FactCheck:ಬೆಂಗಳೂರಿನ ಕಾಲ್ತುಳಿತಕ್ಕೆ ಬಂಪರ್ ಆಫರ್ ಕೊಟ್ಟ ವಿರಾಟ್ ಕೊಹ್ಲಿ, ಅಸಲಿಯತ್ತು ಇ ಲ್ಲಿದೆ
Jun 11, 2025, 12:38 IST

ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ಆರ್‌ಸಿಬಿ 18 ವರ್ಷಗಳ ನಂತರ ಕಪ್ ಎತ್ತಿದೆ. ಆದರೆ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ ಗೆಲುವಿನ ನಗೆಯನ್ನೇ ಕಿತ್ತುಕೊಂಡಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರನ್ನು ಅಮಾನತು ಮಾಡಲಾಗಿದೆ.
ಹೌದು.. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದ ದುರಂತದ ನಂತರ, ಆರ್‌ಸಿಬಿ ಮ್ಯಾನೇಜ್ಮೆಂಟ್, ಇವೆಂಟ್ ಆರ್ಗನೈಸರ್ ಆದ ಡಿಎನ್ಎ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೆಲವು ಅಧಿಕಾರಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಬಂಧನಕ್ಕೆ ಆಗ್ರಹಿಸಿ ನೆಟ್ಟಿಗರು ಅಭಿಯಾನ ಶುರು ಮಾಡಿದ್ದಾರೆ.
<a href=https://youtube.com/embed/VKvJpY7SNHE?autoplay=1&mute=1><img src=https://img.youtube.com/vi/VKvJpY7SNHE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
18 ವರ್ಷಗಳ ಬಳಿಕ IPL ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿ ವಿಜಯೋತ್ಸವ ಆಚರಿಸಬೇಕಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಕಾಲ್ತುಳಿತ ಸಂಭವಿಸಿ 11 ಜನ ಅಭಿಮಾನಿಗಳು ಸಾವನ್ನಪ್ಪಿ 40 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಕಾಲ್ತುಳಿತದ ನಂತರ ವಿರಾಟ್ ತಮ್ಮ X ಖಾತೆಯಲ್ಲಿ ಸಂತಾಪ ವ್ಯಕ್ತಪಡಿಸಿದ್ದರು. ಈ ಕುರಿತಾಗಿ ಹೆಚ್ಚಿಗೆ ಏನೂ ಮಾತನಾಡಲುತಿಳಿಯುತ್ತಿಲ್ಲ, ವಿಜಯೋತ್ಸವದ ಕಾರ್ಯಕ್ರಮ ಆಯೋಜಕರು ಆಹ್ವಾನಿಸಿದ್ದರಿಂದ ಹೋಗಿದ್ದೆವು ಅದೇ ಇಷ್ಟರಮಟ್ಟಿಗೆ ಅಭಿಮಾನಿಗಳ ಜೀವಕ್ಕೆ ತೊಂದರೆ ತರುತ್ತದೆ ಗೊತ್ತಿದ್ರೆ ಹೋಗುತ್ತಿರಲಿಲ್ಲ ಎನ್ನುವ ರೀತಿಯಲ್ಲಿ ಹೇಳಿದ್ದಾರೆ. ಇದೀಗ ಇದೇ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.