ಮಾಡಿದ ಕೆಲಸಕ್ಕೆ ಹಣ ಕೊಡದೆ ಸತಾಯಿಸಿದ ನಿಮಾ೯ಪಕನಿಗೆ ಪಟಪಟ ಹೊಡೆದ ಖ್ಯಾತ ನಟಿ
Jul 28, 2025, 20:39 IST
ಕರಣ್ ಸಿಂಗ್ ಚೌಹಾಣ್ ಸಹ ನಿರ್ಮಾಣದ ಸೋಲಾಂಗ್ ವ್ಯಾಲಿ' ಚಿತ್ರ ಜುಲೈ 25 ರಂದು ಬಿಡುಗಡೆಯಾಗಿದೆ. ಈ ಹಿನ್ನೆಲೆ..ತಮ್ಮ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ತಿರುವ ಪ್ರತಿಕ್ರಿಯೆಯನ್ನು ತಿಳಿಯಲು ಕರಣ್ ಸಿಂಗ್ ಚೌಹಾಣ್ ತಮ್ಮ ಮತ್ತೊಬ್ಬ ಸಹ ನಿರ್ಮಾಪಕ ಮತ್ತು ಚಿತ್ರದ ನಿರ್ದೇಶಕ ಮನ್ ಸಿಂಗ್ ಜೊತೆ ಮುಂಬೈನ ಮಲ್ಟಿಪ್ಲೆಕ್ಸ್ ಗೆ ಹೋಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ನಟಿಯಾಗಿ ಗುರುತಿಸಿಕೊಂಡಿರುವ ರುಚಿ ಗುಜ್ಜರ್ ತಮ್ಮ ಹಣವನ್ನು ಹೇಗಾದರೂ ಮಾಡಿ ಮರಳಿ ಪಡೆಯುವ ಉದ್ದೇಶದಿಂದ ನಿಮಾ೯ಪಕನ ವಿರುದ್ಧ ಆ ಮಲ್ಟಿಪ್ಲೆಕ್ಸ್ ನಲ್ಲಿ ಪ್ರತಿಭಟನೆ ಮಾಡಲು ಹೋಗಿದ್ದರು.
ನಟಿಯಾಗಿ ಗುರುತಿಸಿಕೊಂಡಿರುವ ರುಚಿ ಗುಜ್ಜರ್ ಮಲ್ಟಿಪ್ಲೆಕ್ಸ್‌ನಲ್ಲಿ ಪ್ರತಿಭಟನೆ ಮಾಡಿದ್ದಾರೆ. ''ಸೋಲಾಂಗ್ ವ್ಯಾಲಿ'' ಪೋಸ್ಟರ್‌ಗೆ ಮಸಿ ಬಳೆದಿರುವುದು. ಅಲ್ಲದೇ ಕತ್ತೆಯ ಮೇಲೆ ನಿರ್ಮಾಪಕರನ್ನು ಕೂರಿಸಿರುವ ಚಿತ್ರವನ್ನ ಪ್ರದರ್ಶಿಸಿ ನಿರ್ಮಾಪಲ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರುಚಿ ಗುಜ್ಜರ್ ಮತ್ತು ಮನ್ ಸಿಂಗ್ ನಡುವೆ ವಾದ ಶುರುವಾಗಿದೆ. ಈ ಸಮಯದಲ್ಲಿ ತಾಳ್ಮೆಯನ್ನು ಕಳೆದುಕೊಂಡ ರುಚಿ ಗುಜ್ಜರ್ ಅಲ್ಲಿಯೇ ಮನ್ ಸಿಂಗ್ ಅವರ ಮೈಚಳಿ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಕರಣ್ ಸಿಂಗ್ ಚೌಹಾಣ ಮೇಲೀನ ಕೋಪದಿಂದ ಮನ್ ಸಿಂಗ್ ಅವರಿಗೆ ಚಪ್ಪಲಿಯಲ್ಲಿ ಹೊಡೆಯುವ ಪ್ರಯತ್ನ ಮಾಡಿದ್ದಾರೆ.
