ಗಂಡ ಬಿಟ್ಟ ಬಳಿಕ ಮಿತಿಮೀರಿದ ರೀಲ್ಸ್; ಚಂದನ್ ಶೆಟ್ಟಿ ಓಪನ್ ಟಾ ಕ್
Aug 3, 2024, 16:47 IST
ಕಳೆದ ಕೆಲ ದಿನಗಳಿಂದ ಸಂಗೀತ ನಿರ್ದೇಶಕ, ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡಿವೋರ್ಸ್ ಪಡೆದುಕೊಂಡಿದ್ದಾರೆ. ವೈಯಕ್ತಿಕ ಕಾರಣದಿಂದ ನಾಲ್ಕು ವರ್ಷಗಳ ದಾಂಪತ್ಯ ಕೊನೆಗೊಳಿಸುವುದಾಗಿ ಈ ಜೋಡಿ ಹೇಳಿಕೊಂಡಿತ್ತು. ಅದರ ಕುರಿತಾಗಿ ಇದೀಗ ನುಂಗಲಾರದ ಕಹಿ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ ನಟ ಚಂದನ್ ಶೆಟ್ಟಿ.
ಡಿವೋರ್ಸ್ ಪಡೆಯುತ್ತಿದ್ದಾರೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ, ನಾನಾ ರೀತಿಯ ಊಹಾಪೋಹಗಳು ಭುಗಿಲೆದ್ದಿದ್ದವು. ಆದರೆ ಅದಕ್ಕೆ ಪತ್ರಿಕಾಗೋಷ್ಠಿ ಮೂಲಕ ಉತ್ತರವನ್ನೂ ಇವರು ನೀಡಿದ್ದರು. ಇನ್ನು ಇವರಿಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ಜೊತೆಗೆ ಈ ಡಿವೋರ್ಸ್ಗೆ ಮೂರನೇ ವ್ಯಕ್ತಿ ಕಾರಣ ಎಂದು ಹೇಳಲಾಗುತ್ತಿತ್ತು.
https://youtube.com/shorts/ZXqKU3XeYA4?si=DfnnuCBQO381LXaP
ಈ ಬೆನ್ನಲ್ಲೇ ಮಾತನಾಡಿರುವ ಚಂದನ್ ಶೆಟ್ಟಿ, ನಿವೇದಿತಾ ಮತ್ತು ನನ್ನ ದಾಂಪತ್ಯ ಕೆಡಲು ಮೂರನೇ ವ್ಯಕ್ತಿ ಕಾರಣ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಆದರೆ, ಆ ಮೂರನೇ ವ್ಯಕ್ತಿ ಯಾರು ಎಂಬುದು ಮಾತ್ರ ಸ್ಪಷ್ಟವಾಗಿ ಹೇಳಿಲ್ಲ.ಕಾರಣ ಅದುವೇ. ಕುಟುಂಬ ಒಡೆಯಲು ಮೂರನೇ ವ್ಯಕ್ತಿ ಕಾರಣವಾಗುತ್ತಾರೆ. ಆ ವ್ಯಕ್ತಿ ಯಾರು ಏನು ಅಂತ ನಮಗೂ ಕೆಲವೊಮ್ಮೆ ಗೊತ್ತಿರಲ್ಲ.
ಆ ಮೂರನೇ ವ್ಯಕ್ತಿ ನಮ್ಮ ಜೊತೆಯೇ ಇರಬಹುದು. ಏಕೆಂದರೆ ಒಬ್ಬೊಬ್ಬರಿಗೆ ಎರಡೆರಡು ಶೇಡ್‌ಗಳಿರಬಹುದು. ಒಬ್ಬರು ಒಂದು ವಿಚಾರವನ್ನು ಮುಂದೆ ಒಂದು ರೀತಿ, ಹಿಂದೆ ಇನ್ನೊಂದು ಮಾತನಾಡುತ್ತಾರೆ. ಅದು ಸಹಜ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ. ಆದರೆ, ತಮ್ಮ ಜೀವನದಲ್ಲಿ ಹುಳಿಹಿಂಡಲು ಬಂದ ಆ ಮೂರನೇ ವ್ಯಕ್ತಿ ಯಾರು ಎಂಬುದನ್ನು ಚಂದನ್ ಬಹಿರಂಗಪಡಿಸಿಲ್ಲ.