ದಾಖಲೆಯ‌ ಸರದಾರ ವಿರಾಟ್ ಕೊಹ್ಲಿ 10ನೇ ತರಗತಿಯಲ್ಲಿ ಸಿಕ್ಕ ಅಂಕ ಎಷ್ಟು ಗೊ ತ್ತಾ

 
ಶಾಲಾ ದಿನಗಳಿಂದಲೂ ಕ್ರಿಕೆಟ್ ಆಡುತ್ತಿರುವ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ, ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಇಂತಹ ಅಭಿಮಾನಿಗಳಿಗೆ ಕೊಹ್ಲಿಯ ಓದು, ಪಡೆದಿರುವ ಅಂಕ ಎಷ್ಟು ಎಂಬುದನ್ನು ತಿಳಿಯಲು ಕುತೂಹಲ ಇದ್ದೇ ಇರುತ್ತದೆ. 
ಈಗ ಮಿಲಿಯನ್​ಗಟ್ಟಲ್ಲೇ ಅಭಿಮಾನಿ ಬಳಗ ಹೊಂದಿರುವ​ ಕೊಹ್ಲಿ, ತಮ್ಮ ಅಭಿಮಾನಿಗಳ ಮಹದಾಸೆಯನ್ನು ನೆರವೇರಿಸಿದ್ದಾರೆ. ಹೌದು. ವಿರಾಟ್​ ತನ್ನ 10ನೇ ತರಗತಿಯ CBSE ಶಾಲೆಯಲ್ಲಿ ಕಲಿತ ಅಂಕಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಕೊಹ್ಲಿ ಓದಿದ್ದು, 12ನೇ ತರಗತಿವರೆಗೆ ಮಾತ್ರ. ಆ ಬಳಿಕ ಕೊಹ್ಲಿ ಸಂಪೂರ್ಣ ಕ್ರಿಕೆಟಿಗರಾಗಿಯೇ ಮುಂದುವರೆದರು. 
19 ವರ್ಷದ ಒಳಗಿನ ವಿಶ್ವಕಪ್‌ನಲ್ಲಿ ಭಾರತದ ನಾಯಕನಾಗಿ ತಂಡವನ್ನು ಮುನ್ನಡಸಿದ ಕಿಂಗ್​​​ ಕೊಹ್ಲಿ, ಕಪ್​ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಆ ಬಳಿಕ ಟೀಮ್​ ಇಂಡಿಯಾಗೆ ಎಂಟ್ರಿ ಕೊಟ್ಟ ಕಿಂಗ್​​​​ ದಾಖಲೆಗಳ ಒಡೆಯನಾಗಿ ಮುನ್ನುಗ್ಗುತ್ತಿದ್ದಾರೆ.ಸದ್ಯ IPL-2023ಕ್ಕೆ ತಯಾರಿ ನಡೆಸುತ್ತಿರುವ ವಿರಾಟ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ. <a href=https://youtube.com/embed/6PeslSJjugg?autoplay=1&mute=1><img src=https://img.youtube.com/vi/6PeslSJjugg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640"> ​​​​​​​
ಇದರ ನಡುವೆಯೇ ಕೊಹ್ಲಿಯ ಹತ್ತನೇ ತರಗತಿಯ ಅಂಕಪಟ್ಟಿ ಭಾರಿ ವೈರಲ್​ ಆಗುತ್ತಿದೆ. ಸೋಶಿಯಲ್ ಮೀಡಿಯಾ ‘ಕೂ’ ಖಾತೆಯಲ್ಲಿ ತಮ್ಮ SSLC ಅಂಕಪಟ್ಟಿಯನ್ನು ಕೊಹ್ಲಿ ಹಂಚಿಕೊಂಡಿದ್ದಾರೆ. 34 ವರ್ಷದ ಕೊಹ್ಲಿ 2004 ರಲ್ಲಿ 10 ನೇ ತರಗತಿ ಪೂರ್ಣಗೊಳಿಸಿದ್ದಾರೆ.
ಕಿಂಗ್ ಕೊಹ್ಲಿ ಮಾರ್ಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.​ ಅನೇಕರಿಗೆ ಸ್ಫೂರ್ತಿಯಾಗಿದೆ. ಸ್ಕೋರ್ ಕಾರ್ಡ್ ಹಂಚಿಕೊಂಡಿದ್ದಕ್ಕಾಗಿ ಅವರಿಗೆ ನೆಟಿಜನ್ಸ್​​​ ಧನ್ಯವಾದ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.