'ನನ್ನ ಜೀವನದಲ್ಲಿ ಎರಡ ಬಾರಿ ಅಬಾರ್ಷನ್; ಕಾಮಿಡಿ ಕಿಲಾಡಿ ನಯನಾ ಸಾಯೋ ನಿರ್ಧಾರ ಮಾಡಿದ್ದು ಯಾ.ಕೆ

 

ಕಾಮಿಡಿ ಕಿಲಾಡಿಗಳು ಶೋದ ಮೂಲಕ ನಾಡಿನ ತುಂಬ ಮನೆಮಾತಾದವರು ಹಾಸ್ಯನಟಿ ಕಾಮಿಡಿ ಕಿಲಾಡಿ ನಯನಾ. ತಮ್ಮ ಆನ್‌ಸ್ಪಾಟ್‌ ಕಾಮಿಡಿ ಪಂಚ್‌ನಿಂದಲೇ ಶೋದಲ್ಲಿ ಎಲ್ಲರನ್ನು ನಗಿಸಿ ಅಳಿಸಿದ್ದ ಇದೇ ನಟಿ, ಸಾಲು ಸಾಲು ಸಿನಿಮಾ ಅವಕಾಶಗಳನ್ನೂ ಪಡೆದುಕೊಂಡಿದ್ದರು. ಇತ್ತ ಕಿರುತೆರೆಯಲ್ಲೂ ಉಧೋ ಉಧೋ ಶ್ರೀ ರೇಣುಕಾ ಎಲ್ಲಮ್ಮ ಧಾರಾವಾಹಿಯಲ್ಲೂ ನಯನಾ ನಟಿಸಿದ್ದರು.

ಆದರೆ, ಗರ್ಭಿಣಿಯಾದ ಹಿನ್ನೆಲೆಯಲ್ಲಿ ಅವರ ಪಾತ್ರವನ್ನು ಅಲ್ಲಿಗೆ ಮುಗಿಸಲಾಗಿತ್ತು. ಈಗ ಹೆರಿಗೆ ಬಳಿಕ ಮತ್ತೆ ಕಿರುತೆರೆಗೆ ಆಗಮಿಸಿದ್ದಾರೆ. ಸುವರ್ಣ ಸೂಪರ್‌ಸ್ಟಾರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಸುವರ್ಣ ಸೂಪರ್‌ ಸ್ಟಾರ್‌ ಶೋನಲ್ಲಿ ನಯನಾ ಅತಿಥಿಯಾಗಿ ಆಗಮಿಸಿದ್ದಾರೆ. ಈ ಶೋನಲ್ಲಿ ತಮ್ಮ ಜೀವನದ ಸೂಪರ್‌ಸ್ಟಾರ್‌ ಯಾರು ಎಂಬುದನ್ನೂ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ ನಯನಾ. ಅಷ್ಟಕ್ಕೂ ನಯನಾ ಜೀವನದಲ್ಲಿ ಘಟಿಸಿದ್ದೇನು? ಮದುವೆ ಬಳಿಕ ಅವರು ಎದುರಿಸಿದ ಸಮಸ್ಯೆಗಳೇನು? ಜೀವನವೇ ಬೇಸರವಾಗಿ ಸಾಯುವ ನಿರ್ಧಾರಕ್ಕೂ ಬಂದ ಹಿಂದಿನ ಅಸಲಿ ಕಥೆ ಏನು ಎಂಬ ಬಗ್ಗೆ ಅವರೇ ಹೇಳುಕೊಂಡಿದ್ದಾರೆ.

ನನ್ನ ಲೈಫಿನ ಸೂಪರ್‌ಸ್ಟಾರ್‌ ನನ್ನ ಮಗಳು. ನನ್ನ ಬದುಕೇ ಅವಳಾಗಿದ್ದಾಳೆ. ಅವಳು ನನ್ನ ಜೀವನಕ್ಕೆ ಬರಲಿಲ್ಲದಿದ್ದರೆ, ಇಷ್ಟೊತ್ತಿಗೆ ನಯನಾಳನ್ನು ಯಾರೂ ನೋಡುತ್ತಿರಲಿಲ್ಲ. ಎಲ್ಲರಿಗೂ ನಾನಾನು ನೆನಪಾಗಿ ಉಳಿದುಬಿಡ್ತಿದ್ದೆ. ನಾನು ಪ್ರಗ್ನೆಂಟ್‌ ಎಂಬುದನ್ನು ನಾನು ಖಚಿತಪಡಿಸಿಕೊಳ್ಳುವುದಕ್ಕೂ ಎರಡು ದಿನಗಳ ಮೊದಲು, ಈ ಭೂಮಿಯ ಮೇಲೆ ನಾನು ಇರಬಾರದು ಎಂದು ನಿರ್ಧಾರ ಮಾಡಿದ್ದೆ. ಈ ಜೀವನವೇ ಬೇಡ ಎಂದುಕೊಂಡಿದ್ದೆ. ಏನಾಗ್ತಿದೆ ನಿನಗೆ ಎಂದು ಯಾರಾದರೂ ಕೇಳುವವರು ಬೇಕಿತ್ತು.

ನಾನು ಯಾರಿಗಾದರೂ ಹೇಳಿಕೊಂಡರೆ, ನಿನ್ನ ತಲೆ ತುಂಬ ಬರೀ ನೆಗೆಟಿವಿಟಿ ಇದೆಯಲ್ಲ ಎಂದುಕೊಳ್ಳುವವರು. ಯಾಕೆಂದರೆ, ಇದಕ್ಕೂ ಮುಂಚೆ ಎರಡು ಅಬಾರ್ಷನ್‌ ಆದಾಗ, ಛೇ.. ಏನ್‌ ಜೀವ್ನಾ ಗುರು ಇದು! ಎಂದು ಅನಿಸಿದ್ದುಂಟು. ಓಡಾಡೋಕೆ ಕಾರಿದೆ, ಬೈಕಿದೆ ಎಲ್ಲವೂ ಇದೆ. ಆದರೆ, ಇದ್ಯಾಕೆ ನನಗೆ ಹೀಗೆ ಆಗ್ತಿದೆ" ಎಂದು ನಯನಾ ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ. ನಯನಾ ತನ್ನ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಂತೆ, ಅಲ್ಲೇ ಇದ್ದ ನಿರೂಪಕಿ ಶಾಲಿನಿ ಸಹ ಅವರ ಕಷ್ಟಕ್ಕೆ ಕರಗಿ ಸಾಂತ್ವಾನ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.