ಕರಣ್ ಸಿಂಗ್ ಚೌಹಾಣ್ ಈ ಹಿಂದೆ ಧಾರಾವಾಹಿಯನ್ನು ಮಾಡುವ ಮಾತನ್ನು ರುಚಿ ಗುಜ್ಜರ್ ಅವರಿಗೆ ನೀಡಿದ್ದರು. ''ಸೋನಿ'' ವಾಹಿನಿಯಲ್ಲಿ ಧಾರಾವಾಹಿ ಪ್ರಸಾರವಾಗಲಿದೆ ಎಂದು ರುಚಿ ಅವರನ್ನು ನಂಬಿಸಿ ನೀವು ನಮ್ಮ ಜೊತೆ ಧಾರಾವಾಹಿಗೆ ಹಣ ಹೂಡಿ ಸಹ ನಿರ್ಮಾಪಕಿಯಾಗಿ ಎಂದು ಹೇಳಿದ್ದರು. ಕರಣ್ ಸಿಂಗ್ ಚೌಹಾಣ್ ಮಾತುಗಳನ್ನ ನಂಬಿ ರುಚಿ ಗುಜ್ಜರ್ ಜುಲೈ 2023 ರಿಂದ ಜನವರಿ 2024ರ ನಡುವೆ ತಮ್ಮ ಸಂಸ್ಥೆಯಾದ ಎಸ್ ಆರ್ ಈವೆಂಟ್ ಮತ್ತು ಎಂಟರ್‌ಟೈನ್ಮೆಂಟ್ಸ್‌ದಿಂದ ಕರಣ್ ಸಿಂಗ್ ಚೌಹಾಣ್ ಕೇಳಿದಾಗೆಲ್ಲ ಹಣ ಕಳುಹಿಸಿದ್ದಾರೆ.
<a style="border: 0px; overflow: hidden" href=https://youtube.com/embed/4O4TVuETg2w?autoplay=1&mute=1><img src=https://img.youtube.com/vi/4O4TVuETg2w/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">
ಕರಣ್ ಸಿಂಗ್ ಚೌಹಾಣ್ ಅವರಿಗೆ ಹೆಚ್ಚು ಕಡಿಮೆ 24 ಲಕ್ಷ ಹಣವನ್ನು ನೀಡಿದ್ದಾರೆ. ಆದರೆ ಧಾರಾವಾಹಿ ಶುರುವಾಗಲೇ ಇಲ್ಲ. ಸುಳಿವು ಕೂಡ ಸಿಗಲಿಲ್ಲ. ಹೀಗಾಗಿ ಅನುಮಾನಗೊಂಡು ವಿಚಾರಿಸಲು ಶುರು ಮಾಡಿದಾಗ ಕರಣ್ ಸಿಂಗ್ ಚೌಹಾಣ್ ಬೆದರಿಕೆಯನ್ನು ಹಾಕಲು ಶುರು ಮಾಡಿದ್ದರು. ಇದೇ ವೇಳೆ ತಮ್ಮಿಂದ ಪಡೆದ ಹಣವನ್ನು ಕರಣ್ ಸಿಂಗ್ ಚೌಹಾಣ್ ''ಸೋಲಾಂಗ್ ವ್ಯಾಲಿ'' ಚಿತ್ರಕ್ಕೆ ಹೂಡಿದ್ದಾರೆ ಎನ್ನುವ ವಿಚಾರ ಕೂಡ ರುಚಿ ಗುಜ್ಜರ್‌ಗೆ ಗೊತ್ತಾಗಿತ್ತು. ಈ ಎಲ್ಲ ವಿಚಾರಗಳನ್ನು ಹಲ್ಲೆ ನಡೆಸುವ ಮುನ್ನ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ರುಚಿ ಉಲ್ಲೇಖಿಸಿದ್ದಾರೆ. ಮುಂಬೈ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 318(4), 352 ಮತ್ತು 351(2) ರ ಅಡಿಯಲ್ಲಿ ಕರಣ್ ಸಿಂಗ್ ಚೌಹಾಣ್ ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ.