ಅಂಬಾನಿ ಮಗನ ಮದುವೆಗೆ ಪೂಜೆ ಮಾಡಿದ್ದ ಪೂಜಾರಿಗೆ ಎಷ್ಟು ಲಕ್ಷ ಹಣ ಬಂದಿದೆ ಗೊ ತ್ತಾ

 

ಮುಖೇಶ್-ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹವು ಶತಮಾನಗಳ ಕಾಲ ನೆನಪಿನಲ್ಲಿ ಉಳಿಯುವ ರೀತಿಯಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಮದುವೆ ಸಮಾರಂಭದಲ್ಲಿ ವಿದೇಶದ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಈ ವಿವಾಹ ಮಹೋತ್ಸವಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ ಅಂಬಾನಿ ಕುಟುಂಬ, ಅತಿಥಿಗಳಿಗೆ ಅಷ್ಟೇ ಮೊತ್ತದ ಉಡುಗೊರೆ ನೀಡಿದೆ. 

ಇದೀಗ ಅನಂತ್‌ ಮತ್ತು ರಾಧಿಕಾ ಮದುವೆ ಮಾಡಿಸಿದ ಪೂಜಾರಿಯವರ ಬಗ್ಗೆ ಈಗ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಆ ಪೂಜಾರಿ ಯಾರು? ಈತನಿಗೆ ಎಷ್ಟು ದಕ್ಷಿಗೆ ನೀಡಿದ್ದಾರೆ..? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಖ್ಯಾತ ಜ್ಯೋತಿಷಿ, ಪುರೋಹಿತ, ಪಂಡಿತ್ ಚಂದ್ರಶೇಖರ್ ಶರ್ಮಾ ಅವರು ಅನಂತ್ ಅಂಬಾನಿ ಮದುವೆ ಮಾಡಿಸಿದ್ದಾರೆ. 

ಚಂದ್ರಶೇಖರ್ ಶರ್ಮಾ ಅವರು ಅಂಬಾನಿ ಕುಟುಂಬದಲ್ಲಿನ ಜರುಗುವ ಅನೇಕ ಪೂಜಾ ಕಾರ್ಯಕ್ರಮಗಳು ಮತ್ತು ಶುಭ ಕಾರ್ಯಗಳನ್ನು ಮಾಡಿಕೊಡುತ್ತಾರೆ. ಗುಜರಾತ್‌ನ ಜಮಾನಗರದಲ್ಲಿ ನಡೆದ ಅನಂತ್ ಅಂಬಾನಿ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಚಂದ್ರಶೇಖರ ಶರ್ಮಾ ಉಪಸ್ಥಿತರಿದ್ದರು. 

ಗಣೇಶ ಚತುರ್ಥಿ ಆಚರಣೆ ಸೇರಿದಂತೆ ಅಂಬಾನಿ ಕುಟುಂಬದ ಪ್ರತಿ ಸಂಭ್ರಮಾಚರಣೆಯಲ್ಲಿ ಈ ಗುರೂಜಿ ಇರುತ್ತಾರೆ. ಕೆಲವು ದಿನಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಕಾಣಿಸಿಕೊಂಡಿದ್ದರು. ಈ ಫೋಟೋದಲ್ಲಿ ನೀತಾ ಅಂಬಾನಿ, ರಾಧಿಕಾ ಮರ್ಚೆಂಟ್ ಮತ್ತು ಆಕಾಶ್ ಅಂಬಾನಿ ಕೂಡ ಇದ್ದರು. 

ಸಾಮಾನ್ಯವಾಗಿ ಪಂಡಿತ್ ಚಂದ್ರಶೇಖರ ಶರ್ಮಾ ಅವರು ರೂ. 25,000 ಶುಲ್ಕ ಪಡೆಯುತ್ತಾರೆ. ಆದರೆ, ಅನಂತ್ ಅಂಬಾನಿ ಅವರ ವಿವಾಹ ಮಹೋತ್ಸವಕ್ಕೆ ಇವರಿಗೆ ಲಕ್ಷಗಟ್ಟಲೇ ದಕ್ಷಿಣೆ ನೀಡಲಾಗಿದೆ ಎಂದು ವರದಿಯಾಗಿದೆ. ಜೊತೆಗೆ ಅವರಿಗೆ ಐಷಾರಾಮಿ ವಸತಿ ಹಾಗೂ ದುಬಾರಿ ಉಡುಗೊರೆಗಳನ್ನು ನೀಡಲಾಗಿತ್ತು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.