ಪ್ರತಾಪ್ ಹುಟ್ಟುಹಬ್ಬಕ್ಕೆ ಇಡೀ ಕರುನಾಡಿಗೆ ಉಚಿತ ಕಣ್ಣಿನ ಚಿಕಿತ್ಸೆ; ಮೆಚ್ಚಿಕೊಂಡ ಕನ್ನಡಿಗರು

 

ಬಿಗ್ ಬಾಸ್ ಮನೆಯಿಂದಾಗಿ ಇನ್ನೂ ಕೂಡ ಪ್ರಚಾರದಲ್ಲಿರುವ ಡ್ರೋನ್ ಪ್ರತಾಪ್ ಒಂದಲ್ಲ ಒಂದು ಕಾರ್ಯಗಳಿಂದ ಜನಮನ್ನಣೆ ಗಳಿಸುತ್ತಿದ್ದಾರೆ. ಹೌದು ಜೂನ್ 11 ರಂದು ನನ್ನ ಜನ್ಮದಿನದಂದು ಅವಶ್ಯಕತೆ ಇರುವ ಬಡ ಜನರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಸುಮಾರು ಐದು ಜನರ ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

ರಾಜ್‌ಕುಮಾರ್‌ ಹೇಳ್ತಾರೆ, ನೇತ್ರದಾನ ಮಹಾದಾನ ಅಂತ. ಮುಂಬರುವ ಜೂನ್‌ 11ಕ್ಕೆ ನನ್ನ ಹುಟ್ಟುಹಬ್ಬವಿದೆ. ನನ್ನ ಹುಟ್ಟುಹಬ್ಬವನ್ನು ಈ ಬಾರಿ ವಿಶೇಷವಾಗಿ ಆಯೋಜಿಸಬೇಕೆಂದುಕೊಂಡಿದ್ದೇನೆ. ಅದಕೋಸ್ಕರ ಯಾರಾದರೂ ಬಡವರಿಗೆ, ಐದು ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲು ಸಹಾಯ ಮಾಡಬೇಕೆಂದುಕೊಂಡಿದ್ದೇನೆ. 

https://youtube.com/shorts/jHOGm3y8rFE?si=Zd2pnlGcgjUVb8Bi

ನಿಮ್ಮಲ್ಲಿ ಯಾರಿಗಾದರೂ ಅವಶ್ಯಕತೆ ಇದ್ದರೆ, ನಿಮ್ಮ ಅಕ್ಕಂದಿರಿಗೆ, ಅಣ್ಣಂದಿರಿಗೆ, ತಾಯಿಗೆ ಅವಶ್ಯಕತೆ ಇದ್ದರೆ ನನ್ನನ್ನು ಸಂಪರ್ಕಿಸಬಹುದು. ಕಣ್ಣಿನ ಸಮಸ್ಯೆ ಇದ್ದು, ಹಣವನ್ನು ಭರಿಸಲಾಗದೆ ಇದ್ದವರು ಇದರ ಪ್ರಯೋಜನ ಪಡೆಯಬಹುದು. ಅವಶ್ಯಕತೆ ಇರುವವರು ನನ್ನ ಇನ್‌ಸ್ಟಾಗ್ರಾಂನಲ್ಲಿ ಮೆಸೆಜ್‌ ಮಾಡಬಹುದು, ಕಾಮೆಂಟ್‌ ಸೆಕ್ಷನ್‌ನಲ್ಲಿ ಮೆನ್ಷನ್‌ ಮಾಡಬಹುದು ಎಂದು ಡ್ರೋನ್‌ ಪ್ರತಾಪ್‌ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಹೇಳಿದ್ದಾರೆ.

ಡ್ರೋನ್‌ ಪ್ರತಾಪ್‌ ಅವರ ಈ ಕೈಂಕರ್ಯಕ್ಕೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ. ನಿಮ್ಮನ್ನು ಬಿಗ್‌ಬಾಸ್‌ನಲ್ಲಿ ಓಟ್‌ ಹಾಕಿದ್ದು ಸಾರ್ಥಕ ಆಯ್ತು ಎಂದಿದ್ದಾರೆ. ನಿಮ್ಮ ಇನಿಶಿಯೇಟಿವ್ ತುಂಬ ಇಷ್ಟ ಆಯಿತು ಸರ್. ನಿಮಗೆ ಇದರಲ್ಲಿ ಸಪೋರ್ಟ್ ಮಾಡಬೇಕೆಂದ್ರೆ ಹೆಂಗೆ ಕಾಂಟಾಕ್ಟ್ ಮಾಡೋದ್ ಸರ್? ಎಂದು ಒಬ್ಬರು ಕೇಳಿದ್ದಾರೆ. ಈ ಮೂಲಕ ಇವರ ಒಳ್ಳೆಯ ಕೆಲಸಕ್ಕೆ ಇತರರೂ ಬೆಂಬಲ ನೀಡುವ ಸೂಚನೆ ನೀಡಿದ್ದಾರೆ. 

ಬಿಗ್ ಬಾಸ್ ಅಲ್ಲಿ ನಿಂಗೆ ವೋಟ್ ಮಾಡಿದ್ದಕ್ಕೂ ಸಾರ್ಥಕ ಆಯ್ತುನಿಮಗೆ ಮಾಡಿದ ಆ ಒಂದು ವೋಟಿಗೆ ನಿಜವಾಗ್ಲು ಬೆಲೆ ಸಿಗೋದು ಇಂತಹ ಕ್ಷಣಗಳನ್ನ ಕಣ್ಣಿಂದ ನೋಡಿದಾಗ ಮಾತ್ರ ಎಂದು ಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