ಬಿಗ್ಬಾಸ್ ಮನೆಯನ್ನು ನಡುಗಿಸುತ್ತಿರುವ ಲಾಯರ್ ಜಗದೀಶ್ ಅವರ ಕೋಟಿ ಬೆಲೆಯ ಬಂಗಲೆ ಇದೇ ನೋಡಿ
Oct 16, 2024, 13:31 IST
ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದ ಒಂದಲ್ಲ ಒಂದು ವಿಷಯದ ಕುರಿತು ಸುದ್ದಿಯಲ್ಲಿದ್ದಾರೆ. ಇದೀಗ ತಮ್ಮ ಮನೆಯ ನಾಯಿಉ ಕುರಿತು ಲಾಯರ್ ಜಗದೀಶ್ ಅವರು ಹೇಳಿಕೊಂಡಿರುವ ವಿಚಾರ ಕೇಳಿದ್ರೆ ನೀವು ಶಾಕ್ ಆಗ್ತೀರ. ಹೌದು ಹುಟ್ಟಿನಿಂದ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಲಾಯರ್ ಜಗದೀಶ್ ಅವರು ತಮ್ಮ ಮನೆಯಲ್ಲಿ ಕೂಡ ಗನ್ ಮ್ಯಾನ್ ಗಳನ್ನು ಹೊಂದಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಎಲ್ಲರೂ ಒಂದು ಕಡೆಯಾದರೆ, ಲಾಯರ್ ಜಗದೀಶ್ ಮಾತ್ರ ನನ್ನದೆ ರೂಲ್ಸ್ ನನ್ನದೇ ಹವಾ ಎಂದು ಮನೆಯಲ್ಲಿಯವರನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ.ನಾನೆ ಸಿಂಹ ಎನ್ನುತ್ತಾ ಮನೆಯವರ ಮೇಲೆ ಘರ್ಜಿಸುತ್ತಿದ್ದಾರೆ. ಹೀಗಿರುವಾಗ ಬಿಗ್‌ಬಾಸ್ ಮನೆಯಲ್ಲಿ ತನ್ನನ್ನು ತಾವೇ ಸಿಂಹ ಎಂದು ಕರೆದುಕೊಂಡಿರುವ ಲಾಯರ್ ಜಗದೀಶ್ ಅವರು, ಇದೀಗ ತಮ್ಮ ಮನೆಯ ನಾಯಿಯ ಕುರಿತ ಶಾಕಿಂಗ್ ಇನ್‌ಫಾರ್ಮೇಶನ್ ಬಿಚ್ಚಿಟ್ಟಿದ್ದಾರೆ.
ಇನ್ನೂ, ಬಿಗ್‌ಬಾಸ್‌ನಲ್ಲಿ ನಡೆಯುತ್ತಿರುವ ಬೆಲವಣಿಗೆಗಳನ್ನು ನೋಡುವುದಾದರೆ ಕ್ಯಾಪನ್ಸಿ ಆಯ್ಕೆ ನಡೆದು ಮುಗಿದಿದೆ, ತಮಗೆ ಕ್ಯಾಪ್ಟನ್ಸಿ ಸಿಗಲಿಲ್ಲ ಎಂಬ ಕೋಪದಿಂದ ಲಾಯರ್ ಜಗದೀಶ್, ನಾನು ಹೇಳಿದ್ರೆ ಈಗಲೂ ಹೆಲಿಕಾಪ್ಟರ್‌ನಿಂದ ಊಟ ತಂದು ಕೊಟ್ಟು ಹೋಗುತ್ತಾರೆ, ನನಗಿರುವ ತಾಕತ್ತಿನ ಬಗ್ಗೆ ನಿಮಗ್ಯಾರಿಗೂ ಗೊತ್ತಿಲ್ಲ, ನಮ್ಮ ಮನೆಯಲ್ಲಿರುವ ನಾಯಿಗೂ ಕೂಡ ನಾನು 1 ಲಕ್ಷ ರೂ, ಖರ್ಚು ಮಾಡುತ್ತೇನೆ ವಾಚ್ ಮ್ಯಾನ್ ಗಳಿಗೆ ತಿಂಗಳಿಗೆ 30 ಸಾವಿರ ಸಂಬಳ ಕೊಡ್ತೇನೆ ಎಂದಿದ್ದಾರೆ.
<a href=https://youtube.com/embed/MhDhv84vsvs?autoplay=1&mute=1><img src=https://img.youtube.com/vi/MhDhv84vsvs/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಈ ರೀತಿ ದಿನಕ್ಕೊಂದು ವಿಷಯದ ಕುರಿತು ಲಾಯರ್ ಜಗದೀಶ್ ಮೆನೆಯವರ ಮೇಲೆ ಖ್ಯಾತೆ ತೆಗೆಯುತ್ತಾ ಸದ್ದು ಮಾಡುತ್ತಿದ್ದಾರೆ. ಇನ್ನೊಂದೆಡೆ ನನಗೆ ಇಲ್ಲಿ ಇರೋಕೆ ಇಷ್ಟ ಆಗುತ್ತಿಲ್ಲ ಎಂದ ಲಾಯರ್ ಜಗದೀಶ ಅವರನ್ನು ಕನ್‌ಫೆಶನ್ ರೂಮ್‌ಗೆ ಕರೆದು ಬಿಗ್‌ಬಾಸ್ ಖಡಕ್ ಆಗಿಯೇ ವಾರ್ನಿಂಗ್ ಕೊಟ್ಟಿದ್ದಾರೆ.ಅಷ್ಟೆ ಅಲ್ಲ, ನನ್ನದೆ ರೂಲ್ಸ್ ಎಂದು ಮೆರೆಯುತ್ತಿದ್ದ ಲಾಯರ್ ಜಗದೀಶ್ ಅವರಿಗೆ, ಬಿಗ್‌ಬಾಸ್ ಮನೆಯಲ್ಲಿ ಕೆಲವೊಂದು ರೂಲ್ಸ್ ಎನ್ನುವುದು ಇದೆ, ಅದನ್ನು ಎಲ್ಲರು ಫಾಲೋ ಮಾಡಲೇ ಬೇಕು ಎಂದಿದ್ದಾರೆ.
ಹೀಗೆ ಕನ್‌ಫೆಶನ್ ರೂಮ್‌ಗೆ ಕರೆದು ಕ್ಲಾಸ್ ತೆಗೆದುಕೊಂಡ ನಂತರ ರೂಟ್‌ಗೆ ಬಂದಿರುವ ಲಯರ್ ಜಗದೀಶ್, ನಾನು ಎಲ್ಲಿಗೂ ಹೋಗುವುದಿಲ್ಲ, ಇಲ್ಲಿಯೇ ಇರುತ್ತೇನೆ ಎಂದು ರೂಟ್‌ಗೆ ಬಂದಿದ್ದಾರೆ. ಆದರೆ ಸ್ವಿಮ್ಮಿಂಗ್ ಪೂಲ್, ಬಾಡಿ ಗಾರ್ಡ್, ಗನ್ ಮ್ಯಾನ್ ಅವರನ್ನೆಲ್ಲ ಇಟ್ಟುಕೊಂಡೇ ಸುತ್ತುತ್ತಿದ್ದ ಇವರೀಗ ಒಂದೇ ಮನೆಯಲ್ಲಿ ಇರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.