ಯೌವನದ ಸಮಯದಲ್ಲಿ ಡೈರೆಕ್ಟರ್ ಮಂ ಚಕ್ಕೆ ಕರೆದಾಗ ಹೋಗಿಲ್ಲ, ಈಗ ಅವಕಾಶ ಸಿಗುತ್ತಿಲ್ಲ; ಅಶಿತಾ
Jun 29, 2025, 14:27 IST

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಆಶಿತಾ ಅವರು ತವರಿನ ಸಿರಿ,ಬಾ ಬಾರೋ ರಸಿಕ,ಚಾಂದಿನಿ,ಆಕಾಶ್ ಸಿನಿಮಾದಲ್ಲಿ ನಟಿಸಿದ್ದ ನಟಿ ರೋಡ್ ರೋಮಿಯೋ ನಂತರ ಯಾವ ಸಿನಿಮಾವನ್ನೂ ಮಾಡಲಿಲ್ಲ. ಡಾ ಶಿವರಾಜ್‌ಕುಮಾರ್ ಅವರಿಗೆ ತವರಿನ ಸಿರಿ ಪುನೀತ್ ರಾಜ್‌ಕುಮಾರ್ ಅವರಿಗೆ ಆಕಾಶ್ ಸಿನಿಮಾದಲ್ಲಿ ತಂಗಿಯಾಗಿ ನಟಿಸಿದ್ದ ನಟಿ ಆಶಿತಾ ಯಾಕೆ ಸಿನಿಮಾ ಮಾಡಲಿಲ್ಲ ಎಂದು ಇತ್ತೀಚೆಗೆ ನಿರ್ದೇಶಕ ರಘುರಾಮ್ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
2005-2006ರಲ್ಲಿ ಸಿನಿಮಾ ಕಮರ್ಷಿಯಲ್ ಆಗಲು ಶುರುವಾಯಿತು. ಸಿನಿಮಾದಿಂದ ಹೊರತಾಗಿ ಸಾಕಷ್ಟು ಉದ್ಯಮದಲ್ಲಿದ್ದವರು ಚಿತ್ರಗಳನ್ನು ಮಾಡಲು ಆರಂಭಿಸಿದರು. ನನ್ನ ಕರಿಯರ್ ಆರಂಭದಲ್ಲಿ ಏನೂ ಸಮಸ್ಯೆ ಆಗಲೇ ಇಲ್ಲ. ಜನರು ನನ್ನನ್ನು ಗುರುತಿಸಲು ಶುರುಮಾಡಿದಾಗ ನನಗೆ ಕೆಲವೊಂದು ಡಿಮ್ಯಾಂಡ್ ಮಾಡಲಾಯ್ತು. ಅದನ್ನು ನಾನು ಈಡೇರಿಸಲಿಲ್ಲ. ನಾನು ಆ ರೀತಿ ಕುಟುಂಬದಿಂದ ಬಂದೂ ಇಲ್ಲ. ನಾನು ಸಿನಿಮಾ ಮಾಡಲೇಬೇಕು ಅಂತ ಸಿನಿಮಾ ಮಾಡಲಿಲ್ಲ. ನನಗೆ ಸರಿಯಾದ ಅವಕಾಶ ಸಿಕ್ಕರೆ ನಾನು ಈಗಲೂ ಸಿನಿಮಾ ಮಾಡಲು ರೆಡಿಯಿರುವೆ ಎಂದು ನಟಿ ಆಶಿತಾ ಹೇಳಿದ್ದಾರೆ.
<a href=https://youtube.com/embed/KrTSGacF4_E?autoplay=1&mute=1><img src=https://img.youtube.com/vi/KrTSGacF4_E/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನನಗೂ ಮೀಟೂ ಅನುಭವವಾಗಿದೆ. ನಾನು ಅವರ ಬಯಕೆಗಳೆಲ್ಲ ಈಡೇರಿಸಲಿಲ್ಲ ಅಂತ ಸಿನಿಮಾ ಸೆಟ್‌ನಲ್ಲಿ ತುಂಬ ತೊಂದರೆ ಕೊಟ್ಟರು. ಗುರುತಿಸಿಕೊಂಡ ನಟಿಯಾದ ನಂತರದಲ್ಲಿ ಈ ರೀತಿ ಅನುಭವ ಆಯ್ತು. ದೊಡ್ಡ ದೊಡ್ಡ ಕಲಾವಿದರ ಜೊತೆ ನಟಿಸಿದ್ದು ಕಷ್ಟ ಆಗಲಿಲ್ಲ, ಆದರೆ ಸಿನಿಮಾ ಬಗ್ಗೆ ಜ್ಷಾನ ಇಲ್ಲದವರು ನನಗೆ ಡಿಮ್ಯಾಂಡ್ ಮಾಡುತ್ತಾರೆ ಎಂದು ನಟಿ ಆಶಿತಾ ಹೇಳಿದ್ದಾರೆ.
ಈಗಲೂ ಎಷ್ಟೋ ಜನರು ನನ್ನನ್ನು ಗುರುತಿಸಿ ನೀವು ಯಾಕೆ ಸಿನಿಮಾ ಮಾಡಬಾರದು ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಜನರು ಈಗಲೂ ಈ ಮಾತು ಹೇಳುತ್ತಾರೋ ಅದೇ ಖುಷಿ ನನಗೆ, ಅಷ್ಟು ಸಾಕು. ನಾನು ಸಿನಿಮಾ ಮಾಡಲಿಲ್ಲ ಅಂತ ನನಗೆ ನಿಜಕ್ಕೂ ಪಶ್ಚಾತ್ತಾಪ ಆಗಿಲ್ಲ ಎಂದು ನಟಿ ಆಶಿತಾ ಹೇಳಿದ್ದಾರೆ.ಚಿತ್ರರಂಗ ನನಗೆ ಅವಕಾಶ ಕೊಡತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಜನರು ಸಿನಿಮಾ ಮಾಡಿ ಅಂತ ಹೇಳುತ್ತಾರೆ. ಅದೇ ದೊಡ್ಡ ವಿಷಯ ನನಗೆ. ಎಲ್ಲಿಯವರೆಗೆ ಒಳ್ಳೆಯ ಜನರು ಸಿಕ್ಕಿದರೋ ಅಲ್ಲಿಯವರೆಗೆ ನಾನು ಸಿನಿಮಾ ಮಾಡಿದೆ. ಯಾವಾಗ ವಾತಾವರಣ ಚೆನ್ನಾಗಿರಲಿಲ್ಲವೋ ಆಗ ನಾನು ಹೊರಬಂದೆ, ಅಷ್ಟೇ ಎಂದು ನಟಿ ಆಶಿತಾ ಹೇಳಿದ್ದಾರೆ.