ನನಗೆ ಮದುವೆ ಆಗಿ ಎರಡು ಮಕ್ಕಳಿದ್ದಾರೆ ಸರ್, ಬಿಸಿಬಿಸಿ ಸುದ್ದಿ ಹಂಚಿಕೊಂಡ ನಟಿ ರಮ್ಯಾ
Jun 15, 2025, 12:45 IST

ನಟಿ ರಮ್ಯಾ ಅವರು ಸದ್ಯ ನಟ ಕಮಲ ಹಾಸನ್ ಪರವಾಗಿ ಬ್ಯಾಟಿಂಗ್ ಬೀಸಿ ಸುದ್ದಿಯಲ್ಲಿದ್ದಾರೆ. ತಮಿಳಿನಿಂದ ಕನ್ನಡ ಹುಟ್ಟಿತು ಎಂದು ನಟ ಕಮಲ್ ಹಾಸನ್ ಅವರು ನೀಡಿರುವ ಹೇಳಿಕೆ ವಿವಾದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಅವರ ಪರವಾಗಿ ಮಾತನಾಡಿರೋ ರಮ್ಯಾ, ಕಮಲ್ ಹಾಸನ್ ಅವರು ಅನುಚಿತವಾಗಿ ಮಾತನಾಡಿರೋದು ನಿಜವೇ.
ಆದರೆ, ಚಿತ್ರವನ್ನ ಬಹಿಷ್ಕರಿಸುವುದು ಸ್ವಲ್ಪ ಜಾಸ್ತಿ ಆಯ್ತು ಅನಿಸುವುದಿಲ್ಲವೇ? ಹಿಂದಿ ಹೇರಿಕೆಯ ವಿರುದ್ಧ ನಾವು ಒಂದಾಗಬೇಕು. ಅದಕ್ಕಾಗಿ ನಾವು ಮೊದಲು ಪರಸ್ಪರ ಗೌರವಿಸುವುದನ್ನು ಕಲಿಯಬೇಕು ಎಂದು ತಿಳಿಸುವ ಮೂಲಕ ಒಂದಷ್ಟು ಮಂದಿಯ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅವರು, ದ್ರಾವಿಡ ಭಾಷೆಗಳ ಚಾರ್ಟ್ ಅನ್ನೂ ಪೋಸ್ಟ್ ಮಾಡಿದ್ದಾರೆ.
<a href=https://youtube.com/embed/i7RSn8r589Y?autoplay=1&mute=1><img src=https://img.youtube.com/vi/i7RSn8r589Y/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಎಲ್ಲವೂ ದ್ರಾವಿಡ ಭಾಷೆಗಳ ಒಂದೇ ಕೊಂಡಿಯಡಿಯಲ್ಲಿ ಬರುತ್ತವೆ. ಆದರೆ, ನಮ್ಮಲ್ಲಿನ ಕೆಲವು ಸಾಮಾನ್ಯತೆ ಮತ್ತು ಹಂಚಿಕೆಯಾಗಿರುವ ಭಾಷಾ ವಂಶಾವಳಿ ಬೇರೆ ಇರಬಹುದು. ಅವರೆಡೂ ಶ್ರೇಷ್ಠವಲ್ಲ. ಸಂಸ್ಕೃತ ಎಲ್ಲಾ ಭಾಷೆಗಳ ತಾಯಿ ಎಂದು ಭಾವಿಸುವವರಿಗೆ ನೀವು ಕೂಡ ತಪ್ಪಾಗಿ ಕಾಣಿಸುತ್ತಿದ್ದೀರಿ. ಏಕೆಂದರೆ ಸಂಸ್ಕೃತ ಇಂಡೋ – ಆರ್ಯನ್ ಭಾಷೆ. ನಾವು ದ್ರಾವೀಡರು, ಎರಡೂ ಪರಸ್ಪರ ಭಿನ್ನ ಎಂದು ಹೇಳಿದ್ದಾರೆ.
ನನಗೆ ಗೊತ್ತಿಲ್ಲದೇ ಅದೆಷ್ಟು ಮದ್ವೆಯಾಗಿದ್ಯೋ, ಮಕ್ಕಳಾಗಿವ್ಯೋ ಗೊತ್ತಿಲ್ಲ. ವಿದೇಶಗಳಲ್ಲಿಯೂ ಮಕ್ಕಳು ಇದ್ದಾರೆ ಎನ್ನುತ್ತಲೇ ಇಂಥ ಗಾಳಿಸುದ್ದಿಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಹೆಣ್ಣುಮಕ್ಕಳಿಗೆ ಒಂದು ವಯಸ್ಸು ದಾಟಿದ ಮೇಲೆ ಸಮಾಜ ಅವರನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಒಹ್ ಇವಳಿಗೆ ಮದುವೆಯಾಗಿರಬೇಕು, ಮಕ್ಕಳು ಆಗಿರಬೇಕು ಎಂದು ತಾವೇ ಕಲ್ಪನೆ ಮಾಡಿಕೊಂಡು ನನಗೆ ಎಷ್ಟೋ ಮದುವೆ ಮಾಡಿಸಿದ್ದಾರೆ, ಮಕ್ಕಳನ್ನೂ ಮಾಡಿಸಿಬಿಟ್ಟಿದ್ದಾರೆ. ಎಂದು ನಗೆ ಬೀರಿದ್ದಾರೆ.