ನಿದ್ದೆಯಲ್ಲಿದ್ದರು ಬಿಡಲ್ಲ; ಗಂಡ ರವೀಂದ್ರನ್ ಕೆಟ್ಟ ಚಟದ ಬಗ್ಗೆ ಹೆಂಡತಿ ಗರಂ

 
ತಮಿಳು ಕಿರುತೆರೆ ನಟಿ ಮಹಾಲಕ್ಷ್ಮಿ, ಖ್ಯಾತ ನಿರ್ಮಾಪಕ ಹಾಗೂ ಲಿಬ್ರಾ ಪ್ರೊಡಕ್ಷನ್ಸ್ ಮುಖ್ಯಸ್ಥ ರವೀಂದ್ರ ಚಂದ್ರಶೇಖರನ್ ಸಪ್ತಪದಿ ತುಳಿದ ದಿನದಿಂದ ಭಾರೀ ಸುದ್ದಿಯಾಗುತ್ತಿದ್ದಾರೆ. ಮದುವೆಯಾದಾಗಿನಿಂದಲೂ ಈ ಜೋಡಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಅಂದಹಾಗೆ ಇವರಿಬ್ಬರಿಗೂ ಇದು ಎರಡನೇ ಮದುವೆ. ಆದರೆ ಮಹಾಲಕ್ಷ್ಮಿ ಹಣಕ್ಕಾಗಿ ರವೀಂದರ್ ಜೊತೆ ಮದುವೆಯಾಗಿದ್ದಾರೆ ಎಂದೆಲ್ಲಾ ಟೀಕೆಗಳು ಆರಂಭದಲ್ಲಿ ಕೇಳಿಬಂದಿತ್ತು.
ಆದರೆ ಇವೆಲ್ಲವನ್ನೂ ಲೆಕ್ಕಿಸದ ಜೋಡಿ ಸದ್ಯ ಸುಖೀ ಜೀವನ ನಡೆಸುತ್ತಿದ್ದಾರೆ. ಇನ್ನು ಈ ಹಿಂದೆ ರವೀಂದರ್ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು. ಆಗ ಇವರಿಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಅವೆಲ್ಲವೂ ವದಂತಿಗಳಾಗಿಯೇ ಉಳಿದಿವೆ.ಮದುವೆಯಾದಾಗಿನಿಂದಲೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದ ಈ ಜೋಡಿ, ಅವುಗಳನ್ನು ಮೆಟ್ಟಿನಿಂತು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.
https://youtube.com/shorts/MpDtyM7oQvA?si=lOdY2aDk-kKcQmTu
ಈ ಮಧ್ಯೆ ಮಹಾಲಕ್ಷ್ಮಿ ಜೊತೆಗಿನ ಮದುವೆಯ ಸಂದರ್ಭದಲ್ಲಿ, ರವೀಂದರ್ ದಡೂತಿ ದೇಹವು ಭಾರೀ ಟ್ರೋಲ್ʼಗೆ ಒಳಗಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ಮದುವೆಯ ನಂತರ ಹಲವರು ಟ್ರೋಲ್ ಮಾಡಿದ್ದಾರೆ. ನಾವು ಅವರನ್ನು ನಿರ್ಲಕ್ಷಿಸಿದೆವು. ಅದರಲ್ಲೂ ನನ್ನ ಪತಿ ರವೀಂದರ್ ತೂಕ ಜಾಸ್ತಿ ಆಗಿರುವುದರಿಂದ ಕೆಲ ನೆಟಿಜನ್ ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಟ್ರೋಲ್‌ʼಗಳನ್ನು ನೋಡಿ ನನಗೆ ತುಂಬಾ ಬೇಸರವಾಯಿತು. ಟ್ರೋಲ್‌ಗಳನ್ನು ನೋಡಿದ ರವೀಂದರ್ ತೂಕ ಇಳಿಸಿಕೊಳ್ಳಲು ತುಂಬಾ ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಅದಕ್ಕೇ ನಾನು ಅವರಂತೆ ತೂಕ ಹೆಚ್ಚಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ ಎಂದಿದ್ದಾರೆ.
ಇದಕ್ಕಾಗಿ ಕೊಬ್ಬಿನಂಶ ಹೆಚ್ಚಿರುವ ಆಹಾರಗಳನ್ನೂ ತೆಗೆದುಕೊಳ್ಳುತ್ತಿದ್ದೇನೆ. ಮಧ್ಯರಾತ್ರಿಯಲ್ಲಿ ಹೆಚ್ಚು ಆಹಾರವನ್ನು ಸೇವಿಸುತ್ತೇನೆ. ಇನ್ನು ಹೀಗೆಲ್ಲಾ ತಿನ್ನುವುದರಿಂದ ನನಗೆ ಸರಿಯಾಗಿ ನಿದ್ದೆ ಬರುವುದಿಲ್ಲ. ಆದರೆ, ನಾನು ಅವರಂತೆ ಆಗಲು ನಿರ್ಧರಿಸಿದೆ. ಆಗಲಾದರೂ ಈ ಟ್ರೋಲ್‌ʼಗಳು ನಿಲ್ಲುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಮಹಾಲಕ್ಷ್ಮಿ ಹೇಳಿದ್ದಾರೆ. ಇನ್ನು ನನ್ನ ಪತಿ ಜೊತೆ ಇದ್ದು ನನ್ನ ಡಯೆಟ್ ಕೂಡ ಮಿಸ್ ಆಗುತ್ತಿದೆ. 
ಮಲಗಿದ್ದರೂ ಸಹ ನನ್ನನ್ನು ಎಬ್ಬಿಸಿ ತಿನ್ನು ಎಂದು ಒತ್ತಾಯಿಸುತ್ತಾರೆ. ಊಟ ಮಾಡಿಸುತ್ತಾರೆ. ಕಾಳಜಿ ವಹಿಸುತ್ತಾರೆ. ಇನ್ನು ನಾನು ತಿನ್ನಲು ಶುರು ಮಾಡಿದ್ರೆ ಹೊಟ್ಟೆ ತುಂಬಾ ತಿನ್ನುತ್ತಿದ್ದೇನೆ. ರವೀಂದರ್ ಅವರಂತೆ ಮುಂದೊಂದು ದಿನ ಆಗಬಹುದು ಎಂದು ನಟಿ ಹೇಳಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.