'ಲಾಟರಿಯಲ್ಲಿ 2800 ಕೋಟಿ ರೂಪಾಯಿ ಗೆದ್ದ ಅಜ್ಜ' ಮರುಕ್ಷಣವೇ ಕಾದಿತ್ತು ಶಾ.ಕ್

 

ಅದೃಷ್ಟ ಅನ್ನೋದು ಯಾವುದೇ ವ್ಯಕ್ತಿಯ ಜೀವನದಲ್ಲಿ ಎಷ್ಟೆಲ್ಲಾ ಆಟ ಆಡಿಸಿಬಿಡುತ್ತೆ ಅನ್ನೋದಕ್ಕೆ ಇಲ್ಲೊಂದು ಬೆಸ್ಟ್‌ ಎಕ್ಸಾಂಪಲ್ ಇದೆ. ಅಮೆರಿಕ ದೇಶದ ರಾಜಧಾನಿ ವಾಷಿಂಗ್ಟನ್‌ ಡಿಸಿ ನಿವಾಸಿಯೊಬ್ಬ ಬರೋಬ್ಬರಿ 340 ಮಿಲಿಯನ್ ಡಾಲರ್ ಹಣವನ್ನು ಬಹುಮಾನವಾಗಿ ಗೆದ್ದಿದ್ದ. ಭಾರತೀಯ ರೂಪಾಯಿಗಳಲ್ಲಿ ಹೇಳೋದಾದರೆ, 2,800 ಕೋಟಿ ರೂ. ಹಣವನ್ನು ಲಾಟರಿಯಲ್ಲಿ ಗೆದ್ದಿದ್ದ. ಆದರೆ, ಈ ಹಣವನ್ನು ಕೊಡೋದಕ್ಕೆ ಕಂಪನಿ ಹಿಂದೇಟು ಹಾಕ್ತಿದೆ. 

ತಾಂತ್ರಿಕ ದೋಷದಿಂದ ನಿನ್ನ ನಂಬರ್‌ಗೆ ಲಾಟರಿ ಹೊಡೆದಿದೆ ಎನ್ನುತ್ತಿದೆ! ಹೀಗಾಗಿ, ಕಂಪನಿ ವಿರುದ್ಧ ಕಾನೂನು ಸಮರಕ್ಕೆ ವ್ಯಕ್ತಿ ಮುಂದಾಗಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಬರ್ತಿಲ್ಲ ಅನ್ನೋ ರೀತಿ ಸನ್ನಿವೇಶ ಎದುರಿಸುತ್ತಿರುವ ಈ ದುರಾದೃಷ್ಟವಂತ ವ್ಯಕ್ತಿಯ ಹೆಸರು ಜಾನ್ ಚೀಕ್ಸ್.. ಈತನ ಪವರ್ ಬಾಲ್ ಲಾಟರಿ ಟಿಕೆಟ್ ಸಂಸ್ಥೆಯಿಂದ ಲಾಟರಿ ಖರೀದಿ ಮಾಡಿದ್ದ. 2023ರ ಜನವರಿ 6 ರಂದು ಈತ ಲಾಟರಿ ಟಿಕೇಟ್ ಖರೀದಿ ಮಾಡಿದ್ದ. ಆದರೆ ಲಾಟರಿ ಟಿಕೆಟ್ ಡ್ರಾ ಆಗಿ ಎಷ್ಟು ತಿಂಗಳಾದರೂ ಜಾನ್‌ಗೆ ಹಣ ಕೊಡಲೇ ಇಲ್ಲ. ಹೀಗಾಗಿ ಇದು ವಿವಾದದ ಸ್ವರೂಪದಲ್ಲಿ ಕೋರ್ಟ್‌ ಮೆಟ್ಟಿಲೇರಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.

