ಕರಿಮಣಿ ಮಾಲೀಕ ಹಾಡು ಬರೆದಿದ್ದೆ ಅವಳಿಗೋಸ್ಕರ, ನಟ ಉಪೇಂದ್ರ ಪ್ರೇಮಾ ಲವ್ ಕಹಾನಿ
Sep 19, 2024, 14:14 IST
90ರ ದಶಕದ ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದ ಪ್ರೇಮಾ.ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು. ಬಳಿಕ ತಮ್ಮ ವೈಯಕ್ತಿಕ ಜೀವನದ ಕಾರಣ ಸಿನಿರಂಗದಿಂದ ದೂರ ಉಳಿದಿದ್ದರು. ಇತ್ತೀಚಿಗೆ ಕಿರುತೆರೆ ಕಾರ್ಯಕ್ರಮಗಳು, ಸಿನಿಮಾ ಇವೆಂಟ್‌ಗಳಲ್ಲಿ ಭಾಗಿಯಾಗುತ್ತಿರುವ ನಟಿ ಪ್ರೇಮ ಸಂದರ್ಶನಗಳಲ್ಲಿಯೂ ಭಾಗಿಯಾಗುತ್ತಿದ್ದಾರೆ.
<a href=https://youtube.com/embed/daNtIW4eQaI?autoplay=1&mute=1><img src=https://img.youtube.com/vi/daNtIW4eQaI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅದೇ ರೀತಿ ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟಿ ಪ್ರೇಮಾ ತಮ್ಮ ಜೀವನದಲ್ಲಾದ ಏರಿಳಿತಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.ಮೊದಲಿಗೆ ಈ ಕರಿಮಣಿ ಮಾಲೀಕ ಯಾರು? ಎನ್ನುವ ಪ್ರಶ್ನೆಯನ್ನು ರಾಜೇಶ್ ನಟಿ ಪ್ರೇಮಾ ಅವರ ಮುಂದೆ ಇಟ್ಟಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಪ್ರೇಮಾ, ಆ ಸಿನಿಮಾ ಮಾಡಿದ ಉಪೇಂದ್ರ ಅವರೇ ಕರಿಮಣಿ ಮಾಲೀಕ. ಆ ಸಿನಿಮಾ ಬಂದಾಗ ಹಾಡು ಬಂದಾಗ ಅದು ಸ್ಲೋ ಆಗಿ ಇತ್ತು. ಈಗ ಅದನ್ನು ರೀಮಿಕ್ಸ್ ಮಾಡಿ ಬೇರೆ ತರ ಚೇಂಜ್ ಮಾಡಿದ್ದಾರೆ ಎಂದರು.
ಇನ್ನು ಆ ಸಮಯದಲ್ಲಿ ಉಪೇಂದ್ರ ಹಾಗೂ ಪ್ರೇಮಾ ಲವ್ ಇತ್ತು. ಅದಕ್ಕಾಗಿಯೇ ಹಾಡು ಬರೆಯಲಾಗಿತ್ತು ಎನ್ನುವ ಮಾತಿಗೆ ಉತ್ತರಿಸಿದ ನಟಿ ಪ್ರೇಮಾ, ನನಗೆ ಗೊತ್ತಿಲ್ಲ. ಉಪೇಂದ್ರ ಅವರ ತಲೆಯಲ್ಲಿ ಏನಿತ್ತು ಅಂತ ನನಗೆ ಗೊತ್ತಿಲ್ಲ. ಆ ಹಾಡು ಚೆನ್ನಾಗಿ ಬಂತು. ಆ ಪದಗಳಿಗೂ ಚಿತ್ರಕ್ಕೂ ಹೊಂದಿಕೆ ಆಯ್ತು ಎಂದು ಹೇಳಿದ್ದಾರೆ.
ನೋಡಿ ನಾವಿಬ್ಬರು ವಿರೋಧಿಗಳಲ್ಲ. ನಾನಾಗಲಿ ಉಪೇಂದ್ರ ಆಗಲಿ ಹಾಗೇ ಇರಲಿಲ್ಲ ನಾವು. ನಮಗೆ ಬರೀ ಕೆಲಸ ಮಾಡುವ ಹಸಿವು ಇತ್ತು. ಲವ್ ಮಾಡುವ ಬಗ್ಗೆ ತಲೆಯಲ್ಲೇ ಇರುತ್ತಿರಲಿಲ್ಲ. ನನಗೆ ಅವರ ಹಾರ್ಡ್‌ವರ್ಕ್ ಇಷ್ಟ ಆಗುತ್ತಿತ್ತು.ಉಪೇಂದ್ರ ತುಂಬಾ ಹಾರ್ಡ್‌ವರ್ಕ್ ಮಾಡುತ್ತಿದ್ದರು. ನಮ್ಮಿಬ್ಬರ ನಡುವೆ ಯಾವುದೇ ಪ್ರೀತಿ ಇರಲಿಲ್ಲ. ಜೊತೆಯಲ್ಲಿ ಎರಡು ಮೂರು ಸಿನಿಮಾಗಳಲ್ಲಿ ಕೆಲಸ ಮಾಡಿದೆವು. ಆದರೆ ನಮ್ಮ ನಡುವೆ ಅಂತಹದು ಏನು ಇರಲಿಲ್ಲ ಎಂದು ನಟಿ ಪ್ರೇಮ ಸ್ಪಷ್ಟವಾಗಿ ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.