ಎಲ್ಲಾ ಅವಮಾನವನ್ನು ಸಹಿಸಿಕೊಂಡು ಆಕೆಯನ್ನು ಮದುವೆ ಆಗುತ್ತಿದ್ದೇನೆ; ತರುಣ್ ಸುಧೀರ್

 

ಅವಮಾನದ ಬಳಿಕವೇ ಸನ್ಮಾನ.. ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನಲ್ಲಿ ಈ ಸಲ ಮಹಾನಟಿ ಶೋನ ಜಡ್ಜ್‌, ಕಾಟೇರ ಸಿನಿಮಾ ನಿರ್ದೇಶಕ ತರುಣ್‌ ಸುಧೀರ್‌ ಆಗಮಿಸಿ, ತಮ್ಮ ಹಿಂದಿನ ದಿನಗಳ ಪಯಣ ಹೇಗಿತ್ತು ಎಂಬುದನ್ನು ಹೇಳಿಕೊಂಡರು. ಆವತ್ತು ನನಗಾದ ಅವಮಾನವೇ ನನ್ನನ್ನು ಇದೀಗ ಜಡ್ಜ್‌ ಮಾಡಿದೆ ಎಂದೂ ಒಂದಷ್ಟು ಘಟನೆಗಳನ್ನು ನೆನಪಿಸಿಕೊಂಡು ನಸುನಕ್ಕರು. ಅವರ ಈ ಹಳೇ ನೆನಪುಗಳನ್ನು ಕೆಣಕುವಂತೆ ಮಾಡಿದ್ದು ಜಗಮಗ ಜಗಪ್ಪ ಅವರ ಮಾತುಗಳು. 

ಭಾವುಕವಾಗಿಯೇ ಜಗಪ್ಪ ಅನುಭವಿಸಿದ ಅವಮಾನಗಳನ್ನು ಹೇಳಿಕೊಳ್ಳುತ್ತಿದ್ದಂತೆ, ತರುಣ್‌ ಕಿಶೋರ್‌ ಸುಧೀರ್‌ ಸಹ ಅದಕ್ಕೆ ಧ್ವನಿಯಾದರು. ಚಂದನವನ ಕಂಡ ಧೀಮಂತ ನಟರ ಸಾಲಿನಲ್ಲಿ ನಿಲ್ಲುವ, ಖಳನಟನಾಗಿಯೇ ಜನಮನಗೆದ್ದ ಹಿರಿಯ ನಟ ಸುಧೀರ್‌ ಅವರ ಕಿರಿ ಮಗ ತರುಣ್‌ ಸುಧೀರ್‌. ಅಪ್ಪ ದೊಡ್ಡ ನಟನಾದರೂ, ಸ್ಟಾರ್‌ಡಮ್‌ನಲ್ಲಿ ಬೆಳೆದರೂ, ಚಿತ್ರರಂಗದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. ಅಪ್ಪ ಹೋದ ಮೇಲಂತೂ ಅದು ಇನ್ನೂ ಕಠಿಣವಾಗಿತ್ತು.

ನಟನಾಗಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ, ಅದು ಹೆಚ್ಚು ಮನ್ನಣೆ ತಂದು ಕೊಡಲಿಲ್ಲ. ಹೀಗಿರುವಾಗ ತಮ್ಮದೇ ಆದ ಒಂದು ತಂಡ ಕಟ್ಟಿಕೊಂಡು ಸಿನಿಮಾ ನಿರ್ಮಾಣ ಮಾಡುವ ಕೆಲಸಕ್ಕಿಳಿಯುತ್ತಾರೆ. ಅಲ್ಲಿಯೂ ಚುಚ್ಚು ಮಾತುಗಳನ್ನು ಅನುಭವಿಸಿದ್ದಾರೆ. ಆದರೆ, ಅಲ್ಲಿಂದಲೇ ಗೆಲುವು ಹಳಿಗೇರಿತು. ಈ ಸೋಲಿನಿಂದ, ಅವಮಾನದಿಂದ ಹೇಗೆ ಸನ್ಮಾನದ ವರೆಗೂ ಬಂತು ಎಂಬುದನ್ನು ನಿರ್ದೇಶಕ ತರುಣ್ ಸುಧೀರ್‌ ಹೇಳಿಕೊಂಡಿದ್ದಾರೆ. ನಮ್ಮ ಇಂಡಸ್ಟ್ರಿಯದ್ದು ಪ್ಲಸೂ ಅದೇ ಮೈನಸ್ಸೂ ಅದೇ. ನಮಗೆ ಏನೇ ಆದರೂ ಅವಮಾನದಿಂದಲೇ ಶುರುವಾಗೋದು.

ಅದು ಬಿಟ್ಟರೆ ಬೇರೆ ಆಯ್ಕೆಯಿಲ್ಲ. ಅವಮಾನ ಆಗಿ ಅದಾದ ಬಳಿಕ ನಾವು ಸನ್ಮಾನಕ್ಕೆ ಬರ್ತೀವಿ. ಜಗಪ್ಪ ಕ್ಯಾಬ್‌ ಡ್ರೈವರ್‌ ಆಗಿ ಇಲ್ಲಿಯವರೆಗೂ ಬಂದಿದ್ದಾನೆ ಅಂತಲ್ಲ. ಹಿರಿಯ ಕಲಾವಿದ, ಸ್ಟಾರ್‌ ನಟ ಆಗಿರೋ ಸುಧೀರ್‌ ಮಗ ಆದವನೂ ಕೂಡ ಅದನ್ನೇ ಎದುರಿಸ್ತಾನೆ. ನಾನು ಮೊದಲಿಗೆ ರ್ಯಂಬೋ ಅಂತ ಸಿನಿಮಾ ಶುರುಮಾಡ್ತಿನಿ. ಶರಣ್‌ ಪ್ರೊಡ್ಯೂಸರ್‌ ಆಗ್ತಾನೆ. ಅಂದುಕೊಂಡಿದ್ದ ಬಜೆಟ್‌ಗೆ ದುಡ್ಡು ಸಾಕಾಗಲ್ಲ. ಇನ್ನೊಬ್ಬರು ಪ್ರೊಡ್ಯೂಸರ್‌ ಬರಬೇಕಿತ್ತು. ಅವರೂ ಬರಲ್ಲ. ಆಗ ಶರಣ್‌ ತನ್ನ ಮನೆ ಅಡ ಇಡ್ತಾನೆ. ಅದೇ ದುಡ್ಡು ತರ್ತಾನೆ. 

ಆಗ ಶೂಟಿಂಗ್‌ ಮಾಡ್ತಿದಿವಿ ಅನ್ನೋ ಖುಷಿ ನಮ್ಮೆಲ್ಲರಿಗೂ. ಹೊರಗಡೆ ಏನಾಗ್ತಿದೆ ಅಂತಾನೇ ನಮಗೆ ಗೊತ್ತಿಲ್ಲ. ಯಾವತ್ತೋ ನಮ್ಮ ಪಕ್ಕದಲ್ಲಿ ಒಬ್ಬರು ಪ್ರೊಡಕ್ಷನ್‌ ಮ್ಯಾನೇಜರ್, ನನ್ನ ಫ್ರೆಂಡ್‌ಗೆ ಫೋನ್‌ನಲ್ಲಿ ಔಟ್‌ ಸ್ಪೀಕರ್‌ ಇಟ್ಟು ಮಾತನಾಡ್ತಿದ್ರು. ಆಗ ಅವರಾಡಿದ ಮಾತು ನನಗೂ ಕೇಳಿಸಿ ಬೇಸರವಾಯಿತು ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.