ಮಗನಂತೆ ಅಪ್ಪನಿಗೂ ಆದೇ ಆಟ ಇಷ್ಟವಂತೆ, 20 ವರ್ಷಗಳ ಹಳೆಯ ವಿಚಾರ ಹಂಚಿಕೊಂಡ ತಾಯಿ

 
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಲವ್-ಸೆ*ಕ್ಸ್-ದೋಖಾ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಮತ್ತು ಅವರ ಪುತ್ರ ಕೃಷ್ಣ ಜೆ. ರಾವ್ ಇಬ್ಬರೂ ಬಂಧನಕ್ಕೊಳಗಾಗಿದ್ದಾರೆ. ಇಂದು ಬೆಳಿಗ್ಗೆ ಮೈಸೂರಿನಲ್ಲಿ, ಆರೋಪಿ ಕೃಷ್ಣ ಜೆ. ರಾವ್ ಅನ್ನು ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಗನ ಬಂಧನದ ಬೆನ್ನಲ್ಲೇ, ಆರೋಪಿಯನ್ನು ತಪ್ಪಿಸಲು ಸಹಾಯ ಮಾಡಿದ ತಂದೆ ಜಗನ್ನಿವಾಸ್ ರಾವ್ ಅವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. 
ಸದ್ಯ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಮತ್ತು ಅವರ ಮಗ ಕೃಷ್ಣ ಜೆ. ರಾವ್ ಇಬ್ಬರೂ ಬಂಧಿತರಾಗಿದ್ದು, ಈ ಪ್ರಕರಣದಲ್ಲಿ ಮುಂದಿನ ತನಿಖೆ ತೀವ್ರಗೊಂಡಿದೆ. ಇವೆಲ್ಲದರ ನಡುವೆ ಪ್ರಖ್ಯಾತ ವಾಸ್ತು ಶಾಸ್ತ್ರಜ್ಞ ಎಂದೇ ಕರೆಸಿಕೊಳ್ಳುವ ಜಗನ್ನಿವಾಸ್ ರಾವ್ ಕೂಡ ಹರಯದ ವಯಸ್ಸಿನಲ್ಲಿ ಮಗನಂತೆಯೇ ಹಲವು ಹುಡುಗಿಯರ ಜೊತೆಗೆ ಆಟ ಆಡಿಕೊಂಡಿದ್ದ ಎಂದು ತಿಳಿದುಬಂದಿದೆ. <a href=https://youtube.com/embed/x9m0chpcKOs?autoplay=1&mute=1><img src=https://img.youtube.com/vi/x9m0chpcKOs/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇದೀಗ ಅವರ ಮಗನೂ ಕೂಡ ಯುವತಿಯನ್ನು ಪ್ರೀತಿಸುವಂತೆ ನಾಟಕ ಮಾಡಿ ದೈಹಿಕ ಸಂಬಂಧ ಬೆಳೆಸಿ ಮಗು ಜನನಕ್ಕೆ ಕಾರಣನಾದ ಪ್ರಕರಣದಲ್ಲಿ ಜು.5ರ ಬೆಳಗ್ಗೆ ಪೊಲೀಸರು ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಮೈಸೂರಿನ ಟಿ. ನರಸಿಪುರ ಪ್ರದೇಶದಲ್ಲಿ ಕೃಷ್ಣನನ್ನು ವಶಕ್ಕೆ ಪಡೆದು ಪುತ್ತೂರಿಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ.
ಕಳೆದ ಒಂದು ವಾರದಿಂದ ತಲೆಮರೆಸಿಕೊಂಡಿದ್ದ ಕೃಷ್ಣ ಜೆ. ರಾವ್ ವಿರುದ್ಧ ಹೈಸ್ಕೂಲ್ ದಿನಗಳಲ್ಲೇ ಪ್ರಾರಂಭವಾದ ಪ್ರೇಮ ಸಂಬಂಧದ ಬಳಿಕ ಸಂತ್ರಸ್ತೆ ಮೇಲೆ ದೈಹಿಕ ಶೋಷಣೆಯ ಆರೋಪ ಕೇಳಿಬಂದಿದೆ. ಇಂಜಿನಿಯರಿಂಗ್ ಓದುತ್ತಿದ್ದ ಕೃಷ್ಣ, 2024ರ ಅಕ್ಟೋಬರ್ 11ರಂದು ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮದುವೆಯಾಗುತ್ತೇನೆ ಎಂದು ನಂಬಿಸಿ ಸಂತ್ರಸ್ತೆಯೊಂದಿಗೆ ದೈಹಿಕ ಸಂಬಂಧ ಹೊಂದಿದ ಎಂಬ ಆರೋಪ ಇದೆ. 
ಮತ್ತೆ 2025ರ ಜನವರಿಯಲ್ಲಿ ಕೃಷ್ಣನಿಂದ ದೈಹಿಕ ಸಂಪರ್ಕ ನಡೆದಿದ್ದು, ಆ ಬಳಿಕ ಯುವತಿ ಗರ್ಭವತಿಯಾದ ಮಾಹಿತಿ ಹೊರಬಂದಿದೆ. ಆದರೆ, ಮದುವೆಯಾಗಲು ಕೃಷ್ಣ ನಿರಾಕರಿಸಿದ್ದಾನೆ ಎನ್ನಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಮಗ ಅಪ್ಪನನ್ನು ಮೀರಿಸುವಂತಿದ್ದಾನೆ ಅಂತ ಹೇಳಿದರೆ ತಪ್ಪಾಗಲಿಕ್ಕಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarubadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.