ಲಾಟರಿ ಟಿಕೆಟ್ ಡ್ರಾ ಆದ ದಿನ ಪವರ್ ಬಾಲ್ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಜಾನ್ ಖರೀದಿ ಮಾಡಿದ್ದ ಲಾಟರಿ ಟಿಕೆಟ್‌ನ ನಂಬರ್ ಬಂದಿತ್ತು. ತುಂಬಾನೇ ಖುಷಿ ಪಟ್ಟಿದ್ದ ಜಾನ್, ಕೂಡಲೇ ತನ್ನ ಲಾಟರಿ ಟಿಕೆಟ್ ಮಾಹಿತಿಯನ್ನು ಕಂಪನಿಗೆ ರವಾನೆ ಮಾಡಿದ್ದ. ಆದರೆ, ಒಂದೆರಡು ದಿನಗಳ ಬಳಿಕ  ಲಾಟರಿ ಟಿಕೆಟ್ ಕಂಪನಿ ಉಲ್ಟಾ ಹೊಡೆಯಿತು. ನಾವು ತಪ್ಪು ನಂಬರ್ ಅನ್ನು ವೆಬ್‌ ಸೈಟ್‌ನಲ್ಲಿ ಪ್ರಕಟ ಮಾಡಿದ್ದೆವು ಎಂದು ಹೇಳಿತು. ಇದರಿಂದ ಸಿಟ್ಟಿಗೆದ್ದ ಜಾನ್, ತಾನು ಲಾಟರಿ ಟಿಕೆಟ್‌ನಲ್ಲಿ ಗೆಲುವು ಸಾಧಿಸಿದ್ದು, ಅತಿ ದೊಡ್ಡ ಜಾಕ್‌ಪಾಟ್‌ ನನಗೆ ಹೊಡೆದಿದೆ. ಹೀಗಾಗಿ ಬಹುಮಾನದ ಹಣ ನನಗೇ ಸಿಗಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಾನೆ.

ಈ ಕುರಿತು ಎನ್‌ಬಿಸಿ ವಾಷಿಂಗ್ಟನ್‌ ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಜಾನ್, ತನಗೆ ಲಾಟರಿ ಟಿಕೆಟ್ ಬಂಪರ್ ಡ್ರಾ ಆಗಿದೆ ಅನ್ನೋದು ಗೊತ್ತಾದ ಕೂಡಲೇ ವೆಬ್‌ ಸೈಟ್‌ಗೆ ಭೇಟಿ ನೀಡಿದೆ. ಅಲ್ಲಿ ಪ್ರಕಟವಾಗಿದ್ದ ನನ್ನ ನಂಬರ್‌ನ ಫೋಟೋ ತೆಗೆದುಕೊಂಡೆ. ನನ್ನ ಸ್ನೇಹಿತನ ಮನವಿ ಮೇರೆಗೆ ನಾನು ಆ ಕೂಡಲೇ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡೆ. ನಾನು ಉದ್ವಿಗ್ನತೆಗೆ ಒಳಗಾಗಲೇ ಇಲ್ಲ. ಆ ಕ್ಷಣಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಲಿಲ್ಲ. ಲಾಟರಿ ಟಿಕೆಟ್ ಡ್ರಾ ಆದ ಬಳಿಕ ಮಾಡಬೇಕಾದ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ನಾನು ನಿದ್ರೆಗೆ ಜಾರಿದ್ದೆ ಎಂದು ಜಾನ್ ತಿಳಿಸಿದ್ದಾರೆ.

ಎಲ್ಲ ಆನ್‌ಲೈನ್ ಪ್ರಕ್ರಿಯೆ ಬಳಿಕ ಬೆಳಗ್ಗೆ ಲಾಟರಿ ಟಿಕೆಟ್ ಮಾರಾಟ ಸಂಸ್ಥೆಗೆ ತೆರಳಿ ತನ್ನ ಟಿಕೆಟ್ ಕೊಟ್ಟಾಗ ಅವರು ಅದನ್ನು ವಜಾ ಮಾಡಿದರು. ಇದರಿಂದ ಸಿಟ್ಟಿಗೆದ್ದ ನಾನು ಕೋರ್ಟ್‌ ಮೊರೆ ಹೋದೆ. ಆಗ ಟಿಕೆಟ್ ಮಾರಾಟ ಸಂಸ್ಥೆಯು ತನ್ನಿಂದ ತಾಂತ್ರಿಕ ಲೋಪ ಆಗಿದೆ ಎಂದು ಹೇಳಿತು ಎಂದು ಜಾನ್ ಕಿಡಿ ಕಾರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.