ರಾಘು ಝಾನ್ಸಿ ಮುಖವಾಡ ಬಯಲು ಮಾಡಿದ ತಾತಾ, ರಾಘು ಮನೆಯಲ್ಲಿ ದೊಡ್ಡ ಜಗಳ
Mar 28, 2025, 13:09 IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಯಜಮಾನ ಧಾರಾವಾಹಿಯಲ್ಲಿ ಸತ್ಯದ ಮಹಾ ಸ್ಫೋಟ ಆಗುತ್ತಿದೆ. ರಾಘು ಗುಟ್ಟು ಬಯಲಾಗೋ ಟೈಮ್ ಬಂದೇ ಬಿಟ್ಟಿದೆ. ಹೌದು, ರಾಘು, ಝಾನ್ಸಿನ 30 ದಿನಗಳಿಗೆ ಕಾಂಟ್ರ್ಯಾಕ್ಟ್ ಮದುವೆ ಆಗಿರೋ ವಿಚಾರ ತಾತನ ಕಣ್ಣಿಗೆ ಬಿದ್ದಿದೆ.
ಅಷ್ಟಕ್ಕೂ ಸತ್ಯ ತಿಳಿಯೋಕೆ ರಾಘು ಮನೆಗೆ ಹೋಗಿದ್ದಾರೆ ತಾತ. ಇತ್ತ ಝಾನ್ಸಿ, ರಾಘುಗೆ ಟೆನ್ಶನ್ ಶುರುವಾಗಿದೆ. ಈ ರೋಚಕ ಸಂಚಿಕೆ ಇವತ್ತು ಪ್ರಸಾರವಾಗಲಿದೆ. ಇನ್ನೂ, ಕಲರ್ಸ್ ಕನ್ನಡದಲ್ಲಿ ಫೈಟ್ ಸೀನ್ಗಳಿಗೆ ಕಮ್ಮಿ ಇಲ್ಲ. ಸ್ಪೇಷಲಿ ನಾಯಕಿಯರೇ ಹೀರೋ ರೇಂಜ್ಗೆ ಸಾಹಸ ದೃಶ್ಯಗಳನ್ನ ಮಾಡ್ತಿದ್ದಾರೆ.
ಈ ಹಿಂದೆ ಭಾರ್ಗವಿ ಫೈಟ್ ಸೀನ್ ನೋಡಿರುತ್ತೀರಿ .ಈ ಸಾಲಿಗೆ ಝಾನ್ಸಿ ಕೂಡ ಸೇರ್ಪಡೆಯಾಗಿದ್ದಾಳೆ. ಗಂಡಸರು ಅಂದ್ರೇ ಕೆಂಡಾಕಾರೋ ಝಾನ್ಸಿ ಜಬರ್ದಸ್ತ್ ಫೈಟ್ ಮಾಡಿದ್ದಾಳೆ. ಹುಡುಗಿನ ಚುಡಾಯಿಸ್ತಿದ್ದ ಪುಂಡರಿಗೆ ಒದ್ದು ಬುದ್ದಿ ಕಲಿಸಿದ್ದಾಳೆ. ಅಷ್ಟಕ್ಕೂ ಅದು ರಾಘುವಿನ ತಂಗಿಯೇ ಆಗಿರುತ್ತಾಳೆ. ದಿನದಿಂದ ದಿನಕ್ಕೆ ಕತೆ ಟ್ವಿಸ್ಟ್ ಪಡೆಯುತ್ತಿದೆ.
ಝಾನ್ಸಿ- ರಾಘು ಕಾಂಟ್ರಾಕ್ಟ್ ಮದುವೆ ಮುಗಿಯೋಕೆ ಇನ್ನು ಕೇವಲ 10 ದಿನ ಬಾಕಿಯಿದೆ. ಇಷ್ಟರಲ್ಲಿ ಇಬ್ಬರಿಗೂ ಲವ್ ಆಗುತ್ತಾ? ತಾತ ಈ ಜೋಡಿನ ಪರ್ಮನೆಂಟ್ ಆಗಿ ಒಂದು ಮಾಡ್ತಾರಾ ನೋಡೋದಕ್ಕೆ ಯಜಮಾನ ಸೀರಿಯಲ್ ನೋಡ ಬೇಕಿದೆ. ಉತ್ತಮ ಕಥಾ ಹಂದರ ಹೊಂದಿರುವ ಈ ಧಾರವಾಹಿ ನೋಡುಗರ ಮನ ಗೆದ್ದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.