ನನ್ನ ಮದುವೆ ಮಾಡ್ಕೊಳ್ಳಿ, ನಾಚಿಗೆಯಿಲ್ಲದೆ 60ರ ಸಲ್ಲು ಗೆ ಪ್ರಪೋಸ್ ಮಾಡಿದ ನ್ಯಾಷನಲ್ ಕ್ರಶ್

 

 ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಕರೆಸಿಕೊಳ್ಳುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಈಗ 58 ವರ್ಷ ವಯಸ್ಸು. ಕೆಲವು ನಟಿಯರ ಜೊತೆ ಅವರಿಗೆ ಈ ಮೊದಲು ಪ್ರೀತಿ ಚಿಗುರಿತ್ತು. ಆದರೆ ಮದುವೆ ಆಗಲೇ ಇಲ್ಲ. ಈಗಲೂ ಸಲ್ಮಾನ್ ಖಾನ್ ಅವರಿಗೆ ಮದುವೆ ಬಗ್ಗೆ ಪದೇ ಪದೇ ಪ್ರಶ್ನೆ ಎದುರಾಗುತ್ತಲೇ ಇದೆ. 

ಸದ್ಯಕ್ಕಂತಲೂ ಸಿಂಗಲ್ ಆಗಿರುವ ಅವರಿಗೆ 25ರ ಪ್ರಾಯದ ಸುಂದರಿಯೊಬ್ಬರು ಪ್ರಪೋಸ್ ಮಾಡಿದ್ದಾರೆ. ಅದು ಕೂಡ ಬಿಗ್ ಬಾಸ್ ವೇದಿಕೆಯಲ್ಲಿ. ಆದರೆ ನಟಿ ಮಾಡಿದ ಪ್ರಪೋಸ್​ ಅನ್ನು ಸಲ್ಮಾನ್​ ಖಾನ್ ರಿಜೆಕ್ಟ್ ಮಾಡಿದ್ದಾರೆ. ಹಿಂದಿ ಕಿರುತೆರೆಯಲ್ಲಿ ನಟಿ ಚಾಹತ್ ಪಾಂಡೆ ಅವರು ಖ್ಯಾತಿ ಗಳಿಸಿದ್ದಾರೆ. ಈಗ ಅವರು ಬಿಗ್ ಬಾಸ್​ 18 ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. 

ಇತ್ತೀಚೆಗಿನ ಸಂಚಿಕೆಯಲ್ಲಿ ಸಲ್ಮಾನ್​ ಖಾನ್​ ಅವರು ‘ನಿಮಗೆ ಯಾವ ರೀತಿಯ ಹುಡುಗ ಬೇಕು’ ಎಂದು ಚಾಹತ್ ಪಾಂಡೆಯನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಚಾಹತ್ ಅವರು, ‘ಕರಣ್ ವೀರ್ ಮೆಹ್ತಾ ರೀತಿ ಜಿಮ್​ಗೆ ಹೋಗಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವವರು, ಅವಿನಾಶ್ ಮಿಶ್ರಾ ರೀತಿ ಡ್ಯಾನ್ಸ್ ಮಾಡುವವರು, ವಿವಿಯನ್ ಡಿಸೇನಾ ರೀತಿ ಹೇರ್​ಸ್ಟೈಲ್ ಇರುವವರು ಬೇಕು’ ಎಂದು ಹೇಳಿದ್ದಾರೆ.

ಸರ್ ನೀವೇ ನನ್ನ ಮದುವೆ ಮಾಡಿಕೊಳ್ಳಿ’ ಎಂದು ಸಲ್ಮಾನ್ ಖಾನ್​ಗೆ ಚಾಹತ್ ಹೇಳಿದ್ದಾರೆ. ಆದರೆ ನಟಿಯ ಕಡೆಯಿಂದ ಬಂದ ಈ ಮದುವೆ ಪ್ರಪೋಸ್ ಅನ್ನು ಸಲ್ಮಾನ್​ ಖಾನ್​ ಅವರು ಒಪ್ಪಿಕೊಂಡಿಲ್ಲ. ‘ನೀವು ಹೇಳಿದ ಯಾವುದೇ ಗುಣಗಳು ನನ್ನಲ್ಲಿ ಇಲ್ಲ’ ಎಂದು ಸಲ್ಮಾನ್​ ಖಾನ್​ ಹೇಳಿದ್ದಾರೆ. ಆ ಮೂಲಕ ಅವರು ತಮಗೆ ಚಾಹತ್ ಪಾಂಡೆಯನ್ನು ಮದುವೆ ಆಗುವ ಆಸೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.