FactCheck:ಹಿಂದೂ ದೇವರ ಮಂತ್ರ ಹೇಳಿ ನಾನು ಬದುಕಿಬಿಟ್ಟೆ, ಅಹಮದಾಬಾದ್ ವಿಮಾನ ದುರಂತದಲ್ಲಿ ಬದುಕುಳಿದವನ ಮಾತು
Jun 14, 2025, 10:45 IST

ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಪವಾಡಸದೃಶವಾಗಿ ಬದುಕುಳಿದ 40 ವರ್ಷದ ಬ್ರಿಟಿಷ್-ಭಾರತೀಯ ವ್ಯಕ್ತಿ ವಿಶ್ವಾಸ್ ಕುಮಾರ್ ರಮೇಶ್, ದೂರದರ್ಶನಕ್ಕೆ ಆಸ್ಪತ್ರೆಯಿಂದಲೇ ಸಂದರ್ಶನ ನೀಡಿದ್ದಾರೆ. ಅಪಘಾತದಲ್ಲಿ ತಾವು ಬದುಕುಳಿದಿರುವುದಕ್ಕೆ ವಿಶ್ವಾಸ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ನಾನು ಇನ್ನೂ ದಿಗ್ಭ್ರಮೆಯಲ್ಲಿದ್ದೇನೆ. ವಿಮಾನ ನೆಲಕ್ಕಪ್ಪಳಿಸಿದಾಗ ನಾನು ವಿಮಾನದಲ್ಲೇ ಇದ್ದೆ. ಆದರೆ ಮುಂದೇನಾಯ್ತು ಎಂಬುದು ಸ್ಪಷ್ಟವಾಗಿ ನೆನಪಿಲ್ಲ. ಭಾರೀ ಸ್ಫೋಟ ಮತ್ತು ಹೊಗೆಯಲ್ಲಿ ಯಾರು ಎಲ್ಲಿದ್ದಾರೆ ಎಂಬುದೇ ಕಾಣುತ್ತಿರಲಿಲ್ಲ. ನಾನು ಬದುಕುಳಿದಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ ಎಂದು ವಿಶ್ವಾಸ್ ಕುಮಾರ್ ಹೇಳಿದ್ದಾರೆ.
<a href=https://youtube.com/embed/5sQmW0UB5Oo?autoplay=1&mute=1><img src=https://img.youtube.com/vi/5sQmW0UB5Oo/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ವಿಮಾನ ನೆಲಕ್ಕಪ್ಪಳಿಸಿ ಸ್ಫೋಟಗೊಂಡಾಗ ನಾನು ನನ್ನ ಸೀಟಿನಲ್ಲಿ ಭದ್ರವಾಗಿ ಕುಳಿತಿದ್ದೆ. ಅದು ಕೆಳಕ್ಕೆ ಬೀಳುವ ರಭಸ ನೋಡಿ ನಾನು ಬದುಕುಳಿಯಲಾರೆ ಎಂಬ ಭಾವನೆ ನನ್ನನ್ನು ಆವರಿಸಿತ್ತು. ಆದರೆ ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳ ಬಳಿಕ ಕಣ್ಣು ತೆರೆದಾಗ ನಾನು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದಿದ್ದೆ. ಈ ಕ್ಷಣದವರೆಗೂ ನಾನು ಬದುಕಿದ್ದೇನೆ ಎಂಬುದನ್ನು ನನ್ನಿಂದ ನಂಬಲಾಗುತ್ತಿಲ್ಲ ಎಂದು ವಿಶ್ವಾಸ್ ಕುಮಾರ್ ಭಾವನಾತ್ಮಕವಾಗಿ ಹೇಳಿದ್ದಾರೆ.
ಇನ್ನು ನಾನು ಪ್ರತಿದಿನ ಶಿವಮಂತ್ರ ಕೇಳುತ್ತಿದ್ದೆ. ಅದರಿಂದ ನನಗೆ ಬದುಕುಳಿಯಲು ಸಾಧ್ಯವಾಯಿತು.ಅಪಘಾತ ಸಂಭವಿಸಿದ ಕೆಲ ಕ್ಷಣಗಳ ಬಳಿಕ ನಾನು ನನ್ನ ಸೀಟ್ ಬೆಲ್ಟ್ ತೆರೆದು ಹೊರಗೆ ಬಂದೆ. ದಟ್ಟ ಹೊಗೆಯಲ್ಲಿ ಬಾಗಿಲನ್ನು ಹುಡುಕಿ ಹೊರಬರುವಾಗ ಇಬ್ಬರು ಗಗನಸಖಿಯರು ನನ್ನ ಕಣ್ಣ ಮುಂದೆಯೇ ಪ್ರಾಣಬಿಟ್ಟರು.
ಈ ದುರಂತದಲ್ಲಿ ನನ್ನ ಸಹಪ್ರಯಾಣಿಕರೆಲ್ಲರೂ ಮೃತಪಟ್ಟಿದ್ದಾರೆ ಎಂದು ತಿಳಿದು ನನಗೆ ತೀವ್ರ ದುಃಖವಾಗಿದೆ ಎಂದು ಹೇಳುವಾಗ ವಿಶ್ವಾಸ್ ಕುಮಾರ್ ಕಣ್ಣಂಚು ಒದ್ದೆಯಾಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.