ನಾನು ಇವಾಗ ಸಿಂಗಲ್, ಶರಣ್ಯ ಶೆಟ್ಟಿಗೆ ಟಾಂಗ್ ಕೊಟ್ಟ ಚಂದನ್ ಶೆಟ್ರು
Aug 15, 2024, 11:35 IST
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡಿದ್ದು, ಇಬ್ಬರು ಕೂಡ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿವೇದಿತಾ ಗೌಡ ವಿವಿಧ ಬ್ರಾಂಡ್‌ಗಳ ರಾಯಬಾರಿಯಾಗಿದ್ದು ಪ್ರಮೋಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ ಚಂದನ್ ಶೆಟ್ಟಿ ಸಿನಿಮಾ ರಂಗದಲ್ಲಿ ಮತ್ತೆ ಸಕ್ರಿಯವಾಗಿದ್ದಾರೆ. ಸಂಗೀತ ನಿರ್ದೇಶಕ, ಗಾಯಕನಾಗಿ ಹೆಸರು ಮಾಡಿರುವ ಅವರು ಈಗ ನಟನೆಯ ಕಡೆಗೂ ಗಮನ ಹರಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಚಂದನ್ ಶೆಟ್ಟಿ, ನಾನೀಗ ಸಿಂಗಲ್ ಎಂದು ನಟಿಗೆ ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಚಂದನ್ ಶೆಟ್ಟಿ ಒಂದು ಹಾಡಿಗೆ ಧ್ವನಿಯಾಗಿದ್ದು ಸಖತ್ ಹಿಟ್ ಆಗಿದೆ. ಈ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ನಟಿ ಶರಣ್ಯ ಶೆಟ್ಟಿಗೆ ನಾನೀಗ ಸಿಂಗಲ್ ಬನ್ನಿ ಡ್ಯಾನ್ಸ್ ಮಾಡಣ ಎಂದಿದ್ದಾರೆ.
<a href=https://youtube.com/embed/A4689TpzhAc?autoplay=1&mute=1><img src=https://img.youtube.com/vi/A4689TpzhAc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಮೈ ಮ್ಯಾರೇಜ್ ಈಸ್ ಫಿಕ್ಸ್ ಎನ್ನುವ ಹಾಡನ್ನು ಚಂದನ್ ಶೆಟ್ಟಿ ಹಾಡಿದ್ದು ಸಖತ್ ಸದ್ದು ಮಾಡುತ್ತಿದೆ. ನನಗೆ ಈ ಅವಕಾಶ ಕೊಟ್ಟಿದ್ದಕ್ಕೆ ನಿರ್ದೇಶಕ ಶ್ರೀನಿವಾಸ್ ರಾಜು ಅವರಿಗೆ ಧನ್ಯವಾದ ತಿಳಿಸುತ್ತೇನೆ, ಬೇರೆ ಯಾರೋ ಹಾಡಬೇಕಿತ್ತು, ಆದರೆ ಅವರು ಹಠ ಮಾಡಿ ನನ್ನಿಂದಲೇ ಹಾಡಿಸಿದ್ದಾರೆ. ಈ ಸಿನಿಮಾದ ಭಾಗವಾಗಲು ಅವಕಾಶ ಸಿಕ್ಕಿದೆ. ಅರ್ಜುನ್ ಜನ್ಯ ಅವರು ನನ್ನ ಗುರುಗಳು, ಅದ್ಭುತವಾಗಿ ಸಂಗೀತ ನೀಡಿದ್ದಾರೆ ಎಂದರು.
ಗಂಟಲು ಸಮಸ್ಯೆ ಇದ್ದ ಕಾರಣ ವೇದಿಕೆಯಲ್ಲಿ ಹಾಡಲು ಆಗಲ್ಲ ಎಂದರು. ಬಳಿಕ ಹಾಡಿಗೆ ನೃತ್ಯ ಮಾಡುವುದಾಗಿ ನಾಯಕಿ ಶರಣ್ಯ ಶೆಟ್ಟಿಯನ್ನು ಕರೆದರು. ನಾನೀಗ ಸಿಂಗಲ್ ಬಾಮ್ಮಾ ಎಂದು ಕರೆಯುವ ಮೂಲಕ ಎಲ್ಲರಲ್ಲೂ ನಗು ತರಿಸಿದರು. ಬಳಿಕ ಇಬ್ಬರೂ ಸ್ಟೆಪ್ ಹಾಕುವ ಮೂಲಕ ರಂಜಿಸಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.