ಅಯೋಧ್ಯೆಯಲ್ಲಿ ಶ್ರೀರಾಮನ ಲಡ್ಡು ತಯಾರಿಕೆ ಹೇಗಿದೆ ಗೊ ತ್ತಾ, ತಿರುಪತಿ ತಿಮ್ಮಪ್ಪನನ್ನು ಮೀರಿಸುವಂತಿದೆ

 

ಕೋಟ್ಯಾಂತರ ಹಿಂದೂಗಳ ಹೋರಾಟ ಸಾರ್ಥಕವಾಗಿದೆ. ಬರೋಬ್ಬರಿ 500 ವರ್ಷಗಳ ಬಳಿಕ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಭಗವಾನ್ ಬಾಲರಾಮನ ಮೂರ್ತಿಗೆ ಪ್ರಾಣಪ್ರತಿಷ್ಠೆ ಮಾಡಿದ್ದಾರೆ. ಕೋಟ್ಯಾಂತರ ಭಕ್ತಾಧಿಗಳು ಇದನ್ನು ಕಣ್ತುಂಬಿ ಕೊಂಡಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿಯೂ ಜನರು ಶ್ರೀರಾಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಶ್ರೀರಾಮನ ಜಪದಲ್ಲಿ ತೊಡಗಿದ್ದಾರೆ. 

ಮತ್ತೆ ಹಲವರು ಆನ್‌ಲೈನ್‌, ಟಿವಿಯಲ್ಲಿ ಅಯೋಧ್ಯೆಯ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ವೀಕ್ಷಿಸಿದ್ದಾರೆ.
ಇನ್ನು ಪ್ರಸಾದದ ರೂಪದಲ್ಲಿ ನೀಡಲಾಗುವ ಲಡ್ಡು ತಯಾರಿಸಲು ಅನುಭವಸ್ಥ ಅಡುಗೆಯವರಿದ್ದಾರೆ .ಲಡ್ಡು ಸೇರಿದಂತೆ ಇತರ ಸಿಹಿ ತಿಂಡಿಗಳ ತಯಾರಿಕೆಯಲ್ಲಿ 270 ರಿಂದ 620 ಜನರು ಕೆಲಸ ಮಾಡುತ್ತಾರೆ. ಹಾಗಿರುವಾಗ ಲಡ್ಡುವಿನ ತಯಾರಿಕೆಯ ವಿಶೇಷತೆ ಏನೆಂದರೆ ಶುದ್ಧ ತುಪ್ಪದಲ್ಲಿ ಇದನ್ನು ಮಾಡುತ್ತಾರೆ.

https://youtube.com/shorts/Ox1QUo6B3PY?si=D3aMpy80lspd_5pa

ಇನ್ನು ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಯ ದಿನ 151 ಕ್ವಿಂಟಾಲ್ ಅಷ್ಟು ಲಡ್ಡು ತಯಾರಿಸಿ ಭಕ್ತಾಧಿಗಳಿಗೆ ಪ್ರಸಾದದ ರೂಪದಲ್ಲಿ ವಿತರಣೆ ಮಾಡಿದ್ದಾರೆ.ಲಡ್ಡು ತಯಾರಿಕೆಗೆ ಉತ್ತಮವಾದ ಪಾಕ ವಿಧಾನ ಮತ್ತು ಅಳತೆಯ ಪ್ರಮಾಣದ ಮೇರೆಗೆ ರುಚಿ ಹೆಚ್ಚುತ್ತದೆ. ತಯಾರಿಸಿದ ಲಡ್ಡುವನ್ನು ಮುಚ್ಚಿದ ಪಾತ್ರೆಯಲ್ಲಿ ಶೇಖರಿಸಿಡಲಾಗುತ್ತದೆ. ಸರಿಸುಮಾರು 10 ರಿಂದ 15 ದಿನಗಳ ಕಾಲ ಸಂಗ್ರಹಿಸಿ ಇಡಬಹುದು.

ತಿರುಪತಿ ತಿಮ್ಮಪ್ಪನ ಬಗ್ಗೆ ಜನರಿಗೆ ಎಷ್ಟು ಭಕ್ತಿ ಇದೆಯೋ, ಅಷ್ಟೇ ಪ್ರೀತಿ ತಿರುಪತಿ ದೇಗುಲದಲ್ಲಿ ಸಿಗುವ ಲಡ್ಡು ಮೇಲೂ ಇದೆ. ತಿರುಪತಿಯಲ್ಲಿ ಸಿಗುವ ಲಡ್ಡು ವರ್ಲ್ಡ್‌ ಫೇಮಸ್ ಅಂದ್ರೂ ತಪ್ಪಾಗಕ್ಕಿಲ್ಲ. ಅದೇ ರೀತಿ ಅಯೋಧ್ಯೆಯಲ್ಲಿ ಕೂಡ ಲಡ್ಡು ತಯಾರಾಗುತ್ತಿದ್ದು ಮುಂದಿನ ದಿನಗಳಲ್ಲಿ ಭಕ್ತಾದಿಗಳ ಮನ ಗೆಲ್ಲುವುದರಲ್ಲಿ ಅನುಮಾನವಿಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.