ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಇಹಲೋಕ, ಅಭಿಮಾನಿಗಳಲ್ಲಿ ಬೇಸರ

 

ಇತ್ತೀಚಿನ ದಿನಗಳಲ್ಲಿ ಹಲವಾರು ಕಲಾವಿದರು ಇನ್ನಿಲ್ಲಾವಾಗಿದ್ದಾರೆ. ಕೆಲವರು ಅರೋಗ್ಯ ಸ್ಥಿತಿ ಗಂಭೀರವಾಗಿ ಇನ್ನಿಲ್ಲವಾದರೆ ಕೆಲವರು ಖಿನ್ನತೆಗೆ ಒಳಗಾಗಿ ಇನ್ನಿಲ್ಲವಾಗಿದ್ದಾರೆ ಹೌದು ಇದೀಗ ಬಾಲಿವುಡ್‌ ನ ಸಿಂಗಂ ಸೇರಿದಂತೆ ಹಲವಾರು ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ರವೀಂದ್ರ ಬೆರ್ಡೆ ಅವರು ಬುಧವಾರ ಅಂದರೆ ಡಿಸೆಂಬರ್‌ 13 ಹೃದಯಾಘಾತದಿಂದ ನಿಧನರಾಗಿರಾಗಿದ್ದಾರೆ.

ಮುಂಬೈನ ಆಸ್ಪತ್ರೆಯಲ್ಲಿ ಗಂಟಲು ಕ್ಯಾನ್ಸರ್‌ ಗೆ ಚಿಕಿತ್ಸೆ ಪಡೆಯುತ್ತಿದ್ದ ನಟ ಬೆರ್ಡೆ ಕೆಲವು ದಿನಗಳ ಹಿಂದಷ್ಟೇ ಆಸ್ಪತ್ರೆಯಿಂದ ಡಿಸ್‌ ಚಾರ್ಜ್‌ ಆಗಿದ್ದರು ಎಂದು ಕುಟುಂಬದ ಮೂಲಗಳು ಹೇಳಿವೆ. ರವೀಂದ್ರ ಬಿರ್ಡೆ ಹಿರಿಯ ನಟ ದಿ.ಲಕ್ಷ್ಮಿಕಾಂತ್‌ ಬೆರ್ಡೆ ಅವರ ಸಹೋದರ. ಇನ್ನು ಇವರಿಗೆ 78 ವರ್ಷ ವಯಸ್ಸಾಗಿತ್ತು.

ವರದಿಯ ಪ್ರಕಾರ, ಕೆಲವು ತಿಂಗಳ ಹಿಂದೆ ಬೆರ್ಡೆ ಅವರಿಗೆ ಗಂಟಲು ಕ್ಯಾನ್ಸರ್‌ ಆಗಿರುವುದು ಪತ್ತೆಯಾಗಿತ್ತು. ನಂತರ ಮುಂಬೈನ ಟಾಟಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನಗಳ ಹಿಂದಷ್ಟೇ ಅವರು ಆಸ್ಪತ್ರೆಯಿಂದ ಡಿಸ್‌ ಚಾರ್ಜ್‌ ಆಗಿದ್ದರು. ಆದರೆ ಬುಧವಾರ ದಿಢೀರನೆ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿರುವುದಾಗಿ ತಿಳಿಸಿದೆ.

ರವೀಂದ್ರ ಬೆರ್ಡೆ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಇಂದು ಮುಂಬೈನಲ್ಲಿ ಬೆರ್ಡೆ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಇನ್ನು ಇವರ ಸಾವಿಗೆ ಚಿತ್ರರಂಗದ ಹಲವಾರು ಕಲಾವಿದರು ಕಂಬನಿ ಮಿಡಿದಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.