ಡಾಲಿ ಹಾಗೂ ಅಮೃತ ಸಿಹಿಸುದ್ದಿ; ಆದಷ್ಟು ಬೇಗ ಮದುವೆ ಎಂದ ಧನಂಜಯ್
Aug 27, 2024, 07:54 IST
ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮದುವೆ ಯಾವಾಗ ಆಗಲಿದ್ದೇನೆ ಎಂಬ ಬಗ್ಗೆಯೂ ಹೇಳಿದ್ದಾರೆ. ಜೊತೆಗೆ ಅವರ ಅಜ್ಜಿಯ ಆಸೆಯಂತೆ ಮದುವೆ ಆಗಬೇಕು ಎಂದಿದ್ದಾರೆ. ಡಾಲಿ ಧನಂಜಯ್ ಮದುವೆ ವಿಚಾರ ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ ಡಾಲಿ ಈ ಬಗ್ಗೆ ಅಷ್ಟೇನು ತಲೆ ಕೆಡೆಸಿಕೊಂಡಿರಲಿಲ್ಲ.
ಆಗುವ ಸಮಯ ಬಂದಾಗ ಆಗೋದು ಎಂದು ಹೇಳುತ್ತಾ ಬಂದಿದ್ದಾರೆ. ಆದರೀಗ ಅಭಿಮಾನಿಗಳ ಕುತೂಹಲದ ಪ್ರಶ್ನೆಗೆ ಡಾಲಿ ಉತ್ತರಿಸಿದ್ದಾರೆ. ಇದೀಗ ಡಾಲಿ ಮದುವೆ ವಿಚಾರವಾಗಿ ಮಾತನಾಡಿದ್ದು, ಇಷ್ಟರಲ್ಲೇ ಮದುವೆ ಆಗ್ತೀನಿ ಎಂದಿದ್ದಾರೆ. ನಾನು ಮದುವೆ ಆಗ್ಬೇಕು ಅನ್ನೋದು ನಮ್ಮ ಅಜ್ಜಿಯ ಆಸೆ. ಆದಷ್ಟು ಬೇಗ ನಾನೂ ಮದುವೆ ಆಗ್ತೀನಿ ಎಂದು ಹೇಳಿದ್ದಾರೆ.
<a href=https://youtube.com/embed/dT1cPl9cVHw?autoplay=1&mute=1><img src=https://img.youtube.com/vi/dT1cPl9cVHw/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಬಳಿಕ ಮಾತನಾಡಿದ ಅವರು, ಇಂಡಸ್ಟ್ರಿ ಬಗ್ಗೆ ಕೆಟ್ಟದಾಗಿ ಮಾತಾಡೋದು ಬಿಡಿ. ನಾವೇ ನಮ್ಮ ಇಂಡಸ್ಟ್ರಿ ಬಗ್ಗೆ ನೆಗಟಿವ್ ಆಗಿ ಮಾತಾಡಬಾರದು. ನಿರಂತರವಾಗಿ ಕೆಲಸ ಮಾಡ್ಬೇಕು. ಅದರಿಂದಷ್ಟೇ ಇಂಡಸ್ಟ್ರಿ ಉಳಿಯೋದು ಎಂದು ಹೇಳಿದ್ದಾರೆ. ಇಷ್ಟರಲ್ಲೇ ಮದುವೆ ಆಗ್ತೀನಿ ಎಂದು ಡಾಲಿ ಧನಂಜಯ್ ಹೇಳಿದ್ದಾರೆ. ಹುಟ್ಟು ಹಬ್ಬದ ದಿನ ಅಭಿಮಾನಿಗಳಿಗೆ ಈ ಸಿಹಿ ಸುದ್ದಿ ನೀಡಿದ್ದಾರೆ.
ಡಾಲಿ ಸಿನಿಮಾ ವಿಚಾರಕ್ಕೆ ಬರೋದಾದ್ರೆ. ಸದ್ಯ ಅಣ್ಣ ಫ್ರಮ್ ಮೆಕ್ಸಿಕೋ ಸಿನಿಮಾದಲ್ಲಿ ಡಾಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಜಿಂಗೋ ಸಿನಿಮಾ ಕೂಡ ಡಾಲಿ ಕೈಯಲ್ಲಿದೆ. ಇದಲ್ಲದೆ ನಾಡಪ್ರಭು ಕೆಂಪೇಗೌಡ, ಪುಷ್ಪ-2, ಉತ್ತರಖಾಂಡ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkatunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.