜಿ ಭಾರದ ಸಾಮಗ್ರಿಗಳ ಹೊತ್ತು ತರುತ್ತಿದ್ದರು.ಸೆಟ್​ನಲ್ಲೇ ಅಡುಗೆ ಮಾಡಿ ಬಡಿಸುತ್ತಿದ್ದಾರೆ. ಈ ಮೂಲಕ ಪತಿಯ ಆರೋಗ್ಯದ ಬಗ್ಗೆ ಅವರು ಹೆಚ್ಚು ಗಮನ ಹರಿಸುವ ಕೆಲಸ ಮಾಡುತ್ತಿದ್ದಾರೆ.
ನರೇಶ್ ಅವರಿಗೆ ಇತ್ತೀಚೆಗೆ ಕೆಲವು ಬಾರಿ ಫುಡ್ ಪಾಯ್ಸನ್ ಆಗಿತ್ತು. ಇದರಿಂದ ಅವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಆಗಿದೆ. ಈ ಕಾರಣದಿಂದಲೇ ಮನೆಯ ಊಟದ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ.ನರೇಶ್ ಹಾಗೂ ಪವಿತ್ರಾ ಒಟ್ಟಿಗೆ ಸಿನಿಮಾ ಮಾಡಿದವರು. ಇವರು ಒಟ್ಟಿಗೆ ಇದ್ದಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆ ಆಯಿತು. ನರೇಶ್ ಪತ್ನಿ ರಮ್ಯಾ ರಘುಪತಿ ಅವರು ಪತಿಯ ಬಗ್ಗೆ ಸಾಕಷ್ಟು ಆಕ್ರೋಶ ಹೊರಹಾಕಿದ್ದರು. 
ನನಗೆ ನರೇಶ್ ವಿಚ್ಛೇದನ ನೀಡಿಲ್ಲ. ಹೀಗಾಗಿ, ಪವಿತ್ರಾ ಅವರನ್ನು ವಿವಾಹ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ, ನರೇಶ್ ಮದುವೆ ಮೇಲೆ ನಂಬಿಕೆ ಹೊಂದಿಲ್ಲ. ಇಬ್ಬರೂ ಹಾಯಾಗಿ ಒಟ್ಟಿಗೆ ವಾಸಿಸುತ್ತಾ ಇದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.