ದ ರ್ಶನ್ ಮನೆ ಧ್ವಂಸ ಮಾಡಲು ಸೂಚನೆ ಕೊಟ್ಟ ಸರ್ಕಾರ; ಕಣ್ಣೀ ರಿಟ್ಟ ವಿಜಯಲಕ್ಷ್ಮಿ

 

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್ ಗ್ಯಾಂಗ್ ಅನ್ನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ತನಿಖೆಯ ಮಧ್ಯೆ ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಅವರ ಮನೆಯನ್ನ ತೆರವುಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಬೆಂಗಳೂರಿನಲ್ಲಿ 2016ರ ಬೃಹತ್‌ ಮಳೆಗೆ ನೀರು ಬಂದು ಕೊಚ್ಚಿ ಹೋಗುವ ಸ್ಥಿತಿ ನಿರ್ಮಾಣವಾದಾಗ ರಾಜ ಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಕಟ್ಟಡಗಳನ್ನು ತೆರವುಗೊಳಿಸಲು ಅಂದಿನ ಸರಕಾರ ಮತ್ತು ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆ ತೀರ್ಮಾನಿಸಿದ್ದವು. ಆದರೆ ಅಲ್ಲಿಗೆ ಮಳೆಗಾಲವೂ ಮುಗಿದಿತ್ತು. ಸರಕಾರ ಮತ್ತು ಸಾರ್ವಜನಿಕರೆಲ್ಲರೂ ಈ ವಿಷಯವನ್ನು ಮರೆತೇ ಬಿಟ್ಟಿದ್ದರು.  <a href=https://youtube.com/embed/yKfXWQ3_CrQ?autoplay=1&mute=1><img src=https://img.youtube.com/vi/yKfXWQ3_CrQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌ ನಲ್ಲಿ ರಾಜ ಕಾಲುವೆ ಮೇಲೆ ಕಟ್ಟಲಾಗಿರುವ ದರ್ಶನ್‌ ಅವರ ತೂಗುದೀಪ ನಿವಾಸ, ಶಾಸಕ, ಉದ್ಯಮಿ ಶಾಮನೂರು ಶಿವಶಂಕರಪ್ಪ ಅವರ ಒಡೆತನದ ಎಸ್‌ ಎಸ್‌ ಆಸ್ಪತ್ರೆ ಸೇರಿಂದತೆ 67 ಕಟ್ಟಡಗಳನ್ನು ಪಟ್ಟಿ ಮಾಡಲಾಗಿತ್ತು. ಆದರೆ ಹಣ ಮತ್ತು ಅಧಿಕಾರದ ಪ್ರಭಾವದಿಂದಾಗಿ ಇವರೆಲ್ಲರೂ ತಮ್ಮ ತಮ್ಮ ಮನೆಗಳನ್ನು ಉಳಿಸಿಕೊಂಡಿದ್ದರು.

 ಕಟ್ಟಡಗಳನ್ನು ಕೆಡವದಂತೆ ತಡೆಯಾಜ್ಞೆ ತರಲು ಇವರಿಗೆ ಸರಕಾರವೇ ಪರೋಕ್ಷವಾಗಿ ನೆರವಾಗಿತ್ತು. ಇವರು ತಡೆಯಾಜ್ಞೆ ತಂದು 8 ವರ್ಷಗಳಾಗಿದ್ದು ಇದುವರೆಗೂ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಈದೀಗ ಬಿಬಿಎಂಪಿ ದರ್ಶನ್‌ ಸೇರಿದಂತೆ ಅನೇಕ ಮಂದಿ ಹೈಕೋರ್ಟ್‌ ನಿಂದ ತಂದಿರುವ ತಡೆಯಾಜ್ಞೆಗಳನ್ನು ತೆರವುಗೊಳಿಸಲು ಸರಕಾರ ಮುಂದಾಗಿದೆ. 

ಇದುವರೆಗೂ ತಡೆಯಾಜ್ಞೆ ನೀಡಿದ್ದ ಅವಧಿ ಎಷ್ಟು ಎಂದು ಯಾರಿಗೂ ತಿಳಿದಿರಲಿಲ್ಲ. ಈಗ ಮತ್ತೆ ಪರಿಶೀಲಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಿ ಈ ಕಟ್ಟಡಗಳನ್ನು ಧ್ವಂಸಗೊಳಿಸಲು ಬಿಬಿಎಂಪಿ ಪ್ರಯತ್ನ ನಡೆಸಲಿದೆ ಎಂದು ಖಚಿತಪಡಿಸಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.