FactCheck:ಮುದ್ದಾದ ಮೊಮ್ಮಗನಿಗೆ ಹಳೆ ಕಾಲದ ಹೆಸರಿಟ್ಟ ಸುಮಲತಾ, ಫಿದಾ ಆದ ಕರುನಾಡ ಜನತೆ
Mar 18, 2025, 07:07 IST

ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನ ನಾಮಕರಣ ಶಾಸ್ತ್ರ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ.ಅಭಿಷೇಕ್ ಅಂಬರೀಶ್ ಅವರು ತಮ್ಮ ಮಗನಿಗೆ ಅಪ್ಪನ ಹೆಸರಿಟ್ಟಿದ್ದಾರೆ. ಅಭಿಷೇಕ್ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ.ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೂಲ ಹೆಸರು ಅಮರನಾಥ್ ಅನ್ನೋದಾಗಿತ್ತು. ಈ ಹಿನ್ನೆಲೆಯಲ್ಲಿ ಅಭಿಷೇಕ್ ಅಂಬರೀಶ್ ಅವರು ತಮ್ಮ ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಟ್ಟಿದ್ದಾರೆ.
ಖಾಸಗಿ ಹೋಟೆಲ್‌ನಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಸುಮಲತಾ ಮೊಮ್ಮಗನಿಗೆ ನಾಮಕರಣ ಶಾಸ್ತ್ರ ನೆರವೇರಿದೆ. ಆಪ್ತವಲಯದವರು ಹಾಗೂ ಕುಟುಂಬಸ್ಥರಿಗೆ ಮಾತ್ರ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು.2024ರ ನವೆಂಬರ್ 12ರಂದು ಅಭಿಷೇಕ್-ಅವಿವಾಗೆ ಗಂಡು ಮಗು ಜನಿಸಿತ್ತು. ಅ ಅನ್ನೋ ಹೆಸರಿನಲ್ಲೇ ಮಗುವಿಗೆ ಹೆಸರಿಡೋ ಪ್ಲಾನ್ ಕುಟುಂಬಸ್ಥರಲ್ಲಿ ಇತ್ತು. ಅಂಬರೀಶ್ ಅವರ ಹೆಸರಿಡೋ ಬಗ್ಗೆಯೂ ಚರ್ಚಿಸಿದ್ದ ಕುಟುಂಬಸ್ಥರು ಅಂತಿಮವಾಗಿ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ
ಮದರ್ ಇಂಡಿಯಾ ಸುಮಲತಾ ಜೊತೆ ನಟ ದರ್ಶನ್ ಮುನಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳಿಂದಲೇ ಹರಿದಾಡ್ತಿದೆ. ಆಪ್ತರನ್ನು ಅನ್ಫಾಲೋ ಮಾಡಿದ ನಟ ದರ್ಶನ್ ಅವರು ಅಂಬಿ ಫ್ಯಾಮಿಲಿಯಿಂದಲೂ ದೂರವಾಗಿದ್ದಾರೆ ಎನ್ನಲಾಗ್ತಿದೆ. ಸುಮಲತಾ ಮೊಮ್ಮಗನ ನಾಮಕರಣ ಶಾಸ್ತ್ರದಲ್ಲಿ ಜೋಡೆತ್ತು ನಾಪತ್ತೆಯಾಗಿದೆ. ನಟ ದರ್ಶನ್ ನಾಮಕರಣ ಶಾಸ್ತ್ರಕ್ಕೆ ಬರುವ ಸಾಧ್ಯತೆ ತೀರ ಕಡಿಮೆ ಎನ್ನಲಾಗ್ತಿತ್ತು. ಅದರಂತೆ ದರ್ಶನ್ ಆಗಲಿ ಅವರ ಕುಟುಂಬವಾಗಲಿ ಬಂದಿಲ್ಲ.
ಇನ್ನು ಅಭಿಷೇಕ್ ಅಂಬರೀಶ್ ಪುತ್ರನ ನಾಮಕರಣ ಸಮಾರಂಭಕ್ಕೆ ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಸುದೀಪ್ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅಂಬಿ ಪುತ್ರನಿಗಾಗಿ ಕಿಚ್ಚ ಸುದೀಪ್ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಸುದೀಪ್ ತಂದ ಗಿಫ್ಟ್ ನೋಡಿ ಸುಮಲತಾ ಸಂತಸ ವ್ಯಕ್ತಪಡಿಸಿದ್ದಾರೆ.
2023ರಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಮದುವೆ ಆದ ವರ್ಷದ ಬಳಿಕ, ಅಭಿಷೇಕ್ - ಅವಿವಾ ಗಂಡು ಮಗುವನ್ನು ಬರಮಾಡಿಕೊಂಡರು. ಇದೀಗ ಅಭಿಷೇಕ್ ಅಂಬರೀಶ್ ಮಗನ ನಾಮಕರಣ ಶಾಸ್ತ್ರ ನೆರವೇರಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.