ಕಳೆದ 30 ದಿನಗಳಿಂದ ಊಟ ಮಾಡಿಲ್ಲ; 1.2ಕೋಟಿ ಸಾಲ ಇದೆ ಎಂದ ನ ಟ
Aug 15, 2024, 14:54 IST
ನಟ ಗುರುಚರಣ್ ಸಿಂಗ್ ಕೊನೆಯದಾಗಿ ಏಪ್ರಿಲ್ 22 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂಬೈಗೆ ತೆರಳಿದ್ದರು ಎನ್ನಲಾಗಿದೆ. ಆದರೆ, ಅವರು ಮುಂಬೈಗೆ ತಾವು ತಲುಪಬೇಕಾಗಿದ್ದ ಸ್ಥಳಕ್ಕೆ ತಲುಪಿಲ್ಲ. ಮನೆಗೂ ಹಿಂತಿರುಗಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ತಿಳಿದು ಬಂದಿದೆ. ನಟನ ದಿಢೀರ್ ಕಣ್ಮರೆ ಪ್ರಕರಣ ಆತಂಕ ಸೃಷ್ಟಿಸಿತ್ತು.
ತಾರಕ್ ಮೆಹ್ತಾ ಕಾ ಉಲ್ತಾ ಚಷ್ಮಾ ಟಿವಿ ಶೋದಲ್ಲಿ ರೋಶನ್ ಸಿಂಗ್ ಸೋಧಿ ಪಾತ್ರ ನಿರ್ವಹಿಸಿ ಜನಪ್ರಿಯರಾಗಿರುವ ನಟ ಗುರುಚರಣ್ ಸಿಂಗ್, ತಾವು ರೂ 1.2 ಕೋಟಿ ಸಾಲದ ಹೊರೆಯಲ್ಲಿರುವುದಾಗಿ ಹಾಗೂ ತಾವು ಕಳೆದ ಕೆಲ ತಿಂಗಳುಗಳಿಂದ ನಗರದಲ್ಲಿ ಕೆಲಸಕ್ಕಾಗಿ ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ. ನಟ ಸುಮಾರು ಒಂದು ತಿಂಗಳು ನಾಪತ್ತೆಯಾಗಿದ್ದರಲ್ಲದೆ ಜುಲೈನಲ್ಲಿ ಮುಂಬೈಗೆ ವಾಪಸಾಗಿದ್ದರು.
ಕಳೆದ ತಿಂಗಳಿನಿಂದ ಕೆಲಸಕ್ಕಾಗಿ ಹುಡುಕುತ್ತಿದ್ದೇನೆ. ಜನರು ನನ್ನನ್ನು ಇಷ್ಟಪಡುತ್ತಾರೆ ಅಂದುಕೊಂಡಿದ್ದೇನೆ. ನನ್ನ ಖರ್ಚುವೆಚ್ಚ ನಿಭಾಯಿಸಲು, ತಾಯಿಯ ಆರೈಕೆ ಮಾಡಲು ಮತ್ತು ಸಾಲ ತೀರಿಸಲು ಹಣ ಸಂಪಾದಿಸಬೇಕಿದೆ. ಒಳ್ಳೆಯ ಕೆಲಸದೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಬೇಕೆಂದಿದ್ದೇನೆ. ನಾನು ಇಎಂಐ ಮತ್ತು ಕ್ರೆಡಿಟ್ ಕಾರ್ಡ್ ಪಾವತಿ ಮಾಡಬೇಕಿದೆ. ಈಗಲೂ ಹಣಕ್ಕಾಗಿ ವಿನಂತಿಸುವ ಅಗತ್ಯ ನನಗಿದೆ.
ಕೆಲ ಒಳ್ಳೆಯ ಜನರು ಸಹಾಯ ಮಾಡುತ್ತಿದ್ದಾರೆ ಆದರೆ ಸಾಲ ಹೆಚ್ಚಾಗುತ್ತಿದೆ. ನನ್ನ ವೃದ್ಧ ಹೆತ್ತವರನ್ನು ನೋಡಿಒಳ್ಳಲು ನನಗೆ ಕೆಲಸ ಬೇಕಿದೆ, ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ. ತಾವು ಕೇವಲ ದ್ರವ ರೂಪದ ಆಹಾರ ಸೇವಿಸುತ್ತಿರುವುದಾಗಿ ಹೇಳಿರುವ ಅವರು ಕಳೆದೊಂದು ತಿಂಗಳಿಂದ ಘನ ಆಹಾರ ಸೇವಿಸುತ್ತಿಲ್ಲ. ಹಾಲು, ಚಹಾ, ಎಳನೀರು ಮಾತ್ರ ಸೇವಿಸುತ್ತಿದ್ದೇನೆ. ಕಳೆದ ಎರಡು ವರ್ಷಗಳಿಂದ ವೈಫಲ್ಯ ಮಾತ್ರ ಕಂಡಿದ್ದೇನೆ, ಎಂದು ಹೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.